ADVERTISEMENT

ಸಂಗೀತದಿಂದ ಮಾನಸಿಕ ನೆಮ್ಮದಿ ಸಾಧ್ಯ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 8:56 IST
Last Updated 31 ಡಿಸೆಂಬರ್ 2016, 8:56 IST

ಹುಣಸಗಿ:  ಇಂದಿನ ಒತ್ತಡದ ಬದುಕಿ ನಲ್ಲಿ ಸಂಗೀತ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ.ಪಾಟೀಲ ತಿಳಿಸಿದರು.
ಹುಣಸಗಿ ಸಮೀಪದ ರಾಜನಕೊಳೂರ ಗ್ರಾಮದ ಅಮರೇಶ್ವರ ಮಠದ ಆವರಣದಲ್ಲಿ ಆಮಲಿಂಗೇಶ್ವರ ಸಂಗೀತ ಹಾಗೂ ಸಾಂಸ್ಕೃತಿಕ ನಿಸರ್ಗ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗುರು ವಾರ ರಾತ್ರಿ ನಡೆದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹಿಂದೆ ರಾಜರ ಕಾಲದಲ್ಲಿ ಸಂಗೀತ ಹಾಗೂ ಕಲಾವಿದರನ್ನು ಪೋಷಿ ಸಲಾಗುತ್ತಿತ್ತು. ಸಂಗೀತಕ್ಕೆ ಮನ ಸೋಲ ದವರು ಯಾರೂ ಇಲ್ಲ. ಸಂಗೀತಕ್ಕೆ ಅಂತಹ ಶಕ್ತಿ ಇದೆ ಎಂದು ಹೇಳಿದರು.

ಕೊಡೇಕಲ್ಲ ದುರದುಂಡೇಶ್ವರ ಮಠದ ಶಿವಕುಮಾರ ದೇವರು ಆಶಿರ್ವಚನ ನೀಡಿ, ಇಂದಿನ ಪಾಲಕರು ಮಕ್ಕಳಿಗೆ ಕೇವಲ ಎಂಜಿನಿಯರ್, ಡಾಕ್ಟರ್ ಮಾಡುವ ಅಭಿಲಾಷೆ ಹೊಂದಿರುತ್ತಾರೆ. ಆದರೆ ಮಕ್ಕಳ ಅಭಿರುಚಿಗೆ ತಕ್ಕಂತೆ ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಬಸವರಾಜ ಸ್ಥಾವರಮಠ, ಮುಖಂಡ ರಾದ, ಬಸನಗೌಡ ಅಳ್ಳಿಕೋಟಿ, ಸಂಗನಗೌಡ ಮಾಗನೂರ, ರಾಮ ನಗೌಡ ವಠಾರ, ತಿರುಪತಿ ದದ್ದಲ, ರಾಚ ಯ್ಯಸ್ವಾಮಿ ಹಿರೇಮಠ, ಮುಂತಾದವರು ಇದ್ದರು. ಶಾರದಾ ಲತಾ ಹಿರೇಮಠ ಹಾಗೂ ಸಿದ್ದಲಿಂಗಯ್ಯ ಮಠ ಅವ ರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಇದೇ ಸಂದ ರ್ಭದಲ್ಲಿ ಕಲಾವಿದ ಸಿದ್ರಾಮಪ್ಪ ಪೊಲೀಸ್‌ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.