ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2017, 19:30 IST
Last Updated 19 ಮಾರ್ಚ್ 2017, 19:30 IST

1) ಈ ಕೆಳಗಿನವುಗಳಲ್ಲಿ ದಕ್ಷಿಣಾ ಆಫ್ರಿಕಾದ ಪ್ರಮುಖ ಬಂದರನ್ನು ಗುರುತಿಸಿ?
a)
ಅಲೆಕ್ಸಾಂಡ್ರಿಯಾ 
b) ಕೇಪ್ ಟೌನ್
c) ಡರ್ಬಾನ್   
d) ಮೇಲಿನ ಎಲ್ಲವೂ

2) ಛತ್ತೀಸ್‌ಗಡ ರಾಜ್ಯದ ಯಾವ ಪ್ರದೇಶದಲ್ಲಿ ಭಾರತ ಸರ್ಕಾರಕ್ಕೆ ಒಳಪಟ್ಟಿರುವ  ‘ಭಾರತ್ ಅಲ್ಯೂಮಿನಿಯಂ ಕೈಗಾರಿಕೆ’ ಇದೆ?
a)
ಕೂರ್ಬ  
b) ರೇನುಕೂಟ
c) ಶಾಹದೋಲ್
d) ಕೋರಾಪುಟ್

3) ಕರ್ನಾಟಕ ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿ ಹೆಚ್ಚು ಸಿಮೆಂಟ್ ಕಾರ್ಖಾನೆಗಳಿವೆ?
a)
ಚಿತ್ರದುರ್ಗ 
b) ಕಲ್ಬುರ್ಗಿ
c) ಬೀದರ್
d) ಬೆಳಗಾವಿ

ADVERTISEMENT

4) 10 ಸಿಮೆಂಟ್ ಕಾರ್ಖಾನೆಗಳನ್ನು ಒಟ್ಟುಗೂಡಿಸಿ ‘ಎಸಿಸಿ’ ಲಿಮಿಟೆಡ್ ಕಂಪೆನಿ ಆಸ್ತಿತ್ವಕ್ಕೆ ಬಂದಿದೆ. ಎಸಿಸಿಯ ವಿಸ್ತೃತ ರೂಪ ಏನು?
a)
ಅಸೋಸಿಯೇಶನ್ ಆಫ್‌ ಸಿಮೆಂಟ್ ಕಾರ್ಪೊರೇಶನ್ 
b) ಅಲ್ ಇಂಡಿಯಾ ಸಿಮೆಂಟ್ ಅಸೋಸಿಯೇಶನ್ ಕಂಪೆನಿ ಲಿ.
c) ಅಸೋಸಿಯೇಟೆಡ್ ಸಿಮೆಂಟ್ ಕಂಪೆನಿ ಲಿ.
d) ಆಲ್ ಸಿಮೆಂಟ್ ಕಂಪೆನಿ ಲಿ.

5) ಕರ್ನಾಟಕ ರಾಜ್ಯವು ಎಷ್ಟು ಹೆಕ್ಟೇರ್ ಜಲವಿಸ್ತೀರ್ಣವುಳ್ಳ ಒಳನಾಡು ಮೀನುಗಾರಿಕೆಯನ್ನು ಹೊಂದಿದೆ  ?
a)
3.75 ಲಕ್ಷ ಹೆಕ್ಟೇರ್ 
b) 3.90 ಲಕ್ಷ ಹೆಕ್ಟೇರ್  
c) 4.25 ಲಕ್ಷ ಹೆಕ್ಟೇರ್      
d) 4.57 ಲಕ್ಷ ಹೆಕ್ಟೇರ್  

6) ಭಕ್ತಿಪಂಥದಲ್ಲಿ ಸುಪ್ರಸಿದ್ದ ವೈಷ್ಣವ ಸಂತರಾಗಿದ್ದ ವಲ್ಲಭಾಚಾರ್ಯರು ಕೃಷ್ಣಭಕ್ತಿಯ ಪ್ರತಿಪಾದಕರು. ಇವರು ಕ್ರಿ.ಶ. 1479ರಲ್ಲಿ ಎಲ್ಲಿ ಜನಿಸಿದರು?
a)
ಉಡುಪಿ  
b) ಬನಾರಸ
c) ಕುಂಭಕೋಣಂ
d) ಆಯೋಧ್ಯೆ

7) ಬಹುಮನಿ ಸುಲ್ತಾನರ ಕಾಲದಲ್ಲಿ ಪ್ರಧಾನಮಂತ್ರಿಯಾಗಿದ್ದ ಮಹಮ್ಮದ್ ಗವಾನ್‌ ಯಾವ ದೇಶದಿಂದ ಭಾರತಕ್ಕೆ ವಲಸೆ ಬಂದದ್ದು ?
a)
ಇರಾನ್  
b) ಆರೇಬಿಯಾ
c) ಪರ್ಷಿಯಾ
d) ಈಜಿಪ್ಟ್

8)  ಕನ್ನಡದಲ್ಲಿ ಸರ್ವಜ್ಞ, ತಮಿಳಿನಲ್ಲಿ ತಿರುವಳ್ಳುವರ್ ಅವರನ್ನು ಜನತೆಯ ಕವಿಗಳು ಎಂದು ಕರೆಯುತ್ತಾರೆ.  ಹಾಗಾದರೆ ತೆಲುಗಿನ ‘ಜನತೆಯ ಕವಿ’ ಯಾರು?
a)
ಬಸಪ್ಪಶಾಸ್ತ್ರಿ 
b) ಗದ್ದರ್
c) ನಾರಾಯಣ ರೆಡ್ಡಿ 
d) ವೇಮನ

9) ಕಾಂತಕ್ಷೇತ್ರದಲ್ಲಿ ಫ್ಲೆಮಿಂಗನ ಬಲಗೈ ನಿಯಮ ಹೆಚ್ಚು ಜನಪ್ರಿಯ. ಈ ನಿಯಮಕ್ಕೆ ಇರುವ ಮತ್ತೊಂದು ಹೆಸರು ಏನು?
a)
ಡೈನಮೊ ನಿಯಮ 
b) ಕಾಂತೀಯ ನಿಯಮ
c) ವಾಹಕ ನಿಯಮ 
d) ಹೆಬ್ಬೆರಳು ನಿಯಮ

10) ವೈದ್ಯರು  ಶಸ್ತ್ರಚಿಕಿತ್ಸೆ ಮಾಡುವ ಮುನ್ನ ರೋಗಿಗಳಿಗೆ ಯಾವ ವಿಟಮಿನ್ ನೀಡುತ್ತಾರೆ?
a)
ವಿಟಮಿನ್ ಎ 
b) ವಿಟಮಿನ್ ಕೆ 
c) ವಿಟಮಿನ್ ಸಿ   
d) ವಿಟಮಿನ್ ಇ 

*
ಉತ್ತರಗಳು 1-d, 2-a, 3-b, 4-c, 5-d,6-b, 7-c, 8-d, 9-a, 10-b.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.