ADVERTISEMENT

ಬಡ ವಿದ್ಯಾರ್ಥಿಯ ಹೆಮ್ಮೆಯ ಸಾಧನೆ

ಬಡತನ ಮೆಟ್ಟಿನಿಂತ ಹಳ್ಳಿ ಪ್ರತಿಭೆಗೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ

ಭೀಮಶೇನರಾವ ಕುಲಕರ್ಣಿ
Published 15 ಮೇ 2017, 5:53 IST
Last Updated 15 ಮೇ 2017, 5:53 IST
ಬಡ ವಿದ್ಯಾರ್ಥಿಯ ಹೆಮ್ಮೆಯ ಸಾಧನೆ
ಬಡ ವಿದ್ಯಾರ್ಥಿಯ ಹೆಮ್ಮೆಯ ಸಾಧನೆ   
ಹುಣಸಗಿ: ‘ಬಡತನ, ಹಸಿವು ಕಲಿಸುವ ಜೀವನದ ಪಾಠವೇ, ನಾನು ಚನ್ನಾಗಿ ಅಭ್ಯಾಸ ಮಾಡಿ ಮುಂದೆ ಬರಬೇಕು ಎಂಬ ಛಲ ಮೂಡಿಸಿತು’ ಎಂದು ಪಿಯುನಲ್ಲಿ ಭಾರಿ ಸಾಧನೆ ಮಾಡಿದ ಗ್ರಾಮೀಣ ಬಡ ವಿದ್ಯಾರ್ಥಿ ಧರೇಶ ಅಮರಪ್ಪ ತಮದೊಡ್ಡಿ ‘ಪ್ರಜಾವಾಣಿ’ ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.
 
ಸಮೀಪದ ಯಡಹಳ್ಳಿ ಗ್ರಾಮದ ಧರೇಶ, ವಿಜಯಪುರ ಜಿಲ್ಲೆಯ ತಾಳಿ ಕೋಟೆ ಎಸ್.ಕೆ ಪದವಿಪೂರ್ವ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದು,  ವಿಜಯಪುರ ಜಿಲ್ಲೆಗೆ ದ್ವಿತಿಯ ಸ್ಥಾನ ಪಡೆದಿದ್ದಾರೆ.  
 
‘ಬಡತನ, ತಂದೆಯ ಸಾವು, ‘ಪ್ರಜಾವಾಣಿ’ ವರದಿ, ಮೂರು ಎಕರೆ ಹೊಲದಲ್ಲಿ ದುಡಿಯುತ್ತಿರುವ ನಾಲ್ಕು ಜನ ಅಣ್ಣ ತಮ್ಮಂದಿರ ದೃಶ್ಯ ಕಣ್ಣ ಮುಂದೆ ಬಂದಾಗ ಅವರನ್ನು ಕಷ್ಟದಿಂದ ಮುಕ್ತಿಗೊಳಿಸಬೇಕೆಂಬ ಛಲದಿಂದಲೇ ಅಭ್ಯಾಸದಲ್ಲಿ ನಿರತನಾದೆ. ಆ ದೇವರು ನನ್ನ ಪರಿಶ್ರಮಕ್ಕೆ ಪ್ರತಿಫಲ ಕೊಟ್ಟಿದ್ದಾನೆ’ ಎಂದು ಕಣ್ಣಿರು ಒರೆಸಿಕೊಳ್ಳುತ್ತಾ ನೋವು ಹಂಚಿಕೊಂಡರು.
 
1ರಿಂದ 5ನೇ ತರಗತಿಯವರೆಗೆ ಸರ್ಕಾರಿ ಪ್ರಾಥಮಿಕ ಶಾಲೆ ಅಗತೀರ್ಥದಲ್ಲಿ ಪೂರೈಸಿ, ಜೇವರ್ಗಿ ತಾಲ್ಲೂಕಿನ ನೆಲೋಗಿಯ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗೆ ಅಭ್ಯಾಸ ಮಾಡಿದ್ದಾನೆ. 
 
ತಾಳಿಕೋಟೆಯ ಎಸ್.ಕೆ ಪಿಯು ಕಾಲೇಜನಲ್ಲಿ ಶಿಕ್ಷಣ ವಿಭಾಗದಲ್ಲಿ ಪ್ರವೇಶ ಪಡೆದು, ಶೇ 95.16 ಫಲಿತಾಂಶ ಪಡೆದಿದ್ದು, ಇತಿಹಾಸದಲ್ಲಿ 100, ಶಿಕ್ಷಣ ದಲ್ಲಿ 100, ಸಮಾಜಶಾಸ್ತ್ರದಲ್ಲಿ 98 ಅರ್ಥಶಾಸ್ತ್ರದಲ್ಲಿ 97 ಅಂಕ ಪಡೆದು ಸಾಧನೆ ಮಾಡಿದ್ದಾನೆ.  
 
ಉಪನ್ಯಾಸಕರ ಮಾರ್ಗದರ್ಶನ: ‘ಬಡ ವಿದ್ಯಾರ್ಥಿಯಾಗಿದ್ದ ನನಗೆ ಪ್ರತಿಯೊಂದು ವಿಷಯದಲ್ಲಿಯೂ ನಮ್ಮ ಮಹಾವಿದ್ಯಾ ಲಯದ ಉಪನ್ಯಾಸಕರು ಮಾರ್ಗ ದರ್ಶನ ಮಾಡಿದ್ದಾರೆ.  ಬಿ.ಎನ್. ನಾಟೀಕಾರ, ಕಿಶೋರಕುಮಾರ, ಎಚ್. ಬಿ.ನಾಯಕ, ಎಸ್.ಎಸ್.ನೆಲ್ಲಗಿ, ಜಮ್ಮಲ ದಿನ್ನಿ ಮುಂತಾದವರು ಪ್ರತಿಯೊಂದು ಪ್ರಶ್ನೆಗೂ ಯಾವ ರೀತಿ ಉತ್ತರಿಸಬೇಕು ಎಂದು ಬರವಣಿಗೆಯ ಪದ್ಧತಿಯ ಕುರಿತು ತಿಳಿಸಿಕೊಟ್ಟಿದ್ದರಿಂದಲೇ ಈ ಸಾಧನೆ ಮಾಡಲು ಸಹಾಯವಾಯಿತು. ಶಾಲೆಯಲ್ಲಿನ ಬಿಸಿ ಊಟದ ಸಾಂಬರ್‌ ತಂದು ಊಟ ಮಾಡಿ ನಿತ್ಯ ಐದು ತಾಸು ಅಭ್ಯಾಸದಲ್ಲಿ ನಿರತನಾಗುತ್ತಿದ್ದೆ’ ಎಂದು ಅಭ್ಯಾಸದ ಕುರಿತು ಹೇಳುತ್ತಾನೆ. 
 
ಪಾಠದ ಸಂದರ್ಭದಲ್ಲಿ ಪ್ರತಿಯೊಬ್ಬ ಸಾಧಕರ ಜೀವನ ಸಾಧನೆಯನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಲು ಹೇಳುತ್ತಿ ದ್ದರು. ಗುಲಾಮನಾಗಿದ್ದ ಕುತ್ಬುಬುದ್ದೀನ್ ಐಬಕ್ ಸತತ ಪರಿಶ್ರಮದಿಂದ ಅರಸ ನಾದ. ಎಲ್ಲ ಅರ್ಹತೆಗಳಿರುವ ನೀವು ಸಾಧನೆ ಮಾಡಿದರೇ ದೊಡ್ಡ ಹುದ್ದೆ ಅಲಂಕರಿಸುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳುತ್ತಿದ್ದರು ಎಂದು ತಿಳಿಸಿದರು.
 
‘ಪ್ರಜಾವಾಣಿ’ ಸ್ಫೂರ್ತಿ: ಕಳೆದ ಎರಡು ವರ್ಷಗಳಿಂದಲೂನಮ್ಮೂರಿನ(ಯಡಹಳ್ಳಿ) ವಿದ್ಯಾರ್ಥಿಗಳು ಶೇ 90ರಷ್ಟು ಅಂಕ ಪಡೆದು ಸಾಧನೆ ಮಾಡಿದ ವರದಿಗಳು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟ ವಾಗಿದ್ದವು. ಇದನ್ನು ಕೇಳಿದ ನನ್ನ ತಾಯಿ ನೀನು ಇವರಂತೆ ಪತ್ರಿಕೆಯಲ್ಲಿ ಬರುವಂತಾಗಬೇಕೆಂದು ತಿಳಿಸಿದ್ದರು. ಇದನ್ನೇ ಗುರಿಯಾಗಿಟ್ಟುಕೊಂಡು ಮುನ್ನಡೆದಿದ್ದು ‘ಪ್ರಜಾವಾಣಿ’ಯೂ ನನಗೆ ಸ್ಫೂರ್ತಿ ತುಂಬಿದೆ ಎಂದು ಪತ್ರಿಕೆಯ ಕುರಿತು ಸಂತಸ ಮಾತುಗಳನ್ನು ಹೇಳಿದರು.
 
ದಾನಿಗಳ ಸಹಾಯದಿಂದ ಮುಂದೆ ಯೂ ಕೂಡಾ ಚನ್ನಾಗಿ ಅಧ್ಯಯನ ಮಾಡಿ ತಹಶೀಲ್ದಾರ್ ಆಗುವ ಕನಸು ಇಟ್ಟುಕೊಂಡಿದ್ದು, ಈ ದಿಕ್ಕಿನಲ್ಲಿ ಮುನ್ನ ಡೆಯುವುದಾಗಿ ಹೇಳಿದರು.
–ಭೀಮಶೇನರಾವ ಕುಲಕರ್ಣಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.