ADVERTISEMENT

ಗರಡಿಗಳು ಕೂಡ ಧಾರ್ಮಿಕ ಕೇಂದ್ರ

ಬಲ್ಯೊಟ್ಟು ಗುರುಕೃಪಾ ಸೇವಾಶ್ರಮದ ವಿಖ್ಯಾತಾನಂದ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಮೇ 2016, 6:23 IST
Last Updated 2 ಮೇ 2016, 6:23 IST
ನಾವುಂದದಲ್ಲಿ ನವೀಕೃತಗೊಂಡ ಬ್ರಹ್ಮಬೈದರ್ಕಳ ಕೋಟಿ ಚೆನ್ನಯ ಗರಡಿಯ ಪ್ರತಿಷ್ಠಾಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭೆಯನ್ನು ಹೊಸ್ಮಾರು ಬಲ್ಯೊಟ್ಟು ಗುರುಕೃಪಾ ಸೇವಾಶ್ರಮದ ವಿಖ್ಯಾತಾನಂದ ಸ್ವಾಮೀಜಿ ಉದ್ಘಾಟಿಸಿದರು. ಗೋಪಾಲ ಪೂಜಾರಿ, ಎನ್‌. ಟಿ. ಪೂಜಾರಿ, ಚೆನ್ನಕೇಶವ ಭಟ್, ಗೌರಿ ದೇವಾಡಿಗ, ಎನ್. ಕೆ. ಬಿಲ್ಲವ ಇದ್ದರು. (ಬೈಂದೂರು ಚಿತ್ರ)
ನಾವುಂದದಲ್ಲಿ ನವೀಕೃತಗೊಂಡ ಬ್ರಹ್ಮಬೈದರ್ಕಳ ಕೋಟಿ ಚೆನ್ನಯ ಗರಡಿಯ ಪ್ರತಿಷ್ಠಾಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭೆಯನ್ನು ಹೊಸ್ಮಾರು ಬಲ್ಯೊಟ್ಟು ಗುರುಕೃಪಾ ಸೇವಾಶ್ರಮದ ವಿಖ್ಯಾತಾನಂದ ಸ್ವಾಮೀಜಿ ಉದ್ಘಾಟಿಸಿದರು. ಗೋಪಾಲ ಪೂಜಾರಿ, ಎನ್‌. ಟಿ. ಪೂಜಾರಿ, ಚೆನ್ನಕೇಶವ ಭಟ್, ಗೌರಿ ದೇವಾಡಿಗ, ಎನ್. ಕೆ. ಬಿಲ್ಲವ ಇದ್ದರು. (ಬೈಂದೂರು ಚಿತ್ರ)   

ನಾವುಂದ (ಬೈಂದೂರು): ಗರಡಿಗಳಲ್ಲಿ ಸಮುದಾಯ ನಂಬುವ ದೈವಗಳ ಆರಾಧನೆ ನಡೆಯುತ್ತದೆ. ಆದ್ದರಿಂದ ಅವುಗಳೂ ಧಾರ್ಮಿಕ ಕೇಂದ್ರಗಳೇ ಎಂದು ಹೊಸ್ಮಾರು ಬಲ್ಯೊಟ್ಟು ಗುರು ಕೃಪಾ ಸೇವಾಶ್ರಮದ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.

ನವೀಕರಣಗೊಂಡ ನಾವುಂದದ  ಬ್ರಹ್ಮ ಬೈದರ್ಕಳ ಕೋಟಿ ಚೆನ್ನಯ ಗರಡಿಯ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭೆಯನ್ನು ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ವಿಧಿಗಳ ಅಧ್ವರ್ಯ ಆನಗಳ್ಳಿ ಚೆನ್ನಕೇಶವ ಭಟ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ತಾಲ್ಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಎನ್‌. ಟಿ. ಪೂಜಾರಿ, ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ,

ವಕೀಲ ರವಿಕಿರಣ ಮುರ್ಡೇಶ್ವರ, ವಾಸ್ತುತಜ್ಞ ಪಂಡಿತ್ ನವೀನಚಂದ್ರ ಸನಿಲ್, ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ಮಾಜಿ ಸದಸ್ಯ ಅನಂತ ಮೊವಾಡಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಹೇಂದ್ರ ಪೂಜಾರಿ, ಜಗದೀಶ ಪೂಜಾರಿ, ಶ್ಯಾಮಲಾ ಕುಂದರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹ ದೇವಾಡಿಗ, ಸಂಜೀವ ಪೂಜಾರಿ ಮಾವಿನಕೆರೆ, ಗರಡಿಯ ಗೌರವಾಧ್ಯಕ್ಷ ಎನ್‌. ಕೆ. ಬಿಲ್ಲವ, ಅಧ್ಯಕ್ಷ ಎನ್. ಮುತ್ತ ಬಿಲ್ಲವ, ಬಲ್ಲಾಳ ಚಂದ್ರಶೇಖರ ಶೆಟ್ಟಿ, ಪ್ರಮುಖರಾದ ರಘು ಕೆ. ಪೂಜಾರಿ, ಗೋಪಾಲ ಕೆ. ಪೂಜಾರಿ ಇದ್ದರು.

ಶಿಕ್ಷಕ ಸೀತಾರಾಮ ಬಿಲ್ಲವ ಸ್ವಾಗತಿಸಿದರು. ಗರಡಿಯ ಮುಂಬೈ ಸಮಿತಿಯ ಕಾರ್ಯದರ್ಶಿ ಪರಮೇಶ್ವರ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರುಣಾಕರ ಶೆಟ್ಟಿ, ಶಶಿಧರ ಶೆಟ್ಟಿ, ಶ್ರೀನಿವಾಸ ಕಾಳಾವರ ನಿರೂಪಿಸಿದರು. ಗರಡಿಯ ಅಧ್ಯಕ್ಷ ಎನ್. ಮುತ್ತ ಬಿಲ್ಲವ ವಂದಿಸಿದರು. ದಾನಿಗಳನ್ನು ಸನ್ಮಾನಿಸಲಾಯಿತು.

** *** **
ಯಾವುದೇ ಆರಾಧನೆಯ ಹಿಂದೆ ನಿಷ್ಠೆ ಇದ್ದರಷ್ಟೆ ನಿರೀಕ್ಷಿತ ಫಲ ದೊರೆಯುತ್ತದೆ. ಸಮುದಾಯದ ಎಲ್ಲರೂ ಸಾಮರಸ್ಯದಿಂದ ಬೆರೆತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು.
-ವಿಖ್ಯಾತಾನಂದ ಸ್ವಾಮೀಜಿ,
ಹೊಸ್ಮಾರು ಬಲ್ಯೊಟ್ಟು ಗುರುಕೃಪಾ ಸೇವಾಶ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.