ADVERTISEMENT

ಮೇವಿಗಾಗಿ ಅಹೋರಾತ್ರಿ ಧರಣಿ

2 ಸಾವಿರಕ್ಕೂ ಅಧಿಕ ಜಾನುವಾರು; ಸಮರ್ಪಕ ವಿತರಣೆಗೆ ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಮೇ 2016, 6:22 IST
Last Updated 30 ಮೇ 2016, 6:22 IST

ಹೊರ್ತಿ: ಸಮರ್ಪಕವಾಗಿ ಮೇವು ವಿತರಣೆ ಮಾಡುವಂತೆ ಒತ್ತಾಯಿಸಿ ಸಮೀಪದ ಇಂಚಗೇರಿ ಗ್ರಾಮದಲ್ಲಿ ರೈತರು ಗ್ರಾಮದಲ್ಲಿರುವ ಮೇವು ಬ್ಯಾಂಕಿನ ಮುಂದೆ ಶನಿವಾರ ರಾತ್ರಿಯಿಡಿ ಧರಣಿ ನಡೆಸಿದರು.

ಬ್ಯಾಂಕಿನಿಂದ ವಿತರಣೆ ಮಾಡಿರುವ ಮೇವು ಕೊಳೆತಿದ್ದು, ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆಕ್ಷೇಪಿಸಿದ ರೈತರು, ಈ ಸಂಬಂಧ ಗ್ರಾಮ ಲೆಕ್ಕಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಇಂಚಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಸಾವಿರಕ್ಕೂ ಅಧಿಕ ಜಾನುವಾರುಗಳಿವೆ. ಇವುಗಳಿಗೆ ಪ್ರತಿ ನಾಲ್ಕು ದಿನಕ್ಕೊಮ್ಮೆ ಜಿಲ್ಲಾಡಳಿತ ಮೇವು ಒಗಿಸುತ್ತದೆ. ಆದರೆ, ಜಿಲ್ಲಾಡಳಿತ ಪೂರೈ ಸುವ ಮೇವು ಸಾಕಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ರೈತರ ಪ್ರತಿಭಟನೆ ನಡೆಸುವ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ವಿಠಲ ಕಟಕಧೋಂಡ, ಜಾನುವಾರು ಸಂಖ್ಯೆಗಳಿಗೆ ತಕ್ಕಂತೆ ಮೇವನ್ನು ಉಚಿತವಾಗಿ ವಿತರಿಸಬೇಕು ಎಂದು ಆಗ್ರಹಿಸಿದರು.

ನಂತರ, ಚಡಚಣ ಕಂದಾಯ ನಿರೀಕ್ಷಕ ಎ.ಕೆ.ಅವರಾದಿ, ‘ಎಲ್ಲ ಕಡೆ ಭೀಕರಗಾಲವಿದ್ದು, ಮೇವಿನ ಕೊರತೆ ಯಿದೆ. ಆದರೆ, ಇನ್ನು ಮುಂದೆ ಮೇವಿನ ಕೊರತೆಯಾಗದಂತೆ ನೋಡಿ ಕೊಳ್ಳಲಾ ಗುವುದು ಎಂದು ಭರವಸೆ ನೀಡಿದ ನಂತರ ರೈತರು ಧರಣಿಯನ್ನು ಹಿಂಪಡೆದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ರವಿದಾಸ ಜಾಧವ, ಬಸಯ್ಯ ಅಕ್ಕಿಮಠ, ರೈತರಾದ ಶ್ರೀಮಂತಗೌಡ ಬಿರಾದಾರ, ಭಾವೂರಾಯಗೌಡ ಬಿರಾದಾರ, ರವಿ ದೇವರ, ಕಾಳಪ್ಪ ಬಡಿಗೇರ,  ಮಂಜು ಪರೂತಿ, ರಮೇಶ ಸಾತಲಗಾಂವ, ಅದೀಲ ವಾಲಿಕಾರ. ಶಾಮರಾಯ್ ಕಂಬಾರ, ವಸಂತ ಬಿರಾದಾರ,

ಸಲಿಂ ಬಡೇಘರ, ಚೆನಬಸು ಏಳಗಿ, ಶಮ್ಮು ಮುಲ್ಲಾ,ರೇವಣಸಿದ್ಧ ಬೂದಿಹಾಳ, ಶ್ರೀ ಶೈಲ ಏಳಗಿ, ದಾದಾಫೀರ ಮುಲ್ಲಾ, ಕರಬಸು ಏಳಗಿ, ಮಲ್ಲಪ್ಪ ಬೆಳ್ಳೆನವರ, ರಾಜು ಏಳಗಿ, ಮೀರಾಸಾಬ ವಾಲಿಕಾರ, ವಿನೋಬಗೌಡ ಬಿರಾದಾರ, ಪ್ರದೀಪ ಏಳಗಿ,

ಈರಪ್ಪ ಏಳಗಿ, ಅಮಸಿಧ್ಧ ಬಿರಾದಾರ, ನಿಂಗಪ್ಪ ಅವಟಿ,ಸಿದ್ಧರಾಮ ಏಳಗಿ, ಶಾಂತಪ್ಪ ಬೆಳ್ಳೆನವರ, ಸೋಮನಿಂಗ ಬಿರಾದಾರ ಹಾಗೂ ಸುತ್ತಲಿನ ಗ್ರಾಮಸ್ಥರು ಧರಣಿಯಲ್ಲಿ ಇದ್ದರು.

*
ಬರದಿಂದಾಗಿ ರೈತರು ಜಾನುವಾರುಗಳನ್ನು ಸಾಕುವುದೇ ಕಷ್ಟವಾಗಿದೆ. ಹೀಗಾಗಿ ಜಾನುವಾರು ಸಂಖ್ಯೆಗಳಿಗೆ ತಕ್ಕಂತೆ ಮೇವನ್ನು ಉಚಿತವಾಗಿ ವಿತರಿಸಬೇಕು
ವಿಠಲ ಕಟಕಧೋಂಡ
ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT