ADVERTISEMENT

ನಿಡೋಣಿ ಘಟನೆಗೆ ವ್ಯಾಪಕ ಖಂಡನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:50 IST
Last Updated 19 ಜನವರಿ 2017, 5:50 IST
ನಿಡೋಣಿ ಘಟನೆಗೆ ವ್ಯಾಪಕ ಖಂಡನೆ
ನಿಡೋಣಿ ಘಟನೆಗೆ ವ್ಯಾಪಕ ಖಂಡನೆ   

ವಿಜಯಪುರ: ತಾಲ್ಲೂಕಿನ ನಿಡೋಣಿ ಗ್ರಾಮದಲ್ಲಿ ಈಚೆಗೆ ಬಸವೇಶ್ವರರ ಪ್ರತಿಮೆಗೆ ಕಿಡಿಗೇಡಿಗಳು ಅವಮಾನ ಮಾಡಿರುವ ಘಟನೆಯನ್ನು ವಿವಿಧ ಸಮಾಜದ ಮುಖಂಡರು ಖಂಡಿಸಿದ್ದಾರೆ.

ಪ್ರತಿಮೆಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸ ಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಪ್ಪಾರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಜಕ್ಕಪ್ಪ ಯಡವೆ, ಸಿದ್ದು ಗೆರಡೆ, ಸಹದೇವ ಬೆಳಗಲಿ, ಚಂದ್ರಶೇಖರ ಖಂಡೇಕರ, ಮಹಾನಿಂಗ ಉಪ್ಪಾರ, ಅನೀಲ ಹವಳೆ, ಲಕ್ಷ್ಮಣ ಉಪ್ಪಾರ ಇನ್ನಿತರರು ಖಂಡಿಸಿದ್ದಾರೆ.

ಆರೋಪಿಗಳನ್ನು ಬಂಧಿಸಿ ಉಗ್ರ ಶಿಕ್ಷೆ ಗೊಳಪಡಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಅಡಿವೆಪ್ಪ ಸಾಲಗಲ್ಲ ಪ್ರತಿಪಾದಿಸಿದ್ದಾರೆ.
ಮಹಾಪುರಷರ ಪ್ರತಿಮೆಗಳಿಗೆ ಮೇಲಿಂದ ಮೇಲೆ ಅವಮಾನ ಮಾಡು ತ್ತಿರುವ ಘಟನೆಗಳು ನಿರಂತರವಾಗಿ ನಡೆದಿದ್ದು, ಇದನ್ನು ತಡೆಗಟ್ಟಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಂಥ ಘಟನೆ ಮರುಕಳಿಸದಂತೆ ನೋಡಿ ಕೊಳ್ಳಬೇಕು ಎಂದು ಸಮಾಜ ಸೇವಕ ಬಸವರಾಜ ಲಾಳಸಂಗಿ, ಮುದಕಣ್ಣ ಅವಟಿ, ಸಿದ್ರಾಮ ಹಳ್ಳದ, ಶಾಂತೇಶ ಹಲಸಂಗಿ, ರಾಜು ಬೆನ್ನೂರ, ಕುಮಾರ ಗೌಡ ಪಾಟೀಲ ಒತ್ತಾಯಿಸಿದ್ದಾರೆ.

ಪದೇ ಪದೇ ಎಲ್ಲ ಸಮಾಜದ ಮಹಾನ್ ಪುರುಷರಿಗೆ ಅವಮಾನ ಮಾಡುವುದನ್ನು ಬಸವ ಸಮಿತಿ ಖಂಡಿಸುತ್ತದೆ ಎಂದು ಸಮಿತಿ ಮುಖಂಡ ರಾದ ಬಸವರಾಜ ಬೈಚಬಾಳ, ಅಶೋಕ ನಾವಿ, ರಾಘವೇಂದ್ರ ಕಾಪ್ಸೆ, ರಾಜಕುಮಾರ ಸಗಾಯಿ, ಶಿವಾಜಿ ಪಾಟೀಲ, ಅಭಿಷೇಕ ಸಾವಂತ, ಶ್ರೀಧರ ಕುಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅವಮಾನ ಸಹಿಸಲು ಸಾಧ್ಯವಿಲ್ಲ. ದುಷ್ಕರ್ಮಿಗಳ ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು ಎಂದು ಸಂಗಮೇಶ ಬಬಲೇಶ್ವರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.