ADVERTISEMENT

47 ನಾಮಪತ್ರಗಳು ಕ್ರಮಬದ್ಧ, 5 ತಿರಸ್ಕೃತ

ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಉಮೇದುವಾರಿಕೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 14:03 IST
Last Updated 26 ಏಪ್ರಿಲ್ 2018, 14:03 IST

ಯಾದಗಿರಿ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಸಲ್ಲಿಕೆಯಾಗಿದ್ದ ಒಟ್ಟು 93 ನಾಮಪತ್ರಗಳ ಪೈಕಿ 47 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದು, 5 ತಿರಸ್ಕೃತವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಜೆ. ತಿಳಿಸಿದ್ದಾರೆ.

ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ 11, ಶಹಾಪುರ, ಯಾದಗಿರಿ ಹಾಗೂ ಗುರುಮಠಕಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಸಲ್ಲಿಸಿದ ತಲಾ 12 ಉಮೇದುವಾರಿಕೆಗಳು ಕ್ರಮಬದ್ಧವಾಗಿವೆ. ಅದರಂತೆ ಸುರಪುರದಲ್ಲಿ 2, ಗುರುಮಠಕಲ್‌ನಲ್ಲಿ 2 ಹಾಗೂ ಯಾದಗಿರಿಯಲ್ಲಿ 1 ನಾಮಪತ್ರ ತಿರಸ್ಕೃತವಾಗಿವೆ ಎಂದು ಅವರು ತಿಳಿಸಿದ್ದಾರೆ.

ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಲ್ಲಿ ಬಿಜೆಪಿಯಿಂದ ನರಸಿಂಹನಾಯಕ, ಜೆಡಿಎಸ್‌ನಿಂದ ರಾಜಾ ಕೃಷ್ಣಪ್ಪ ನಾಯಕ (ತಾತಾ), ಕಾಂಗ್ರೆಸ್‌ನಿಂದ ರಾಜಾ ವೆಂಕಟಪ್ಪ ನಾಯಕ ಸಲ್ಲಿಸಿದ ಉಮೇದುವಾರಿಕೆಗಳು ಕ್ರಮಬದ್ಧವಾಗಿವೆ. ಉಳಿದಂತೆ ನೋಂದಾಯಿತ ರಾಜಕೀಯ ಪಕ್ಷಗಳಲ್ಲಿ ಶಿವಸೇನಾ ಪಕ್ಷದಿಂದ ರಾಜಾ ಪಿಡ್ಡನಾಯಕ, ಎಐಎಂಇಪಿ ಪಕ್ಷದಿಂದ ರಾಜಾ ರಾಮಪ್ಪ ನಾಯಕ ಹಾಗೂ ಪಕ್ಷೇತರರಾಗಿ ಅನೀಲಕುಮಾರ, ಗೋಪಾಲ್ಪ, ಚಂದ್ರಕಾಂತ, ಯಮನಪ್ಪ, ಸಂಗನಬಸಪ, ಹಣಮಂತ್ರಾಯ ಅವರು ಸಲ್ಲಿಸಿದ ನಾಮಪತ್ರಗಳು ಕ್ರಮಬದ್ಧವಾಗಿವೆ.

ADVERTISEMENT

ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯದ ಪ್ರಾದೇಶಿಕ ಪಕ್ಷಗಳಲ್ಲಿ ಜೆಡಿಸ್‌ನಿಂದ ಅಮೀನರಡ್ಡಿ ಪಾಟೀಲ, ಬಿಜೆಪಿಯಿಂದ ಗುರು ಪಾಟೀಲ ಶಿರವಾಳ, ಕಾಂಗ್ರೆಸ್ ನಿಂದ ಶರಣಬಸಪ್ಪ ದರ್ಶನಾಪುರ ಸಲ್ಲಿಸಿದ ಉಮೇದುವಾರಿಕೆಗಳು ಕ್ರಮಬದ್ಧವಾಗಿವೆ. ಉಳಿದಂತೆ ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿಯಿಂದ ಆಜಂ ಅಲಿ, ಜನ ಸಾಮಾನ್ಯರ ಪಾರ್ಟಿಯಿಂದ ಭೀಮಾಶಂಕರ, ಪಕ್ಷೇತರರಾಗಿ ಅನವರ್ ಹುಸೇನ್ ದಾದುಲ್ಲಾ, ಅಪ್ಪಾ ಸಾಹೇಬಗೌಡ ತಂದೆ ಶಾಂತಗೌಡ, ನಿಂಗಪ್ಪ, ಬಸನಗೌಡ, ಬಸವರಾಜ, ಮನೋಹರ, ಶರಣಗೌಡ ಪೊಲೀಸ್ ಬಿರಾದಾರ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ.

ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಲ್ಲಿ ಜೆಡಿಎಸ್‌ನಿಂದ ಅಬ್ದುಲ್‌ನಬಿ ತಂದೆ ಚಂದಾಸಾಬ, ಕಾಂಗ್ರೆಸ್‌ನಿಂದ ಡಾ.ಎ.ಬಿ.ಮಾಲಕರೆಡ್ಡಿ , ಬಿಜೆಪಿಯಿಂದ ವೆಂಕಟರೆಡ್ಡಿ ಮುದ್ನಾಳ ಅವರು ಸಲ್ಲಿಸಿದ ಉಮೇದುವಾರಿಕೆಗಳು ಕ್ರಮಬದ್ಧವಾಗಿವೆ.

ಭಾರತೀಯ ರಿಪಬ್ಲಿಕನ್ ಪಕ್ಷದಿಂದ ಈರಪ್ಪ, ಪಿರಮಿಡ್ ಪಾರ್ಟಿ ಆಫ್ ಇಂಡಿಯಾದಿಂದ ಕೃಷ್ಣ , ಹಿಂದೂಸ್ತಾನ ಜನತಾ ಪಾರ್ಟಿಯಿಂದ ಡಾ.ದೇವಾನಂದ ಕೊಲಿ, ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿಯಿಂದ ಎಂ.ಬಸವರಾಜ ಪಡುಕೋಟಿ, ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯಿಂದ ಮಾರುತಿರಾವ, ಸ್ವರಾಜ್ ಇಂಡಿಯಾ ಪಕ್ಷದಿಂದ ವೈಜನಾಥರೆಡ್ಡಿ ಅಲಿಯಾಸ್ ವೈಜನಾಥ ಪಾಟೀಲ , ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ ಸೈದಪ್ಪ ಹಾಗೂ ಪಕ್ಷೇತರರಲ್ಲಿ ಅನಂತರಡ್ಡಿ , ಅಬ್ದುಲ ಕರೀಮ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ.

ಗುರುಮಠಕಲ್ ಮತಕ್ಷೇತ್ರದಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಲ್ಲಿ ಜೆಡಿಎಸ್‌ನಿಂದ ನಾಗನಗೌಡ , ಕಾಂಗ್ರೆಸ್ ನಿಂದ ಬಾಬುರಾವ್ ಚಿಂಚನಸೂರ್, ಬಿಜೆಪಿಯಿಂದ ಸಾಯಿಬಣ್ಣ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ.

ಉಳಿದಂತೆ ನಮ್ಮ ಕಾಂಗ್ರೆಸ್ ಪಕ್ಷದಿಂದ ಅಶೋಕ, ಭಾರತೀಯ ಹೊಸ ಕಾಂಗ್ರೆಸ್ ಪಾರ್ಟಿಯಿಂದ ಚಂದ್ರಶೇಖರ, ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿಯಿಂದ ಜಾಫರ್ ಹುಸೇನ್, ಹಿಂದೂಸ್ತಾನ ಜನತಾ ಪಕ್ಷದಿಂದ ಪಾಪಣ್ಣ , ಭಾರತೀಯ ಬಹುಜನ ಕ್ರಾಂತಿದಳ ಪಕ್ಷದಿಂದ ಬಾಬಾನಕುಮಾರ ತಂದೆ ಗಣಪತ ಚವ್ಹಾನ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ ಭಾಸ್ಕರ, ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯಿಂದ ವೆಂಕಟೇಶ, ಸಮಾಜವಾದಿ ಪಕ್ಷದಿಂದ ಸತ್ಯನಾರಾಯಣ ಯಾದವ ಹಾಗೂ ಸೊಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದಿಂದ ಕೆ.ಸೋಮಶೇಖರ್ ಅವರು ಸಲ್ಲಿಸಿದ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜೆ.ಮಂಜುನಾಥ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.