ADVERTISEMENT

ನಿರಂತರ ಅಧ್ಯಯನ ಅಗತ್ಯ: ಅಮಿ

ಅವಲೋಕನ ಕಾರ್ಯಕ್ರಮ: ಬಹುಮುಖಿ–ಜ್ಞಾನಮುಖಿ ಭಾರತ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 11:56 IST
Last Updated 13 ಫೆಬ್ರುವರಿ 2017, 11:56 IST
ಕುಂಜಿಬೆಟ್ಟು ಶಾರದಾ ವಸತಿ ಶಾಲೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಬಹುಮುಖಿ–ಜ್ಞಾನಮುಖಿ ಭಾರತ’ ಅರ್ನಾಲ್ಡ್‌ ಬಾಕೆ 1938 ಮರು ಅಧ್ಯಯನ ದೃಶ್ಯ ಮುದ್ರಿಕೆಗಳ ಅವಲೋಕನ ಕಾರ್ಯಕ್ರಮದಲ್ಲಿ ಇತಿಹಾಸ ಸಂಶೋಧಕಿ ಡಾ. ಅಮಿ ಕ್ಯಾಟಲಿನ್‌ ಜೈರಾಜ್‌ಬಾಯ್‌ ಮಾತನಾಡಿದರು. 	ಪ್ರಜಾವಾಣಿ ಚಿತ್ರ
ಕುಂಜಿಬೆಟ್ಟು ಶಾರದಾ ವಸತಿ ಶಾಲೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಬಹುಮುಖಿ–ಜ್ಞಾನಮುಖಿ ಭಾರತ’ ಅರ್ನಾಲ್ಡ್‌ ಬಾಕೆ 1938 ಮರು ಅಧ್ಯಯನ ದೃಶ್ಯ ಮುದ್ರಿಕೆಗಳ ಅವಲೋಕನ ಕಾರ್ಯಕ್ರಮದಲ್ಲಿ ಇತಿಹಾಸ ಸಂಶೋಧಕಿ ಡಾ. ಅಮಿ ಕ್ಯಾಟಲಿನ್‌ ಜೈರಾಜ್‌ಬಾಯ್‌ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಉಡುಪಿ: ಜಗತ್ತಿನ ಅತ್ಯಂತ ಶ್ರೀಮಂತ ಸಂಸ್ಕೃತಿಯಾದ ಭಾರತೀಯ ಕಲೆ, ಸಂಪ್ರದಾಯದ ನಿರಂತರ ಅಧ್ಯಯನ ಆಗಬೇಕು. ಹಾಗೆಯೇ ಅವುಗಳ ದಾಖಲೀಕರಣವೂ ಅಗತ್ಯ ಎಂದು ಇತಿಹಾಸ ಸಂಶೋಧಕಿ ಡಾ. ಅಮಿ ಕ್ಯಾಟಲಿನ್‌ ಜೈರಾಜ್‌ಬಾಯ್‌ ಹೇಳಿದರು.

ಉಡುಪಿಯ ಪ್ರಾಚ್ಯಸಂಚಯನ ಸಂಶೋಧನಾ ಕೇಂದ್ರ ಹಾಗೂ ಕುಂಜಿ ಬೆಟ್ಟು ಶಾರದಾ ವಸತಿ ಶಾಲೆಯ ಸಂ ಯುಕ್ತ ಆಶ್ರಯದಲ್ಲಿ ಶಾರದ ವಸತಿ ಶಾಲೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಬಹುಮುಖಿ–ಜ್ಞಾನ ಮುಖಿ ಭಾರತ’ ಅರ್ನಾಲ್ಡ್‌ ಬಾಕೆ 1938 ಮರು ಅಧ್ಯಯನ ದೃಶ್ಯ ಮುದ್ರಿಕೆಗಳ ಅವಲೋಕನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ ಬಹುಸಂಸ್ಕೃತಿಯ ರಾಷ್ಟ್ರ ವಾಗಿದ್ದು, ಹಲವು ಭಾಷೆ, ಧರ್ಮ, ಜಾತಿ, ಸಂಸ್ಕೃತಿಯನ್ನು ಒಳಗೊಂಡಿದೆ. ಅದನ್ನು ಮುಂದಿನ ಪೀಳಿಗೆಗೆ ತಲುಪಿಸ ಬೇಕಾದರೆ, ಅದರ ನಿರಂತರ ಸಂಶೋ ಧನೆಯ ಜತೆಗೆ ದಾಖಲೀಕರಣ ಮಾಡು ವುದು ಅನಿವಾರ್ಯ ಎಂದರು. 

ಮೂಲತಃ ಡಚ್‌ ವಿದ್ವಾಂಸರಾದ ಆರ್ನಾಡ್ಡ್‌ ಬಾಕೆ ಅವರು ಭಾರತೀಯ ಸಂಗೀತ ಮತ್ತು ಸಂಸ್ಕೃತ ಭಾಷೆಯಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದರು. ಭಾರತೀಯ ಸಂಗೀತದಲ್ಲಿ ಉನ್ನತ ಅಭ್ಯಾಸವನ್ನು ಮಾಡಲು ಹಾಗೂ ಪಿಎಚ್‌.ಡಿ ಪದವಿಯನ್ನು ಪಡೆಯಲು ಭಾರತಕ್ಕೆ ಬಂದ ಅವರು, 1924 ರಿಂದ 29ರವರೆಗೆ ರವೀಂದ್ರನಾಥ ಟ್ಯಾಗೋರ್‌ ಅವರ ಬಳಿ ಅಧ್ಯಯನ ಮಾಡಿದರು. ಆ ಬಳಿಕ ಟ್ಯಾಗೋರ್‌ ಅವರ ಪ್ರೇರಣೆ ಯಿಂದ ಭಾರತೀಯ ಜನ ಪದ ಕಲೆಗಳು, ಹಾಡು, ಹಾಗೂ ಬುಡ ಗಟ್ಟು ಸಮುದಾ ಯದವರ ದೇಶೀಯ ಸಂಸ್ಕೃತಿಯನ್ನು ಅರಿಯಲು ಮುಂದಾದರು ಎಂದು ಹೇಳಿದರು.

ಅವುಗಳನ್ನು ಕೇವಲ ಅಧ್ಯಯನ ಮಾಡದೇ ಅಂದು ಲಭ್ಯವಿದ್ದ ಯಂತ್ರೋ ಪಕರಣಗಳ ಮೂಲಕ ಎಲ್ಲವನ್ನು ದಾಖ ಲೀಕರಣ ಮಾಡಿದರು. ಅವುಗಳಲ್ಲಿ ಸಂಗೀತ ಕಲೆಗೆ ಸಂಬಂಧಿಸಿದ 768 ಆಡಿಯೋ ದಾಖಲೆಗಳ ಸಂಗ್ರಹವಿದೆ. 1934ರ ದಶಕದಲ್ಲಿ ಭಾರತದ ಉದ್ದಗ ಲಕ್ಕೂ ಸಂಚರಿಸಿದ ಬಾಕೆ ಅವರು, ಹಿಂದೂ, ಮುಸ್ಲಿಂ, ಜೈನ, ಪಾರ್ಸಿ ಹಾಗೂ ಬುಡಕಟ್ಟು ಜನರ ಹಲವಾರು ಮಾಹಿತಿಗಳನ್ನು, ಮೌಖಿಕ ಸಾಹಿತ್ಯ ವನ್ನು, ವಾದ್ಯ ಉಪಕರಣಗಳ ಪರಿಚಯ ವನ್ನು ಹಾಗೂ ಅವುಗಳ ಇತಿಹಾಸದ ಬಗ್ಗೆ ಹೆಚ್ಚು ತಿಳಿದುಕೊಂಡು ಕ್ಷೇತ್ರಾಧ್ಯ ಯನ ಮಾಡಿದರು ಎಂದರು.

ಆರ್ನಾಡ್ಡ್‌ ಬಾಕೆ ಅವರು ಭಾರ ತೀಯ ಸಂಗೀತ ಮತ್ತು ಸಂಸ್ಕೃತ ಭಾಷೆ ಯಲ್ಲಿ ಅಧ್ಯಯನ ಮಾಡುವ ಮೂಲಕ ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಎಂದು ಭಾಷಾ ತಜ್ಞ ಡಾ. ಯು.ಪಿ. ಉಪಾಧ್ಯಾಯ ಹೇಳಿದರು. ಮಣಿಪಾಲದ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿ ಕಾರಿ ಡಾ. ಎಚ್‌. ಶಾಂತರಾಮ್‌ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆ ಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಮಣಿಪಾಲ ವಿಶ್ವವಿದ್ಯಾಲಯದ  ಡಾ. ವರದೇಶ್‌ ಹಿರೇಗಂಗೆ, ಉಡುಪಿ ತುಳು ಕೂಟದ ಗೌರವಾಧ್ಯಕ್ಷ ಡಾ. ಭಾಸ್ಕರಾ ನಂದ ಕುಮಾರ್‌, ಹಲ್ಲರೆ ಗೊಂಬೆಗಳು ಮರು ಅಧ್ಯಯನ ಸಂಘ ಟಕ ಭಾಗವತ ಶಿವಬುದ್ಧಿ ಹಲ್ಲರೆ, ಶಾರ ದಾ ಶಾಲೆಯ ಪ್ರಾಂಶುಪಾಲ ಡಾ. ವಿದ್ಯಾ ವಂತ ಆಚಾರ್ಯ ಉಪಸ್ಥಿತರಿದ್ದರು.   ಎಸ್‌.ಎ. ಕೃಷ್ಣಯ್ಯ ಸ್ವಾಗತಿಸಿದರು, ಉಪನ್ಯಾಸಕ ಕೆ. ಯಾದವ ನಿರೂಪಿಸಿದರು.

ದಾಖಲೀಕರಣ: ಭಾರತೀಯ ಸಂಗೀತ ಕಲೆಗಳಲ್ಲಿ ಅಪಾರ ಅಭಿಮಾನ ಹೊಂದಿದ್ದ ಆರ್ನಾಡ್ಡ್‌ ಬಾಕೆ ಅವರು ಕಟ್ಟಾ ಸಂಪ್ರದಾಯವಾದಿಗಳಾದ ಕೇರಳದ ನಂಬೂದರಿ ಬ್ರಾಹ್ಮಣ ವರ್ಗದ ಪಂಡಿತರಿಂದ ವೇದ ಸೂಕ್ತಗಳ ಪಠಣ, ವ್ಯಾಖ್ಯಾನವನ್ನು ಮೊದಲು ಯಂತ್ರೋಪಕರಣಗಳ ಮೂಲಕ ದಾಖಲೀಕರಣ ಮಾಡಿದರು ಎಂದು ಇತಿಹಾಸ ಸಂಶೋಧಕಿ ಡಾ. ಅಮಿ ಕ್ಯಾಟಲಿನ್‌ ಜೈರಾಜ್‌ಬಾಯ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT