ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2017, 19:30 IST
Last Updated 26 ಮಾರ್ಚ್ 2017, 19:30 IST

1) ಇಡುಕ್ಕಿ ವನ್ಯಧಾಮದಲ್ಲಿ ಅಪರೂಪದ ಪಕ್ಷಿಗಳು ಮತ್ತು ಚಿಟ್ಟೆಗಳು ಪತ್ತೆಯಾಗಿರುವ ಬಗ್ಗೆ ಇತ್ತೀಚಿನ ಸಮೀಕ್ಷೆಗಳು ವರದಿ ಮಾಡಿವೆ. ಈ ಇಡುಕ್ಕಿ ವನ್ಯಧಾಮ ಎಲ್ಲಿದೆ?

a) ಕೊಡಗು ಜಿಲ್ಲೆ   
b)  ಇಡುಕ್ಕಿ ಜಿಲ್ಲೆ
c)  ಮೈಸೂರು ಜಿಲ್ಲೆ   
d) ಚಾಮರಾಜನಗರ ಜಿಲ್ಲೆ

2) ಪ್ರಯಾಣಿಕರಿಗೆ ಉತ್ತಮ ಸೇವೆ ಮತ್ತು ಆತಿಥ್ಯದ ಗುಣಮಟ್ಟ ಹೆಚ್ಚಿಸಲು ‘ಪ್ರಾಜೆಕ್ಟ್‌ ದಿಶಾ’ ಎಂಬ ಯೋಜನೆಯನ್ನು ಕೇಂದ್ರ ಸರ್ಕಾರದ ಈ ಕೆಳಕಂಡ ಯಾವ ಪ್ರಾಧಿಕಾರ ಜಾರಿಗೆ ತಂದಿದೆ?  
a)  ವಿಮಾನ ನಿಲ್ದಾಣ ಪ್ರಾಧಿಕಾರ  
b) ರಸ್ತೆ ಸಾರಿಗೆ ಪ್ರಾಧಿಕಾರ
c) ರೈಲ್ವೆ ಪ್ರಾಧಿಕಾರ
d) ಜಲಸಾರಿಗೆ ಪ್ರಾಧಿಕಾರ

3)  ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ  ದೇಶದ ಅತಿ ಉದ್ದದ ರಸ್ತೆ ಸುರಂಗಮಾರ್ಗ ನಿರ್ಮಾಣ ಮಾಡಲಾಗಿದೆ. ಈ ರಸ್ತೆಮಾರ್ಗ ಯಾವ ಎರಡು ಪಟ್ಟಣಗಳಿಗೆ  ಸಂಪರ್ಕ ಕಲ್ಪಿಸುತ್ತದೆ? 
a)ಸೊಂಪೂರ್ ಮತ್ತು ಅನಂತನಾಗ್     
b) ಕುಪ್ವಾರ ಮತ್ತು  ಬುಂದೇಲ್ 
c) ದೋಡಾ ಮತ್ತು ಉದಮ್‌ಪುರ   
d)  ಚೆನಾನಿ ಮತ್ತು  ನಸ್ರಿ

4)  ಕರ್ನಾಟಕದ ಸಾಂಸ್ಕೃತಿಕ ಕ್ರೀಡೆ ಕಂಬಳದ ಮಾದರಿಯಂತೆ ಇಂಡೋನೆಷ್ಯಾದಲ್ಲಿ ಎತ್ತುಗಳನ್ನು ಕೆಸರು ಗದ್ದೆಯಲ್ಲಿ ಓಡಿಸಲಾಗುತ್ತದೆ. ಈ  ಕ್ರೀಡೆಯನ್ನು ಅಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ?
a) ಪಾಕು ಜವಿ (Pacu Jawi ) 
b) ಗೊಬಾಕ್ ಸಡೂರ್
c) ಎಂಗ್ರಾಂಗ್  
d) ಕಾಂಗ್ಲಾಕ್

5)  ಉತ್ತರಪ್ರದೇಶ ಮತ್ತು ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿಗಳನ್ನು ಗುರುತಿಸಿ? 
a) ಯೋಗಿ ಆದಿತ್ಯನಾಥ್–ಅಮರೀಂದರ್‌ ಸಿಂಗ್‌
b) ತ್ರಿವೇಂದ್ರ ಸಿಂಗ್ ರಾವತ್ – ಬಿರೇನ್‌ ಸಿಂಗ್‌   c) ಯೋಗಿ ಆದಿತ್ಯನಾಥ್–ತ್ರಿವೇಂದ್ರ ಸಿಂಗ್ ರಾವತ್
d) ಬಿರೇನ್‌ ಸಿಂಗ್‌–ಅಮರೀಂದರ್‌ ಸಿಂಗ್‌

6) 2010ರಿಂದ ಜಗತ್ತಿನಾದ್ಯಂತ ‘ವಿಶ್ವ ಗುಬ್ಬಚ್ಚಿಗಳ ದಿನ’ವನ್ನು  ಆಚರಿಸಲಾಗುತ್ತದೆ. ಈ ಕೆಳಕಂಡ ಯಾವ ದಿನದಂದು ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಗುತ್ತದೆ? 
a) ಮಾರ್ಚ್‌, 20          b) ಮಾರ್ಚ್, 22 
c)ಮಾರ್ಚ್, 29   d) ಮಾರ್ಚ್, 31 

7)   ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) ನೂತನ ಅಧ್ಯಕ್ಷರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ?
a) ಕೆ. ವಿ. ಥಾಮಸ್‌ 
b) ಮಲ್ಲಿಕಾರ್ಜುನ ಖರ್ಗೆ  
c)  ಮುರಳಿ ಮನೋಹರ್‌ ಜೋಷಿ 
d) ಅಣ್ಣಾ ದೊರೈ

8) ಇತ್ತೀಚೆಗೆ ಮಂಡಿಸಿದ ಕರ್ನಾಟಕ ಬಜೆಟ್‌(2017–18)ನಲ್ಲಿ ಒಟ್ಟು  ಎಷ್ಟು ಹೊಸ ತಾಲೂಕುಗಳನ್ನು ರಚನೆ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ ?  
a) 40 ತಾಲ್ಲೂಕುಗಳು b) 43 ತಾಲ್ಲೂಕುಗಳು
c) 46 ತಾಲ್ಲೂಕುಗಳು d) 49 ತಾಲ್ಲೂಕುಗಳು

9) ಕನ್ನಡದ ಖ್ಯಾತ ಶಾಯರಿ ಕವಿ ಇಟಗಿ ಈರಣ್ಣ  ಇತ್ತೀಚೆಗೆ ನಿಧನರಾದರು. ಈ ಕೆಳಕಂಡವುಗಳಲ್ಲಿ ಅವರ ಪುಸ್ತಕವನ್ನು ಗುರುತಿಸಿ?
a) ತಾಯಿ ಕೊಟ್ಟ ತಾಳಿ     
b) ಕನ್ನಡದ ಶಾಯರಿಗಳು
c) ಎಷ್ಟು ದಿನ ಕಾದಿದ್ವಿ ಈ ರಾತ್ರಿಗೆ
d)  ಹೃದಯದ ಬಡಿತದಲ್ಲಿ ಯಾರದ್ದೋ ನೆನಪು

10)  ರಾಜ್ಯದಲ್ಲಿ ನಿರಂತರವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯಾವ   ನೆಡುತೋಪು ಬೆಳೆಸುವುದನ್ನು ನಿಷೇಧಿಸಿದೆ? 
a) ಮಾವಿನ ತೋಪು  
b) ಹುಣಸೆ ನೆಡುತೋಪು 
c)  ಹೊನ್ನೆ ನೆಡುತೋಪು 
d) ನೀಲಗಿರಿ ನೆಡುತೋಪು

ಉತ್ತರಗಳು: 1–b, 2–a, 3–d, 4–a, 5–c, 6–a, 7–b, 8–b,  9–b, 10–d

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT