ADVERTISEMENT

‘ಜಮೀನು ಬಿಡಲೊಪ್ಪದ ರೈತರು’

ತಾಲ್ಲೂಕಿನ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಮುಂದುವರಿದ ಗೊಂದಲ

ಚಿದಂಬರ ಪ್ರಸಾದ್
Published 4 ಜುಲೈ 2015, 7:49 IST
Last Updated 4 ಜುಲೈ 2015, 7:49 IST

ಯಾದಗಿರಿ:  ಜಿಲ್ಲೆಯಲ್ಲಿ ಬಹು ನಿರೀಕ್ಷಿತ ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಕುಂಟು ತ್ತಲೇ ಸಾಗಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ.

ತಾಲ್ಲೂಕಿನ ಕಡೇಚೂರು, ಬಾಡಿ ಯಾಳ, ಶೆಟ್ಟಿಹಳ್ಳಿ ಗ್ರಾಮಗಳ ಸುಮಾರು 3,232 ಎಕರೆ ಜಮೀನನ್ನು ಕೈಗಾರಿಕೆ ಪ್ರದೇಶಕ್ಕಾಗಿ ಸ್ವಾಧೀನ ಪಡಿಸಿಕೊಳ್ಳ ಲಾಗಿದೆ. ಈ ಪೈಕಿ 2,620 ಎಕರೆ ಜಮೀನಿಗೆ ಸರ್ಕಾರದಿಂದ ಪರಿಹಾರ ವನ್ನೂ ವಿತರಿಸಲಾಗಿದೆ. ಇನ್ನುಳಿದ ಸುಮಾರು 700 ಎಕರೆ ಜಮೀನಿನ ಮಾಲೀಕರಿಗೆ ಪರಿಹಾರ ನೀಡಬೇಕಾಗಿದೆ.

ಈ ಕೈಗಾರಿಕಾ ಪ್ರದೇಶದಲ್ಲಿ ಕೋಕಾ ಕೋಲಾ, ರೈಲ್ವೆ ಬೋಗಿ ಕಾರ್ಖಾನೆ, ಸೇರಿದಂತೆ ಸುಮಾರು 45 ಕೈಗಾರಿಕೆಗಳ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಈ ಪೈಕಿ ರೈಲ್ವೆ ಬೋಗಿ ಕಾರ್ಖಾನೆಗೆ ಈಗಾಗಲೇ ₨ 150 ಕೋಟಿ ಅನುದಾನ ಬಿಡುಗಡೆಯಾ ಗಿದ್ದು, ಕಾಮಗಾರಿ ಬಿರುಸಿನಿಂದ ಸಾಗಿದೆ. ಇನ್ನೊಂದೆಡೆ ಕೋಕಾ ಕೋಲಾ ಕಂಪೆನಿ ಸಹ ಈ ಪ್ರದೇಶದಲ್ಲಿ ಘಟಕ ಸ್ಥಾಪನೆಗೆ ಸಾಕಷ್ಟು ಉತ್ಸುಕತೆ ತೋರುತ್ತಿದೆ.

ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದ ಕೋಕಾ ಕೋಲಾ ಕಂಪೆನಿಯ ಪ್ರತಿನಿಧಿ ಗಳು, ಘಟಕದ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದಾ ದರೂ ತೊಂದರೆ ಇದ್ದಲ್ಲಿ, ನಿವಾರಿಸಿ ಕೊಡುವಂತೆ ಕೆಐಡಿಬಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದರ ಫಲವಾಗಿ ಕೆಐಡಿಬಿ ಅಧಿಕಾರಿಗಳು ಇತ್ತೀಚೆಗೆ ಕಡೇ ಚೂರು ಕೈಗಾರಿಕಾ ಪ್ರದೇಶದಲ್ಲಿ ಮಣ್ಣಿನ ಪರೀಕ್ಷೆಗೆ ಮುಂದಾಗಿದ್ದರು. ಈ ಸಂದರ್ಭ ದಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ಬಿತ್ತಿರುವ ಬೆಳೆಯನ್ನು ಹಾಳು ಮಾಡುವು ದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.

ಅಲ್ಲದೇ ಜಮೀನಿನ ಮಾಲೀಕರು, ಕೈಗಾ ರಿಕೆಗಳಿಗೆ ನೀಡಿರುವ ಜಮೀನಿನ ಪರಿ ಹಾರವನ್ನು ಹೆಚ್ಚಿಸುವಂತೆ ಆಗ್ರಹಿಸುತ್ತಿದ್ದಾರೆ.ಒಂದೆಡೆ ಕೈಗಾರಿಕಾ ಘಟಕಗಳ ಸ್ಥಾಪ ನೆಗೆ ಕಂಪೆನಿಗಳು ಉತ್ಸುಕತೆ ತೋರುತ್ತಿ ದ್ದರೆ, ಇನ್ನೊಂದೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಯ ಗೊಂದಲ ಮುಂದುವರಿ ಯುವಂತಾಗಿದೆ.

ಕೈಗಾರಿಕೆಗಳ ಸ್ಥಾಪನೆಗೆ ಸೌಲಭ್ಯ ಇನ್ನೂ ಮರಿಚಿಕೆ:  ಜಿಲ್ಲೆಯ ಕಡೇಚೂರು–ಬಾಡಿ ಯಾಳ ಗ್ರಾಮದ ಬಳಿ ಒಟ್ಟು 3,232 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳ ಲಾಗಿದ್ದು, ಇದುವರೆಗೂ ಈ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಸೌಕರ್ಯ ಗಳು ಇಲ್ಲದಾಗಿವೆ.ಈ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪ ನೆಗೆ ಅಗತ್ಯವಾಗಿರುವ ವಿದ್ಯುತ್‌, ನೀರು, ರಸ್ತೆ ಸಂಪರ್ಕದಂತಹ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಇನ್ನೂ ಆರಂಭವಾಗಿಲ್ಲ.

ಇತ್ತೀಚೆಗೆ ಸಂಸದ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಕೋಕಾ ಕೋಲಾ ಕಂಪೆ ನಿಯ ಪ್ರತಿನಿಧಿಗಳು ಸಹ ಇದೇ ವಿಷಯ ವನ್ನು ಪ್ರಸ್ತಾಪಿಸಿದ್ದು, ನೀರು ಹಾಗೂ ವಿದ್ಯುತ್‌ ಸೌಲಭ್ಯ ಒದಗಿಸಿದಲ್ಲಿ ಘಟಕದ ಕಾಮಗಾರಿಯನ್ನು ಚುರುಕುಗೊಳಿ ಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಪ್ರದೇಶದಲ್ಲಿ ಕೈಗಾರಿಕೆಗಳಿಗೆ ಬೇಕಾಗಿರುವ ವಿದ್ಯುತ್‌ ಪೂರೈಕೆ ಮಾಡಲು 220 ಕೆ.ವಿ. ಸಾಮರ್ಥ್ಯದ ವಿದ್ಯುತ್

ಕೇಂದ್ರ ಸ್ಥಾಪನೆ, ಅದಕ್ಕೂ ಮೊದಲು ತುರ್ತಾಗಿ 33 ಕೆ.ವಿ. ವಿದ್ಯುತ್ ಕೇಂದ್ರದ ಸ್ಥಾಪನೆಗೆ ಕ್ರಮ ಕೈಗೊಳ್ಳಬೇ ಕಾಗಿದೆ. ನಿತ್ಯ 250 ಲಕ್ಷ ಲೀಟರ್ ನೀರನ್ನು ಗುಡೂರು -ಬ್ಯಾರೇಜ್‌ನಿಂದ ಸರಬ ರಾಜು ಮಾಡುವ ಕಾಮಗಾರಿಗೆ ಈಗಾ ಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣ ಗೊಳಿ ಸಿದ್ದು, ಕಾಮಗಾರಿ ಆರಂಭ ಆಗಬೇ ಕಾಗಿದೆ.  ಇವುಗಳ ಜೊತೆಗೆ ಕಡೇಚೂರು ಭಾಗದಲ್ಲಿ ಕ್ರೀಡಾ ಶಾಲೆಗಳು, ತರಬೇತಿ ಕೇಂದ್ರಗಳು, ಉದ್ಯಾನ, ಅಗ್ನಿಶಾಮಕ ಠಾಣೆಗಳ ಸ್ಥಾಪನೆಯೂ ಅತ್ಯವಶ್ಯಕವಾ ಗಿದೆ. ಇಷ್ಟೆಲ್ಲ ಸೌಕರ್ಯಗಳನ್ನು ಒದಗಿಸಿ ದಾಗಲೇ, ಇಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾ ವರಣ ಸೃಷ್ಟಿಯಾಗಲಿದೆ ಎನ್ನುವುದು ಉದ್ಯಮಿಗಳು ಹೇಳುವ ಮಾತು.

ಜಮೀನಿಗೆ ನೀಡಲಾದ ಬೆಲೆಯನ್ನು ಹೆಚ್ಚಿಸಬೇಕು. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಜಮೀನು ಬಿಡುವುದಿಲ್ಲ. ಪ್ರಾಣ ಹೋದರೂ ಚಿಂತೆಯಿಲ್ಲ
-ಸಿದ್ದುಗೌಡ ಮಾಲಿಪಾಟೀಲ,
ಭೂಮಿ ಕಳೆದುಕೊಂಡ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT