ADVERTISEMENT

ಬಿಜೆಪಿ ಮುಖಂಡರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2017, 6:07 IST
Last Updated 7 ಸೆಪ್ಟೆಂಬರ್ 2017, 6:07 IST

ಮುದ್ದೇಬಿಹಾಳ: ‘ಮಂಗಳೂರು ಚಲೋ’ ಬೈಕ್‌ ರ್‍್ಯಾಲಿಗೆ ರಾಜ್ಯ ಸರ್ಕಾರ  ತಡೆಯೊಡ್ಡಿದ್ದನ್ನು ಖಂಡಿಸಿ ಇಲ್ಲಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಮಂಗಳವಾರ ಬಸವೇಶ್ವರ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಮಂಗಳಾ ದೇವಿ ಬಿರಾದಾರ, ಮಂಗಳೂರಿಗೆ ಹೋಗಬೇಕೆನ್ನುವ ಬಿಜೆಪಿ ಕಾರ್ಯ ಕರ್ತರ ಶಾಂತಿಯುತ ರ್‍್ಯಾಲಿಗೆ ಅಡ್ಡಿಪಡಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ.

ಇದು ನಾಚಿಕೆಗೇಡಿನದ ಕೃತ್ಯವಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ಮಹಿಳೆ ಅನ್ನೋದನ್ನೂ ಲೆಕ್ಕಿಸದೇ ನೆಲದ ಮೇಲೆ ಎಳೆದಾಡಿದ್ದು ಸರ್ಕಾರದ ವಿಕೃತ ಮನಸ್ಥಿತಿ ತೋರಿಸುತ್ತದೆ. ಶಾಂತಿಯ ನಾಡು ಅಶಾಂತಿಗೊಳಗಾದರೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.

ADVERTISEMENT

ಸಭೆಯನ್ನುದ್ದೇಶಿಸಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಎಸ್ . ಪಾಟೀಲ ಕೂಚಬಾಳ, ಶಿವಶಂಕರಗೌಡ ಹಿರೇಗೌಡರ, ಮಲಕೇಂದ್ರಗೌಡ ಪಾಟೀಲ ಮಾತನಾಡಿದರು.

ಪ್ರಮುಖರಾದ ಮಹಾಂತಪ್ಪಗೌಡ ಪಾಟೀಲ, ನಿಂಗಪ್ಪಗೌಡ ಬಪ್ಪರಗಿ, ಅರವಿಂದ ಕಾಶಿನಕುಂಟಿ, ರಾಜೇಂದ್ರ ಗೌಡ ರಾಯ ಗೊಂಡ, ವಿಶ್ವನಾಥ ಬಬಲೇಶ್ವರ, ರಾಘವೇಂದ್ರ ಬಿಜಾಪುರ, ಇಕ್ಬಾಲ್ ಮೂಲಿಮನಿ, ನದೀಮ ಕಡು, ಬಿ.ಬಿ. ಭೋವಿ, ನಾಗಪ್ಪ ರೂಢಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.