ADVERTISEMENT

ಹೆದ್ದಾರಿಯಲ್ಲಿ ತೊಗರಿ ಸುರಿದು ಪ್ರತಿಭಟನೆ

ತೊಗರಿ ಖರೀದಿ ಕೇಂದ್ರ ಸ್ಥಾಪಿಸಲು ಪ್ರಾಂತ ರೈತ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:42 IST
Last Updated 18 ಜನವರಿ 2017, 5:42 IST
ಹೆದ್ದಾರಿಯಲ್ಲಿ ತೊಗರಿ ಸುರಿದು ಪ್ರತಿಭಟನೆ
ಹೆದ್ದಾರಿಯಲ್ಲಿ ತೊಗರಿ ಸುರಿದು ಪ್ರತಿಭಟನೆ   

ಕೆಂಭಾವಿ:  ಕರ್ನಾಟಕ ಪ್ರಾಂತ ರೈತ ಸಂಘದ ಕೆಂಭಾವಿ ಹೋಬಳಿ ಶಾಖೆ ವತಿಯಿಂದ ಕೆಂಭಾವಿ ಹತ್ತಿರದ ಸುರ ಪುರ ಹುನಗುಂದ ರಾಜ್ಯ ಹೆದ್ದಾರಿಯ ಮೇಲೆ ತೊಗರಿ ಸುರಿದು ತೊಗರಿ ಖರೀದಿ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿ ಪ್ರತಿ ಭಟನೆ ನಡೆಸಲಾಯಿತು.

ಸಂಘದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಚಿನ್ನಾ ಕಾರ ಮಾತನಾಡಿ, ‘ಡಾ. ಸ್ವಾಮಿನಾಥನ್ ವರದಿ ಪ್ರಕಾರ ತೊಗರಿಗೆ ₹ 7ಸಾವಿರ,  ಹತ್ತಿಗೆ ₹ 8 ಸಾವಿರ, ಭತ್ತಕ್ಕೆ ₹2,600 ಬೆಂಬಲ ಬೆಲೆಯನ್ನು ಘೋಷಿ ಸಬೇಕು’ ಎಂದು ಆಗ್ರಹಿಸಿದರು.

‘ಯಾವುದೇ ಷರತ್ತು ವಿಧಿಸದೆ ತೊಗರಿ ಖರೀದಿಸಬೇಕು. ಕೆಂಭಾವಿಯಲ್ಲಿ ಶೀಘ್ರ ತೊಗರಿ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಅಧಿಕಾರಿಗಳು, ಜನ ಪ್ರತಿನಿಧಿಗಳು ಸುಳ್ಳು ಭರವಸೆ ನಿಡುತ್ತಾ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ತೊಗರಿ ಖರೀದಿ ಕೇಂದ್ರ ಪ್ರಾರಂಭ ವಾಗುವವರೆಗೆ ನಾವು ಕದಲುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಚಿಂಚೋಳಿ ಮಾತನಾಡಿ, ‘ಪ್ರತಿ ಹೋಬಳಿ ಕೇಂದ್ರಕ್ಕೊಂದು ತೊಗರಿ ಖರೀದಿ ಕೇಂದ್ರ  ತೆರೆಯಬೇಕು. ಇವುಗಳನ್ನು ಖರೀದಿಸಿ ವಸತಿ ನಿಲಯ ಶಾಲೆಯ ಬಿಸಿ ಊಟಕ್ಕೆ, ಪಡಿತರಕ್ಕೆ ಉಪಯೋಗಿಸಿಕೊಂಡು ರೈತರಿಗೆ ಹೆಚ್ಚಿನ ಲಾಭ ಬರುವಂತೆ ಮಾಡಬೇಕು’ ಎಂದರು.

ಸ್ಥಳಕ್ಕೆ ಸುರಪುರ ತಹಶೀಲ್ದಾರ್‌ ಸುರೇಶ ಅಂಕಲಗಿ ಭೇಟಿ ನೀಡಿ ಪ್ರತಿ ಭಟನಾ ನಿರತರೊಂದಿಗೆ ಮಾತನಾಡಿ, ‘ತೊಗರಿ ಖರೀದಿ ಕೇಂದ್ರ ಪ್ರಾರಂಭಿಸುವ ವಿಷಯವಾಗಿ ಈಗಾಗಲೇ ಜಿಲ್ಲಾಧಿಕಾರಿ ಮು ಖಾಂತರ ತೊಗರಿ ಮಂಡಳಿಗೆ ಪ್ರಸ್ತಾವ ಹೋಗಿದೆ. ಮಂಡಳಿಯ ಅಧ್ಯಕ್ಷರು ಕೂಡ ಸ್ಥಾಪನೆ ಮಾಡ ಲಾಗುವುದು ಎಂದು ಹೇಳಿದ್ದಾರೆ. 3–4 ದಿನ ಕಾಲಕಾಶ ಬೇಕಾಗುತ್ತದೆ’ ಎಂದರು.

‘ಇದೇ ರೀತಿ ಸುಳ್ಳು ಭರವಸೆ ನೀಡುತ್ತಿದ್ದಿರಿ. ಈ ಕುರಿತು ಹಲವು ಬಾರಿ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜ ನವಾಗಿಲ್ಲ’ ಎಂದು ಪ್ರತಿ ಭಟನಾ ನಿರತರು ದೂರಿದರು.

ಉಪವಿಭಾಗಾಧಿಕಾರಿಯೊಂದಿಗೆ ದೂರವಾಣಿ ಮುಖಾಂತರ ರೈತ ಮುಖಂಡ ರೊಂದಿಗೆ ಮಾತ ನಾಡಿಸಿದರೂ ಯಾವುದೇ ಪ್ರಯೋಜ ವಾಗಲಿಲ್ಲ. ಅಹೋರಾತ್ರಿ ಧರಣಿ ನಡೆ ಸಲಾಗುವುದು ಎಂದು ಪ್ರತಿ ಭಟನಾಕಾರರು ತಿಳಿಸಿದರು. 

ತಹಶೀಲ್ದಾರ್‌ ಅಂಕಲಗಿ, ಉಪತಹಶೀಲ್ದಾರ್‌ ಆನಂದ, ಕಂದಾಯ ನಿರೀಕ್ಷಕ ಕಲ್ಲಪ್ಪ, ವಾಪಸ್ ತೆರಳಿದರು. ರಾಜ್ಯ ಹೆದ್ದಾರಿ ಮೇಲೆ ಪ್ರತಿಭಟನೆ ಮಾಡಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಆಗಿ, ಪ್ರಯಾಣಿಕರಿಗೆ ತೀವ್ರ ತೊಂದ ರೆಯಾಯಿತು. ಸವಾರರು ಮಾರ್ಗ ಬದಲಿಸಿ ಸಂಚ ರಿಸ ಬೇಕಾ ಯಿತು. ಪಿಎಸ್ಐ ಅರು ಣಕುಮಾರ ಬಂದೋಬಸ್ತ್‌ ಕಲ್ಪಿಸಿದ್ದರು.

ಪದಾಧಿಕಾರಿಗಳಾದ ರಾಮನಗೌಡ ಗೂಗಲ್, ಬಾಪುಗೌಡ ಯಾಳಗಿ, ಖಾಜಾಪಟೇಲ ಕಾಚೂರ, ಹಲವಾರು ರೈತ ಮುಖಂಡರು ಉಪಸ್ಥಿತರಿದ್ದರು.
ಸುರಪುರ ತೊಗರಿ ಕೇಂದ್ರ ಸ್ಥಗಿತ ಖಂಡಿಸಿ ರೈತರಿಂದ ಪ್ರತಿಭಟನೆ: ಕಳೆದ 4 ದಿನಗಳಿಂದ ತೊಗರಿ ಖರೀದಿ ಕೇಂದ್ರ ಬಂದ್ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಬಸವ ಸಾಗರ ರೈತ ಹಿತರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಹಸನಾಪುರದ ರಾಜಾ ನಾಲ್ವಡಿ ವೆಂಕಟಪ್ಪನಾಯಕ ವೃತ್ತದಲ್ಲಿ ಮಂಗಳವಾರ ನೂರಾರು ರೈತರು ಪ್ರತಿಭಟನೆ ನಡೆಸಿದರು.

ಖರೀದಿ ಕೇಂದ್ರ ಆರಂಭಿಸುವಂತೆ ಸೋಮವಾರ ರೈತರು ಕೇಂದ್ರದ ಮುಂದೆ ಪ್ರತಿಭಟಿಸಿದ್ದರು. ಮಂಗಳವಾರ ಆರಂಭಿಸುವುದಾಗಿ ಎಪಿಎಂಸಿ ಸಮಿತಿಯವರು ಭರವಸೆ ನೀಡಿದ್ದರು. ಆದರೆ ಮಂಗಳವಾರ 12 ಗಂಟೆ ಯಾದರೂ ಕೇಂದ್ರದ ಬಾಗಿಲು ತೆರೆ ಯದೆ ಇದ್ದದ್ದು ರೈತರ ಆಕ್ರೋಶಕ್ಕೆ ಕಾರ ಣವಾಯಿತು. ರೈತರು ರಾಜ್ಯ ಹೆದ್ದಾರಿ ತಡೆದು ಮುಷ್ಕರ ನಡೆಸಿದರು. ತಹಶೀಲ್ದಾರ್ ಸುರೇಶ ಅಂಕಲಗಿ ಸ್ಥಳಕ್ಕೆ ಬಂದು ರೈತರೊಂದಿಗೆ ಚರ್ಚಿಸಿ, ಪ್ರತಿ ಭಟನೆ ಕೈ ಬಿಡುವಂತೆ ಮನವಿ ಮಾಡಿದರು.

‘ತೊಗರಿ ಮಾರಾಟ ಮಾಡಿಯೇ ಮನೆಗೆ ಗೋಗುತ್ತೇವೆ. ಹಾಗೇ ಹೋಗಿ ಹೆಂಡರು ಮಕ್ಕಳಿಗೆ ಮುಖ ತೋರಿಸುವುದಿಲ್ಲ. ಜೀವ ಕೊಡಲು ಸಿದ್ದರಿದ್ದೇವೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ಬಾಗಿಲು ತೆಗೆ ಯುವವರೆಗೂ ಪ್ರತಿಭಟನೆ ಹಿಂಪ ಡೆಯುವುದಿಲ್ಲ ಎಂದು ಪಟ್ಟು ಹಿಡಿದರು.
ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಣ್ಣ ಹಾಲಭಾವಿ ಮಾತನಾಡಿ, ‘ನಾಲ್ಕು ದಿನಗಳಿಂದ ಕೇಂದ್ರದ ಬಾಗಿಲು ತೆರೆದಿಲ್ಲ. ಈ ಬಗ್ಗೆ ಯಾವೊಬ್ಬ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ರೈತರು ಮೈ ಕೊರೆಯುವ ಚಳಿ ಲೆಕ್ಕಿಸದೆ ಹಬ್ಬ ಆಚರಿಸದೆ ಇಲ್ಲಿಯೇ ಮಲಗಿದ್ದಾರೆ. ಆದರೆ ಅಧಿಕಾರಿಗಳಿಗೆ ರೈತರ ಕಷ್ಟದ ಬಗ್ಗೆ ಕಾಳಜಿಯೇ ಇಲ್ಲ’ ಎಂದು ಆರೋಪಿಸಿದರು.

‘ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಪ್ರತಿನಿತ್ಯ ಕೇಂದ್ರಕ್ಕೆ ತೊಗರಿ ಆವಕ ಹೆಚ್ಚಾಗುತ್ತಿದೆ. ಇದರಿಂದ ರೈತರು ಕಾಯುವಂತಾಗಿದೆ. ನಾಲ್ಕು ದಿನಗಳಿಂದ ಜಮಾವಣೆಗೊಂಡ ತೊಗರಿ ಖರೀದಿ ಆಗುವವರೆಗೂ ಇನ್ನೊಬ್ಬರ ತೊಗರಿ ಖರೀದಿ ಮಾಡಬಾರದು. ಬರುವ ಎಲ್ಲ ತೊಗರಿ ಯನ್ನು ಕಡ್ಡಾಯವಾಗಿ ಖರೀದಿ ಸಬೇಕು. ರಜಾ ದಿನಗಳಲ್ಲೂ ಕೇಂದ್ರ ತೆರೆಯಬೇಕು. ಈಗಿರುವ ಬೆಲೆಯನ್ನು ₹8 ಸಾವಿರಕ್ಕೆ ಹೆಚ್ಚಿಸಬೇಕು. ತಾಲೂಕಿನ ಕೆಂಭಾವಿ, ಕಕ್ಕೇರಾ, ಹುಣಸಗಿಯಲ್ಲಿ ಖರೀದಿ ಕೇಂದ್ರ ಆರಂಬಿಸಬೇಕು’ ಎಂದು ಒತ್ತಾಯಿಸಿದರು.

ತಹಶೀಲ್ದಾರ್‌ ಖರೀದಿ ಕೇಂದ್ರದ ವ್ಯವಸ್ಥಾಪಕರನ್ನು ಸ್ಥಳಕ್ಕೆ ಕರೆಸಿ ಕೊಂಡರು. ಕೇಂದ್ರದ ಬಾಗಿಲು ತೆರೆದು ಖರೀದಿ ಆರಂಭಿಸುವಂತೆ ಸೂಚಿ ಸಿದರು. ಖರೀದಿ ಆರಂಭಗೊಂಡ ನಂತ ರ ಪ್ರತಿಭಟನೆ ಹಿಂಪಡೆಯಲಾಯಿತು. ಬಸವರಾಜಪ್ಪಗೌಡ ಹೆಮ್ಮಡಗಿ, ಸೋಮಶೇಖರ ಶಾಬಾದಿ, ಶಿವುರುದ್ರ ಉಳ್ಳಿ, ಶಿವುಕುಮಾರ ರುಮಾಲ, ಪ್ರಕಾಶ ಲಕ್ಷ್ಮೀಪುರ, ಶಾಂತಪ್ಪ ರತ್ತಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.