ADVERTISEMENT

ಬದಲಾದ ಕಾಮಗಾರಿಗಳಿಗೆ ಅನುಮೋದನೆ: ಸೈಲ್‌

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 8:39 IST
Last Updated 10 ನವೆಂಬರ್ 2017, 8:39 IST

ಕಾರವಾರ: ‘ಲೋಕೋಪಯೋಗಿ ಇಲಾಖೆಯ ಅಪೆಂಡಿಕ್ಸ್ ಇ ಅಡಿಯಲ್ಲಿ ಬದಲಾವಣೆ ಮಾಡಿ ಸೂಚಿಸಿದ ಕಾಮಗಾರಿಗಳಿಗೆ ಸರ್ಕಾರದಿಂದ ಅನುಮೋದನೆಯಾಗಿದ್ದು, ಟೆಂಡರ್ ಕರೆಯಲಾಗಿದೆ’ ಎಂದು ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ.

‘ಒಟ್ಟು ₹ 15.70 ಕೋಟಿಯ 49 ಕಾಮಗಾರಿಗಳನ್ನು ಗ್ರಾಮೀಣ ಪ್ರದೇಶಗಳಿಗೆ ವರ್ಗಾಯಿಸಿ ಸರ್ಕಾರದಿಂದ ಅನುಮೋದನೆ ನೀಡಿ, ಪ್ರಕಟಣೆ ನೀಡಲಾಗಿತ್ತು. ಆದರೆ ಅದರಲ್ಲಿ ಶಂಕೆ ವ್ಯಕ್ತಪಡಿಸಿದ ಕೆಲವರು ‘ಇದು ಶಾಸಕರ ಸುಳ್ಳು ಭರವಸೆ’ ಎಂದು ಅಪಪ್ರಚಾರ ಮಾಡಿದ್ದರು. ಆದರೆ ಅದೇ ಕಾಮಗಾರಿಗಳಿಗೆ ಲೊಕೋಪಯೋಗಿ ಇಲಾಖೆಯಿಂದ ಈಗ ಟೆಂಡರ್ ಕರೆಯಲಾಗಿದ್ದು, ಸದ್ಯದಲ್ಲಿಯೇ ಎಲ್ಲ ಕೆಲಸಗಳು ಪ್ರಾರಂಭವಾಗಲಿವೆ. ಜನರಿಗೆ ಕೊಟ್ಟ ಭರವಸೆಯಂತೆಯೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.

ಎಲ್ಲೆಲ್ಲಿ, ಎಷ್ಟೆಷ್ಟು?: ‘ಅಮದಳ್ಳಿ ಪಂಚಾಯ್ತಿಯಲ್ಲಿ ₹ 95 ಲಕ್ಷ, ಘಾಡಸಾಯಿ ₹ 1.20 ಕೋಟಿ, ಬಿಣಗಾ ₹ 50 ಲಕ್ಷ, ಚೆಂಡಿಯಾ ₹ 40 ಲಕ್ಷ, ತೋಡೂರು ₹ 55 ಲಕ್ಷ, ಗೋಟೆಗಾಳಿ ₹ 1 ಕೋಟಿ, ಹಣಕೋಣ ₹ 20 ಲಕ್ಷ, ಶಿರವಾಡ ₹ 60 ಲಕ್ಷ, ವೈಲವಾಡ ₹ 40 ಲಕ್ಷ, ಕಾರವಾರ ನಗರ ₹ 1 ಕೋಟಿ, ಮಾಜಾಳಿ ₹ 55 ಲಕ್ಷ, ದೇವಳಮಕ್ಕಿ ₹ 1.80 ಕೋಟಿ, ಮಲ್ಲಾಪುರ ₹ 20 ಲಕ್ಷ, ಚಿತ್ತಾಕುಲ ₹ 50 ಲಕ್ಷ, ಕಿನ್ನರ ₹ 10 ಲಕ್ಷ, ಮುಡಗೇರಿ ₹ 20 ಲಕ್ಷ ಮತ್ತು ಅಂಕೋಲಾದ ಬಳಲೆಯಲ್ಲಿ ₹ 40 ಲಕ್ಷ, ಹಿಲ್ಲೂರು ₹ 40 ಲಕ್ಷ, ಸುಂಕಸಾಳ ₹ 40 ಲಕ್ಷ, ಬೆಳಸೆ ₹ 40 ಲಕ್ಷ, ಬೇಲೇಕೇರಿ ₹ 1.1 ಕೋಟಿ, ಕೊಡ್ಲಗದ್ದೆ ₹ 1 ಕೋಟಿ, ಅಗಸೂರು ₹ 30 ಲಕ್ಷ, ಬಾವಿಕೇರಿ ₹ 80 ಲಕ್ಷ, ಮೊಗಟಾ ₹ 70 ಲಕ್ಷ, ಹಾರವಾಡ ₹ 50 ಲಕ್ಷ, ಹಟ್ಟಿಕೇರಿ ₹ 50 ಲಕ್ಷ, ಅಗ್ರಗೋಣ ₹ 1 ಕೋಟಿ ಮೊತ್ತದ ಕಾಮಗಾರಿಗಳು ನಡೆಯಲಿವೆ’ ಎಂದು ತಿಳಿಸಿದ್ದಾರೆ.

ADVERTISEMENT

‘ವಿಶೇಷ ಘಟಕ ಯೋಜನೆಯಡಿಯಲ್ಲಿ ಹಾರವಾಡದಲ್ಲಿ ₹ 40 ಲಕ್ಷ ಮತ್ತು ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ಕಡವಾಡ– ಸುಂಕೇರಿ ಸೇತುವೆ ರಸ್ತೆ ಅಭಿವೃದ್ಧಿಗೆ ₹ 37.29 ಲಕ್ಷ, ಗೋಪಶಿಟ್ಟಾ ರಸ್ತೆಗೆ ₹ 12 ಲಕ್ಷ, ಬೊಗ್ರಿಬೈಲ್ ರಸ್ತೆ ₹ 22 ಲಕ್ಷ, ಹಟ್ಟಿಕೇರಿ ₹ 20 ಲಕ್ಷ, ಹಾರವಾಡ ₹ 10 ಲಕ್ಷದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ’ ಎಂದು ತಿಳಿಸಿದ್ದಾರೆ.

‘ನಮ್ಮ ಗ್ರಾಮ– ನಮ್ಮ ರಸ್ತೆ ಯೋಜನೆಯ ಸುಮಾರು ₹ 65 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಸೇತುವೆ ಕಾಮಗಾರಿಗಳು ನಡೆಯಲಿದ್ದು, ಕಾರವಾರ– ಅಂಕೋಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಮಹಾಪೂರವೇ ಸದ್ಯದಲ್ಲಿಯೇ ಶುರುವಾಗಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.