ADVERTISEMENT

ಮನುಷ್ಯ ಬದುಕಲು ವನ್ಯ ಸಂಪತ್ತನ್ನು ಉಳಿಸಿ

61ನೇ ವನ್ಯಜೀವಿ ಸಪ್ತಾಹ: ಅರಣ್ಯ ಸಚಿವ ರಮಾನಾಥ ರೈ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2015, 9:57 IST
Last Updated 2 ಅಕ್ಟೋಬರ್ 2015, 9:57 IST

ಕಾರ್ಕಳ: ಮನುಷ್ಯ ಬದುಕಬೇಕಾದರೆ ವನ್ಯ ಸಂಪತ್ತನ್ನು ಉಳಿಸಬೇಕು. ಅರಣ್ಯ ಸಂರಕ್ಷಣೆ ಹಾಗೂ ಪ್ರಾಕೃತಿಕ ಸಮತೋಲನ ಕಾಪಾಡಿಕೊಳ್ಳಬೇಕಾಗಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು.

ನಗರದ ಸಾಲ್ಮರದ ಗೆಲಾಕ್ಷಿ ಸಭಾ ಭವನದಲ್ಲಿ ಕುದುರೆಮುಖ ವನ್ಯಜೀವಿ ವಿಭಾಗದ ಆಶ್ರಯದಲ್ಲಿ ಗುರುವಾರ 61ನೇ ವನ್ಯಜೀವಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರಕೃತಿ ಮುನಿಸಿಕೊಂಡರೆ ನಮಗೆ ಉಳಿಗಾಲವಿಲ್ಲ. ಕಾನಿನ ಮೂಲಕ ವನ್ಯ ಜೀವಿ ಸಂರಕ್ಷಣಾ ಕಾಯಿದೆಯನ್ನು ಜಾರಿಗೊಳಿ ಸಿದ ತರುವಾಯ ಮೋಜಿಗಾಗಿ, ಮಾಂಸಕ್ಕಾಗಿ ಬೇಟೆಯಾಡುವುದು ಕಡಿಮೆಯಾಗಿದೆ.

ದೇಶದಲ್ಲಿ ಅರಣ್ಯವನ್ನು ರಕ್ಷಿಸಿದ ಸಾಲಿನಲ್ಲಿ ಕರ್ನಾಟಕ ಅಗ್ರಪಂಕ್ತಿ ಯಲ್ಲಿದೆ. ದೇಶದಲ್ಲಿ ಅತೀ ಹೆಚ್ಚು ಹುಲಿಗಳಿರುವುದು, ಆನೆಗಳಿರುವುದು ನಮ್ಮ ರಾಜ್ಯದಲ್ಲಿ ಎಂದರು.

ಕಸ್ತೂರಿರಂಗನ್ ವರದಿಯ ಮೇರೆಗೆ ಜನರ ಹಿತವನ್ನು ಪರಿಗಣಿಸಿ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ವರದಿ ಸಲ್ಲಿಕೆಯಾಗಿದೆ. ರಾಜ್ಯದಲ್ಲಿ 20 ಸಾವಿರ ಹೆಕ್ಟೇರ್ ಪ್ರದೇಶ ಎಂದು ಇರುವುದನ್ನು ಆಕ್ಷೇಪಿಸಿ 12 ಸಾವಿರಕ್ಕೆ ಇಳಿಸಲಾಗಿದೆ. ಕೇರಳ ಬಿಟ್ಟರೆ ಬೇರೆ ಯಾವ ರಾಜ್ಯವೂ ವರದಿಯನ್ನು ಸಲ್ಲಿಸಿಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಭವಿಷ್ಯ ಚೆನ್ನಾಗಿರ ಬೇಕಾದರೆ ಪ್ರಕೃತಿಯನ್ನು ಚೆನ್ನಾಗಿಟ್ಟುಕೊಳ್ಳಬೇಕು. ಮನುಷ್ಯ ಜೀವನಾಡಿಯಂತಿರುವ ಪಶ್ಚಿಮ ಘಟ್ಟ ಪ್ರದೇಶ ದಲ್ಲಿರುವ ಅಪಾರ ಅರಣ್ಯ ಸಂಪತ್ತನ್ನು ಉಳಿಸಿಕೊಳ್ಳಬೇಕು ಎಂದರು. ಮಾಜಿಶಾಸಕ ಎಚ್.ಗೋಪಾಲ ಭಂಡಾರಿ ಅನಿಸಿಕೆ ಹಂಚಿಕೊಂಡರು. ಪುರಸಭಾಧ್ಯಕ್ಷೆ ರಹಮತ್ ಎಸ್. ಶೇಖ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿ, ಹೆಚ್ಚು ವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉದಯ ಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿಜಯ ಕುಮಾರಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮಾಲಿನಿ ಶೆಟ್ಟಿ, ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಪಿ. ವೆಂಕಟ್ರಮಣ ಗೌಡ, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಎಸ್. ನೆಟಾಲ್ಕರ್, ಉಡುಪಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರ ಕ್ಷಣಾಧಿಕಾರಿ ಆರ್.ಜಿ.ಭಟ್, ದಕ್ಷಿಣ ಕನ್ನಡ ವನ್ಯಜೀವಿ ಪರಿಪಾಲಕ ಎಂ.ಬಿ. ಕಿರಣ್ ಬುಡ್ಲೆಗುತ್ತು, ಉಡುಪಿ ವನ್ಯ ಜೀವಿ ಪರಿಪಾಲಕ ರಾಜ್‌ಗೋಪಾಲ ಶೆಟ್ಟಿ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಡಾ. ಸೂರ್ಯ ಎನ್.ಆರ್. ಅಡೂರು, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ನೀರಜ್ ನಿರ್ಮಲ್, ವನ್ಯ ಜೀವಿ ವಿಭಾಗ ಕಾರ್ಕಳ ಘಟಕದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಮೇಶ್ ಕುಮಾರ್.ಸಿ,  ಸಿದ್ಧಾಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲ ಎನ್.ಕೆ, ಕುದುರೆಮುಖ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಭಾಸ್ಕರ್ ಇತರರು ಇದ್ದರು.

ಭಾಸ್ಕರ್ ಬಿ. ಸ್ವಾಗತಿಸಿದರು. ಮಂಗಳೂರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಬೀಜೂರು ಪ್ರಾಸ್ತವಿಕ ಮಾತನಾಡಿದರು. ಗೋಪಾಲ್ ವಂದಿಸಿದರು. ಪ್ರಶಾಂತ್ ಶೆಟ್ಟಿ ನಿರೂಪಿಸಿದರು.
*
ಕೇಂದ್ರದ ಎನ್‌ಡಿಎ ಸರ್ಕಾರ ಹುಲಿಯೋಜನೆಗೆ ಒಪ್ಪಿಗೆ ನೀಡಿದೆ. ಕೇಂದ್ರರ ಒಪ್ಪಿದರೂ ರಾಜ್ಯ ಒಪ್ಪಬೇಕಾಗಿಲ್ಲ. ರಾಜ್ಯ ಸರ್ಕಾರ ಹುಲಿಯೋಜನೆ ಯನ್ನು ಅನುಷ್ಠಾನ ಮಾಡುವುದಿಲ್ಲ.
- ಬಿ.ರಮಾನಾಥ ರೈ,
ಅರಣ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.