ADVERTISEMENT

‘ಯಕ್ಷಗಾನ ಬಯಲು ವಿದ್ಯಾಲಯ’

ಡಾ. ಭಾಸ್ಕರಾನಂದ ಕುಮಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 9:32 IST
Last Updated 25 ಅಕ್ಟೋಬರ್ 2016, 9:32 IST

ಉಡುಪಿ: ನಮ್ಮನ್ನು ಅಲೌಕಿಕ ಲೋಕಕ್ಕೆ ಕೊಂಡೊಯ್ಯುವ ವೇಷಭೂಷಣ, ಜೀವ ನೋಲ್ಲಾಸವನ್ನು ತುಂಬುವ ವೈವಿಧ್ಯ ಮಯ ನೃತ್ಯ, ಭಾಗವತಿಕೆ, ಚೆಂಡೆ-ಮದ್ದಳೆ, ಆಶು ವೈಭವದ ಸಂಭಾಷಣಾ ಚಾತುರ್ಯಗಳಿಂದ ಸಂಪನ್ನವಾದ ಯಕ್ಷ ಗಾನವೂ ಕರ್ನಾಟಕದ ಬಯಲು ವಿದ್ಯಾಲಯ ಆಗಿದೆ ಎಂದು ಯಕ್ಷಗಾನ ಕಲಾವಿದ ಡಾ. ಭಾಸ್ಕರಾನಂದ ಕುಮಾರ ಹೇಳಿದರು.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸಹ ಯೋಗದಲ್ಲಿ ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಐದು ತಿಂಗಳ ಕಾಲ ನಡೆದ ಯಕ್ಷಗಾನ ವಿಶೇಷ ತರಬೇತಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ವಿದ್ಯಾರ್ಥಿಗಳಿಗೆ ಔಪಚಾರಿಕ ಶಿಕ್ಷಣದೊಂದಿಗೆ ಯಕ್ಷಗಾನ ಶಿಕ್ಷಣವನ್ನೂ ನೀಡಿದರೆ ಹೆಚ್ಚಿನ ಸಂಸ್ಕಾರ ಸಿಗುತ್ತದೆ. ಇಂತಹ ಸಂಸ್ಕಾರ ನೀಡುವುದಕ್ಕೆ ಉತ್ತಮ ಪ್ರಸಂಗ ಸಾಹಿತ್ಯವೂ ಬೇಕು. ಈ ನಿಟ್ಟಿನಲ್ಲಿ ಅಂಬಾತನಯ ಮುದ್ರಾಡಿ ಅವರು ರಚಿಸಿದ ಯಕ್ಷವಿಜಯ ಅಪೂರ್ವ ಕೃತಿಯಾಗಿದೆ ಎಂದರು.

ಯಕ್ಷ ವಿಜಯ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಣಿ ಪಾಲದ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಎಚ್‌. ಶಾಂತರಾಮ್‌, ಯಕ್ಷಗಾನದ ಪ್ರೇಕ್ಷಕರು ಹೊಸ ಪ್ರಸಂಗ ಬಯ ಸುತ್ತಿದ್ದಾರೆ. ಪ್ರಸಂಗ ಹೊಸತಾದರೆ ಸಾಲದು. ಅದು ನಮ್ಮ ಸಂಸ್ಕಾರಕ್ಕೂ ಪೂರಕವಾಗಿರಬೇಕು ಎಂದು ಹೇಳಿದರು.

ಯಕ್ಷಗಾನ ಬಯಲಾಟ ಅಕಾಡೆ ಮಿಯ ರಿಜಿಸ್ಟ್ರಾರ್‌ ಎಸ್‌.ಎಚ್‌. ಶಿವರುದ್ರಪ್ಪ, ಅಕಾಡೆಮಿಯ ಸದಸ್ಯ ಪಿ. ಕಿಶನ್‌ ಹೆಗ್ಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರವಿಕುಮಾರ್‌, ಕಲಾಪೋಷಕರಾದ ತಿಂಗಳೆ ವಿಕ್ರಮಾ ರ್ಜುನ ಹೆಗ್ಡೆ, ಡಾ. ಪಿ.ಎಲ್‌.ಎನ್‌. ರಾಯ ಉಪಸ್ಥಿತರಿದ್ದರು. ಅಂಬಾತನಯ ಮುದ್ರಾಡಿ ಸ್ವಾಗತಿಸಿ ನಿರೂಪಿಸಿದರು.

ಯಕ್ಷಗಾನ ಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣರ ಮಾರ್ಗ ದರ್ಶನದಲ್ಲಿ ತರಬೇತುದಾರರಾದ ಸುಬ್ರ ಹ್ಮಣ್ಯ ಪ್ರಸಾದ್‌ ಮತ್ತು ಕೃಷ್ಣಮೂರ್ತಿ ಭಟ್ಟ ತರಬೇತಿ ನೀಡಿದರು. ಕೊನೆಯಲ್ಲಿ ತರಬೇತು ಪಡೆದ ವಿದ್ಯಾರ್ಥಿಗಳಿಂದ ಜಾಂಬವತಿ ಕಲ್ಯಾಣ ಯಕ್ಷಗಾನದ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.