ADVERTISEMENT

ಸೌಹಾರ್ದ ಸಾರುವ ಹಬ್ಬ ಓಣಂ: ಸಚಿವ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 9:34 IST
Last Updated 11 ಸೆಪ್ಟೆಂಬರ್ 2017, 9:34 IST
ಕೇರಳ ಕಲ್ಚರ್ ಅಂಡ್ ಸೋಶಿಯಲ್ ಸೆಂಟರ್ ರಜತ ಮಹೋತ್ಸವವನ್ನು ಕಾರ್ಯಕ್ರಮವನ್ನು ಕ್ರೀಡೆ ಮತ್ತು ಯುವ ಜನಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು. ಪ್ರಜವಾಣಿ ಚಿತ್ರ
ಕೇರಳ ಕಲ್ಚರ್ ಅಂಡ್ ಸೋಶಿಯಲ್ ಸೆಂಟರ್ ರಜತ ಮಹೋತ್ಸವವನ್ನು ಕಾರ್ಯಕ್ರಮವನ್ನು ಕ್ರೀಡೆ ಮತ್ತು ಯುವ ಜನಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದರು. ಪ್ರಜವಾಣಿ ಚಿತ್ರ   

ಉಡುಪಿ: ಸೌಹಾರ್ದದಿಂದ ನಾಡಿನೆಲ್ಲೆಡೆ ಆಚರಿಸುವ ಏಕೈಕ ಹಬ್ಬ ಓಣಂ ಎಂದು ಕ್ರೀಡೆ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಕೇರಳ ಕಲ್ಚರ್ ಅಂಡ್‌ ಸೋಶಿಯಲ್ ಸೆಂಟರ್ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಓಣಂ ಹಬ್ಬ ಮತ್ತು ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಉಡುಪಿ ಮತ್ತು ದಕ್ಷಿಣ ಕನ್ನಡ ಕೇರಳದ ನೆರೆಯ ಜಿಲ್ಲೆಯಾಗಿದೆ. ಆಚಾರ–ವಿಚಾರ, ಸಾಂಸ್ಕೃತಿಕ ಹಾಗೂ ಭೌಗೋಳಿಕವಾಗಿ ಸಾಕಷ್ಟು ಸಾಮ್ಯತೆ ಇವೆ. ದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಅಕ್ಷರಸ್ಥರನ್ನು ಹಾಗೂ ಶೈಕ್ಷಣಿಕವಾಗಿ ಮುಂದುವರೆದ ರಾಜ್ಯವಾಗಿ ಕೇರಳ ಗುರುತಿಸಿಕೊಂಡಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಜನರು ಕೃಷಿಯಿಂದ ವಿಮುಕ್ತರಾಗುತ್ತಿದ್ದಾರೆ. ಆದರೆ ಕೇರಳಿಗರು ಇಲ್ಲಿನ ಕೃಷಿ ಭೂಮಿಯನ್ನು ಖರೀದಿಸಿ ಅಪಾರ ಪ್ರಮಾಣದಲ್ಲಿ ಬೇಸಾಯವನ್ನು ಮುಂದುವರೆಸುತ್ತಿದ್ದಾರೆ’ ಎಂದರು.

ADVERTISEMENT

ಮಾಜಿ ಶಾಸಕ ಕೆ. ರಘುಪತಿ ಭಟ್, ಮಣಿಪಾಲ ಸಿಡಿಕೇಟ್ ಬ್ಯಾಂಕ್ ಪ್ರಬಂಧಕ ಪಿ. ಮಧು, ಕೇರಳ ಸಮಾಜದ ಅಧ್ಯಕ್ಷ ಟಿ.ಕೆ. ರಾಜನ್, ಉಡುಪಿ ಕೇರಳ ಕಲ್ಚರ್ ಅಂಡ್‌ ಸೋಶಿಯಲ್ ಸೆಂಟರ್ ಸ್ಥಾಪಕ ಡಾ.ಟಿ.ಎನ್. ಶೀಧರ್ ಕುರುಪ್, ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.