ADVERTISEMENT

ಸುಸ್ಥಿರ ಇಂಧನ ಸೇವೆಯೇ ಮುಖ್ಯ ಗುರಿ

​ಪ್ರಜಾವಾಣಿ ವಾರ್ತೆ
Published 13 ಮೇ 2017, 7:34 IST
Last Updated 13 ಮೇ 2017, 7:34 IST
ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ (ಬಿವಿಟಿ)ನಲ್ಲಿ ಶುಕ್ರವಾರ ನಡೆದ ಸೆಲ್ಕೊ ಸೋಲಾರ್‌ ಉತ್ಪಾದಕರ ಸಮಾವೇಶದಲ್ಲಿ ಸೆಲ್ಕೊ ಫೌಂಡೇಶನ್‌ನ ಹಿರಿಯ ವ್ಯವಸ್ಥಾಪಕ ಜೋಬಿ ಮಾತನಾಡಿದರು.			ಪ್ರಜಾವಾಣಿ ಚಿತ್ರ
ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ (ಬಿವಿಟಿ)ನಲ್ಲಿ ಶುಕ್ರವಾರ ನಡೆದ ಸೆಲ್ಕೊ ಸೋಲಾರ್‌ ಉತ್ಪಾದಕರ ಸಮಾವೇಶದಲ್ಲಿ ಸೆಲ್ಕೊ ಫೌಂಡೇಶನ್‌ನ ಹಿರಿಯ ವ್ಯವಸ್ಥಾಪಕ ಜೋಬಿ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಉಡುಪಿ: ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯದ ಜನರಿಗೆ ಹಾಗೂ ಸಣ್ಣ ಜೀವನಾಧಾರವನ್ನು ಹೊಂದಿರುವ ಕುಟುಂಬಗಳಿಗೆ ವಿಕೇಂದ್ರೀಕೃತ ಸುಸ್ಥಿರ ಇಂಧನ ಸೇವೆಯನ್ನು ಒದಗಿಸುವುದರ ಜತೆಗೆ ಇಂಧನ ಉದ್ಯಮಶೀಲರಿಗೆ ಸ್ಪೂರ್ತಿ ನೀಡಿ, ಪ್ರೋತ್ಸಾಹಿಸುವುದು ಸೆಲ್ಕೊ ‘ಇನ್‌ಕ್ಯೂಬೇಶನ್‌’ ಗುರಿ ಎಂದು ಸೆಲ್ಕೊ ಫೌಂಡೇಶನ್‌ನ ಹಿರಿಯ ವ್ಯವಸ್ಥಾಪಕ ಜೋಬಿ ಹೇಳಿದರು.

ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್‌ (ಬಿವಿಟಿ)ನಲ್ಲಿ ಶುಕ್ರವಾರ ನಡೆದ ಸೆಲ್ಕೊ ಸೋಲಾರ್‌ ಉತ್ಪಾದಕರ ಸಮಾವೇಶದಲ್ಲಿ ಮಾತನಾಡಿದರು.ಸೆಲ್ಕೊ ಇನ್‌ಕ್ಯೂಬೇಶನ್‌ ಒಂದು ಉಪಕ್ರಮವಾಗಿದೆ. ಇದರ ಮೂಲಕ ಉದ್ಯಮಶೀಲರಿಗೆ ಹಾಗೂ ಸುಸ್ಥಿರ ಇಂಧನ ಸೇವೆ ಒದಗಿಸುತ್ತಿರುವ ಉದ್ಯ ಮಿಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅವರಿಗೆ ಉತ್ತೇಜನ ನೀಡುವ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಸೆಲ್ಕೊ ಸಮುದಾಯದ ಜನರ ಅವಶ್ಯಕ್ಕೆ ತಕ್ಕಂತೆ ಹಾಗೂ ಮನೆಬಾಗಿಲಿಗೆ ಆರ್ಥಿಕ ಸೇವೆಯನ್ನು ಒದಗಿಸುವ ಕೆಲಸ ಮಾಡುತ್ತಿದೆ. ಅಲ್ಲದೆ, 2016ರಿಂದ 2018ರ ಅವಧಿಯಲ್ಲಿ ತನ್ನ ಗಮನವನ್ನು ಒರಿಸ್ಸಾ, ಅಸ್ಸಾಂ, ಮೇಘಾಲಯ, ಮಣಿಪುರ ಈ ಮೊದಲಾದ ಈಶಾನ್ಯ ರಾಜ್ಯಗಳ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿದರು. 

ADVERTISEMENT

ಒಡಿಸಾ ಸೋಲಾರ ಉತ್ಪಾದಕ ಕರು ಣಾಕರ ಬೆಹೇರ ಮಾತನಾಡಿ,  ಒಡಿಸಾ ರಾಜ್ಯ ಶೇ. 40ರಷ್ಟು ಅರಣ್ಯ ಪ್ರದೇಶ ಹಾಗೂ ಶೇ. 60ರಷ್ಟು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, ದಿನಕ್ಕೆ 7ರಿಂದ 8 ತಾಸು ವಿದ್ಯುತ್‌ ಕಡಿತವಾಗುತ್ತದೆ. ಇದರಿಂದ ಶಾಲೆಗೆ ಹೋಗುವ ವಿದ್ಯಾರ್ಥಿ ಗಳಿಗೆ ಹಾಗೂ ಕೈಗಾರಿಕೋದ್ಯಮಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಹಾಗಾಗಿ ಈ ಸಮಸ್ಯೆಯನ್ನು ಬಗೆಹರಿಸುವ ಸಲು ವಾಗಿ ಸೋಲಾರ್‌ ಶಕ್ತಿಯನ್ನು ಪರಿಚ ಯಿಸ ಲಾಗಿದೆ. ಪ್ರತಿ ಮನೆಗೆ ಎರಡು ದೀಪಗಳನ್ನು ನೀಡಲಾಗುತ್ತಿದೆ ಎಂದರು.

30ರಿಂದ 50 ಮನೆಗಳಿರುವ ಕಡೆಗಳಲ್ಲಿ ಸೋಲಾರ್‌ ಮೈಕ್ರೋಗ್ರಿಡ್‌ ಸ್ಥಾಪನೆ ಮಾಡಿ, ಆ ಮೂಲಕ ವಿದ್ಯುತ್‌ ನೀಡುವ ಯೋಜನೆಯನ್ನು ರೂಪಿಸಲಾ ಗಿದೆ. ಈ ಯೋಜನೆಯಯಲ್ಲಿ ಒಂದು ಸೋಲಾರ್‌ ವಿದ್ಯುತ್‌ ಸಂಗ್ರಹ (ಚಾರ್ಚ್‌) ಮಾಡುವ ಗ್ರಿಡ್‌ ಸ್ಥಾಪಿಸಿ, ಅದರ ಮೂಲಕ ಪ್ರತಿ ಮನೆಗಳಿಗೆ ಎರಡು ದೀಪಗಳನ್ನು ಒದಗಿಸುವುದು. ಎಲ್ಲಾ ಮನೆಯ ದೀಪಗಳು ಗ್ರಿಡ್‌ ನಿಯಂತ್ರ ಣದಲ್ಲಿದ್ದು, ನಿಗದಿತ ಸಮಯಕ್ಕೆ ಸರಿಯಾಗಿ ದೀಪಗಳು ಉರಿಯುತ್ತವೆ ಎಂದು ಸೆಲ್ಕೋ ಸೋಲಾರ್‌ ಸಂಸ್ಥೆಯ ಸಿಒ ಮೋಹನ್‌ ಹೆಗ್ಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.