ADVERTISEMENT

‘ಶುದ್ಧ ಕುಡಿವ ನೀರಿನ ಘಟಕ ನಿಮ್ಮ ಆಸ್ತಿ’

​ಪ್ರಜಾವಾಣಿ ವಾರ್ತೆ
Published 27 ಮೇ 2017, 7:20 IST
Last Updated 27 ಮೇ 2017, 7:20 IST

ಯಾದಗಿರಿ: ‘ಹಳ್ಳಿಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಕಾಂಗ್ರೆಸ್‌ ಸರ್ಕಾರ ನಿರ್ಮಾಣ ಮಾಡಿದ್ದು, ನೀರನ್ನು ಮಿತವಾಗಿ ಬಳಸಿ ಮುಂದಿನ ಪೀಳಿಗೆಗೆ ಜೋಪಾನ ಮಾಡಬೇಕಿದೆ’ ಎಂದು ಎಂದು ಶಾಸಕ ಡಾ.ಎ.ಬಿ.ಮಾಲಕರೆಡ್ಡಿ ಹೇಳಿದರು.

ಸಮೀಪದ ಬಿಳ್ಹಾರ ಗ್ರಾಮದಲ್ಲಿ ಶುಕ್ರವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಡಿ.ದೇವರಾಜ ಅರಸ್ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮೀಣ ಜನರು ಅಶುದ್ಧ ನೀರು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳ ಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ’ ಎಂದು ತಿಳಿಸಿದರು.
‘ಈ ಶುದ್ಧ ನೀರಿನ ಘಟಕ ನಿಮ್ಮೂರಿನ ಆಸ್ತಿ. ಇದನ್ನು ಹಾಳು ಮಾಡದೇ ಚೆನ್ನಾಗಿ ಇಟ್ಟುಕೊಳ್ಳಬೇಕು ಅಂದಾಗ ಈ ಘಟಕ ಬಹುದಿನಗಳ ಕಾಲ ಬಾಳಿಕೆ ಬರುತ್ತದೆ. ಒಂದು ವೇಳೆ ನಿರ್ಲಕ್ಯ ತೋರಿದರೆ ಅಶುದ್ಧ ನೀರು ಸೇವಿಸ ಬೇಕಾಗುತ್ತದೆ. ಇದನ್ನು ಎಲ್ಲರೂ ಅರಿತು ಕೊಳ್ಳಬೇಕು’ ಎಂದು ತಿಳಿ ಹೇಳಿದರು.

ADVERTISEMENT

‘ವಡಗೇರಾ ಭಾಗದ ರೈತರ ಅನುಕೂಲಕ್ಕಾಗಿ ಇನ್ನೂ ಎರಡು ಬ್ರೀಜ್‌ ಕಂ ಬ್ಯಾರೇಜ್ ನಿರ್ಮಾಣ ಕಾಮಾಗಾರಿ ಶೀಘ್ರ ಆರಂಭವಾಗಲಿದೆ. ಅನ್ನದಾತರು ಎದೆಗುಂದದೆ ಧೈರ್ಯದಿಂದ ಉಳುಮೆ ಮಾಡಿ ಜೀವನ ಸಾಗಿಸಬೇಕು’ ಎಂದರು.

ಗೋನಾಲ, ಅಗ್ನಿನಾಳ, ಬೆಂಡ ಬೆಂಬಳ್ಳಿ, ತುಮುಕೂರು ಗ್ರಾಮದಲ್ಲಿ ₹ 12ಲಕ್ಷ ರೂಪಾಯಿ ವೆಚ್ಚದದಲ್ಲಿ ನಿರ್ಮಾಣ ಮಾಡಿರುವ ಶುದ್ಧನೀರಿನ ಕುಡಿಯುವ ಘಟಕಗಳನ್ನೂ ಶಾಸಕರು ಉದ್ಘಾಟಿಸಿದರು.

ಕ್ ಕಾಂಗ್ರೆಸ್ ಅಧ್ಯಕ್ಷ ಮರೆಪ್ಪ ಬಿಳ್ಹಾರ, ಮುಖಂಡ ಸದಾಶಿವಪ್ಪಗೌಡ ರೋಟ್ನಡಗಿ, ತೇಜಪ್ಪಗೌಡ ಬಿಳ್ಹಾರ, ನಾಗರಾಜಮಡ್ಡಿ, ಬಸ್ಸುಗೌಡ ಬಿಳ್ಹಾರ, ಮಾಣಿಕರೆಡ್ಡಿ ಕುರುಕುಂದಿ, ಚಂದ್ರ ಶೇಖರಗೌಡ ಗೋನಾಲ, ಶಾಂತಗೌಡ ಬೆಂಡಬೆಂಬಳ್ಳಿ ಗ್ರಾಪಂ ಉಪಾಧ್ಯಕ್ಷಿ ತಾಯಮ್ಮ, ಗ್ರಾಮ ಪಂಚಾಯಿತಿ ಪಿಡಿಒ ವಿಶ್ವನಾಥ ಮುಂಡಾಸ್, ಮಲ್ಲು ಶಿವಪೂರ, ರಾಜುಕುಮಾರ ಪತ್ತಾರ, ಎಇ ಸೂಗರಡ್ಡಿ, ನಿಂಗಪ್ಪ ಎಕ್ಕೆಲಿ, ಮಹಾದೇವರೆಡ್ಡಿ, ಶರಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.