ADVERTISEMENT

ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಿ

ನೀರಿನ ಮೂಲಗಳನ್ನು ಸಮರ್ಪಕವಾಗಿ ಬಳಸಲು ಸೊರಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 9:28 IST
Last Updated 10 ಮಾರ್ಚ್ 2017, 9:28 IST

ಉಡುಪಿ: ಈಗಾಗಲೇ ಇರುವ ನೀರಿನ ಮೂಲಗಳನ್ನು ಸಮರ್ಪಕವಾಗಿ ಬಳಸಿ ಕೊಂಡು ಸಮರ್ಪಕವಾಗಿ ಕುಡಿಯುವ ನೀರು ಪೂರೈಸಿ ಎಂದು ಶಾಸಕ ವಿನಯ ಕುಮಾರ್ ಸೊರಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಡಿಯುವ ನೀರಿನ ಪೂರೈಕೆ ಸಂಬಂಧ ಉಡುಪಿ ತಾಲ್ಲೂಕು ಪಂಚಾ ಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಹಲವಾರು ಕಡೆ ಈಗಾಗಲೇ ತೆರೆದ ಬಾವಿ ಹಾಗೂ ಕೊಳವೆ ಬಾವಿಗಳಿದ್ದು ವಿದ್ಯುತ್ ಸಂಪರ್ಕ ನೀಡುವ ಮೂಲಕ ನೀರು ಪೂರೈಕೆಗೆ ಆದ್ಯತೆ ನೀಡಿ.

ಶಾಸಕರ ನೇತೃತ್ವದ ಕುಡಿಯುವ ನೀರಿನ ಕಾರ್ಯಪಡೆಗೆ ಈ ಹಿಂದೆಯೇ ₹40 ಲಕ್ಷ ಅನುದಾನ ಬಂದಿದ್ದು ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗ ಇನ್ನೂ ₹40 ಲಕ್ಷ ಅನುದಾನ ಬಂದಿದ್ದು ಅಗತ್ಯ ಕಾಮಗಾರಿಗಳಿಗೆ ಹಂಚಿಕೆ ಮಾಡಲಾಗು ವುದು. ಅನುದಾನದ ಕೊರತೆಯಾದರೆ ಶಾಸಕರ ನಿಧಿಯಿಂದಲೂ ನೀಡಲಾ ಗುವುದು ಎಂದು ಅವರು ಹೇಳಿದರು.

ಹೊಸದಾಗಿ ಕೊರೆಯುವ ಬಾವಿ ಹಾಗೂ ನಿರ್ಮಾಣ ಮಾಡುವ ತೆರೆದ ಬಾವಿಗಳಿಗೆ ವಿಳಂಬ ಮಾಡದೆ ವಿದ್ಯುತ್ ಸಂಪರ್ಕ ನೀಡಿ ಎಂದು ಮೆಸ್ಕಾಂ ಅಧಿಕಾ ರಿಗಳಿಗೆ ತಾಕೀತು ಮಾಡಿದ ಅವರು, ಪೈಪ್‌ಲೈನ್ ಅಳವಡಿಸುವ ಕಾಮಗಾರಿ ಯನ್ನೂ ತ್ವರಿತಗತಿಯಲ್ಲಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರ ಪ್ರದೇಶದ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವ ವರಿಗೆ 94ಸಿಸಿ ಅನ್ವಯ ಜಾಗ ಸಕ್ರಮ ಮಾಡಲು ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಕೇವಲ ಒಂದೂವರೆ ಸೇಂಟ್ಸ್‌ ಜಾಗ ಸಾಕಾಗುವುದಿಲ್ಲ ಆದ್ದರಿಂದ ಇದನ್ನು ಮೂರು ಸೇಂಟ್ಸ್‌ಗೆ ಏರಿಸಿ ಎಂದು ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಿಕಾ ಮಾತನಾಡಿ, ಬಡಗಬೆಟ್ಟು ಸೇತುವೆಯಿಂದ ಬಬ್ಬುಸ್ವಾಮಿ ದೈವ ಸ್ಥಾನದ ವರೆಗೆ ಇರುವ ಮನೆಗಳಿಗೆ ನೀರು ಪೂರೈಸಲು ಪೈಪ್‌ಲೈನ್ ಕಾಮಗಾರಿ ಆಗಬೇಕಿದೆ. ಬೈರಂಪಳ್ಳಿಯ ಪರಿಶಿಷ್ಟ ಜಾತಿ ಕಾಲೊನಿಯಲ್ಲಿಯೂ ನೀರಿನ ಸಮಸ್ಯೆ ಇದೆ ಎಂದು ಗಮನ ಸೆಳೆದರು.

ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್‌, ಉಪಾಧ್ಯಕ್ಷ ರಾಜೇಂದ್ರ ಪಂದಬೆಟ್ಟು, ಜಿಲ್ಲಾ ಪಂಚಾ ಯಿತಿ ಸದಸ್ಯರಾದ ವಿಲ್ಸನ್‌ ರೋಡ್ರಿಗಸ್‌, ಮೈರ್ಮಾಡಿ ಸುಧಾಕರ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ, ತಹಶೀಲ್ದಾರ್ ಮಹೇಶ್‌ಚಂದ್ರ ಇದ್ದರು.

300 ಅರ್ಜಿಗಳು
ನಿವೇಶನ ರಹಿತರಿಗೆ ನಿವೇಶನ ನೀಡಲು ಗ್ರಾಮ ಪಂಚಾಯಿತಿ ಗಳಲ್ಲಿ ಜಮೀನು ಗುರುತಿಸ ಲಾಗಿದೆ. ಕೆಲವರಿಗೆ ನಿವೇಶನ ಹಂಚಿಕೆ ಮಾಡಿದ್ದರೂ ಕಾಪು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾ ಯಿತಿಯಲ್ಲಿ ಇನ್ನೂ 200–300 ಅರ್ಜಿಗಳು ಬಾಕಿ ಇವೆ. ಈಗಾಗಲೇ ಗುರುತಿಸಿ ರುವ ಕೆಲವು ಜಾಗಗಳು ಪಂಚಾಯಿತಿ ಕಾಡುಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸರ್ಕಾರಿ ಉದ್ದೇಶಕ್ಕೆ ಈ ಜಾಗ ಬಳಸಲು ಅವಕಾಶ ಇದೆ. ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬ ಹುದು. ಒಟ್ಟಾರೆ ಎಲ್ಲ ನಿವೇಶನ ರಹಿತರಿಗೆ ನಿವೇ ಶನ ನೀಡಲು ಅಧಿಕಾರಿಗಳು ಶ್ರಮ ವಹಿಸಿ ಕೆಲಸ ಮಾಡಬೇಕು ಸೊರಕೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.