ADVERTISEMENT

ಕಾಂಗ್ರೆಸ್‌ ಬೆಂಬಲಿತ ಶೇ 90 ಅಭ್ಯರ್ಥಿಗಳ ಗೆಲುವು

​ಪ್ರಜಾವಾಣಿ ವಾರ್ತೆ
Published 27 ಮೇ 2015, 4:53 IST
Last Updated 27 ಮೇ 2015, 4:53 IST

ಕಾರ್ಕಳ:  ಪ್ರಸಕ್ತ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲ ಕಡೆಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿ ಸಿದ್ದು, ಅದರಲ್ಲಿ ಶೇ 90 ರಷ್ಟು ಅಭ್ಯರ್ಥಿ ಗಳು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಹೇಳಿದರು.  

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕಾರ್ಯವಿಧಾನದಿಂದ ಜನರಲ್ಲಿ ವಿಶ್ವಾಸ ಹೆಚ್ಚಿದೆ. ರಾಜ್ಯ ಸರ್ಕಾರ ಬಡವರ ಪರ ವಾಗಿದ್ದು ಜನರಿಗೆ ಧ್ವನಿಗೆ ಧ್ವನಿಗೂಡಿ ಸುವ ಸರ್ಕಾರವಾಗಿದೆ ಎಂದರು.

ಬಡವರಿಗೆ ಉಚಿತವಾಗಿ ಹೊಟ್ಟೆ ತುಂಬಿಸುವ ಅನ್ನಭಾಗ್ಯ ಯೋಜನೆಯನ್ನು ಜನ ಮೆಚ್ಚಿದ್ದಾರೆ. ಬಿಜೆಪಿ ಸರ್ಕಾರ ಬಂದರೆ ಅದನ್ನು ನಿಲ್ಲಿಸಬಹುದು ಎಂಬ ಭಯವೂ ಜನರಲ್ಲಿದೆ. ಕಾಂಗ್ರೆಸ್ ಮುಕ್ತ ರಾಜ್ಯ ಮಾಡುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಹಸಿವು ಮುಕ್ತ ರಾಜ್ಯ ನಮ್ಮ ಗುರಿಯಾಗಿದೆ ಎಂದರು.

ರಾಜ್ಯ ಸರ್ಕಾರ ರೈತರಿಗೆ ₹ 3 ಲಕ್ಷದ ತನಕ ಬಡ್ಡಿ ರಹಿತ ಸಾಲವನ್ನೂ ನೀಡುತ್ತಿದೆ. ಹೀಗಾಗಿ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪರವಾಗಿದೆ ಎಂದರು. ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಎನ್. ಕೋಟ್ಯಾನ್, ರಾಜೇಶ್ ಶೆಣೈ, ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್,  ಕೌನ್ಸಿಲರ್ ಸುನಿಲ್ ಕೋಟ್ಯಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.