ADVERTISEMENT

ಪ್ರಜಾವಾಣಿ ಕ್ವಿಜ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 19:30 IST
Last Updated 18 ಜೂನ್ 2017, 19:30 IST

1) ಶಾಂತಿ ಮತ್ತು ಸೌಹಾರ್ದತೆಗೆ ನೀಡುವ ಅಂತರರಾಷ್ಟ್ರೀಯ ‘ಜವಾಹರಲಾಲ್ ನೆಹರೂ ಪ್ರಶಸ್ತಿ’ ಪುರಸ್ಕಾರಕ್ಕೆ ಪಾತ್ರರಾದ ಮೊಟ್ಟಮೊದಲ ವ್ಯಕ್ತಿ ಯಾರು?
a)  ಉ ಥಾಂಟ್ 
b) ನೆಲ್ಸೆನ್ ಮಂಡೇಲಾ
c) ಮಾರ್ಟಿನ್ ಲೂಥರ್ ಕಿಂಗ್  
d) ಆಂಗ್ ಸಾನ್ ಸೂಕಿ

2)  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವ ರಾಜಕೀಯ ಪಕ್ಷವನ್ನು ಪ್ರತಿನಿಧಿಸಿದ್ದಾರೆ?
a) ಫೆಡರಲಿಸ್ಟ್ ಪಾರ್ಟಿ  
b) ರಿಪಬ್ಲಿಕ್ ಪಾರ್ಟಿ               
c) ಇಂಡಿಪೆಂಡೆಂಟ್ ಪಾರ್ಟಿ
d) ಡೆಮಾಕ್ರಟಿಕ್ ಪಾರ್ಟಿ

3) ಇತ್ತೀಚೆಗೆ ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಅವಿಶ್ವಾಸ ನಿರ್ಣಯಕ್ಕೆ ಗುರಿಯಾಗಿ, ವಿಶ್ವಾಸಮತವನ್ನು ಗೆದ್ದ ಸಭಾಪತಿ ಯಾರು?
a) ಬಿ.ಎಲ್. ಶಂಕರ್ 
b) ವೀರಣ್ಣ ಮತ್ತಿಕಟ್ಟಿ
c) ಡಿ.ಎಚ್. ಶಂಕರಮೂರ್ತಿ
d) ಕೆ.ಬಿ. ಕೋಳಿವಾಡ

4) ‘ಹುಳಿ ಮಾವಿನ ಮರ’ ಪಿ. ಲಂಕೇಶ್ ಅವರ ಆತ್ಮಕಥನವಾದರೆ, ಕುಂ. ವೀರಭದ್ರಪ್ಪನವರ ಆತ್ಮಕಥನ ಯಾವುದು?
a) ಹೆಪ್ಪಿಟ್ಟ ಹಾಲು 
b) ಲೋಕದಲ್ಲಿ ಜನಿಸಿದ ಬಳಿಕ
c) ಹುಚ್ಚು ಮನಸ್ಸಿನ ಹತ್ತು ಮುಖಗಳು
d) ಗಾಂಧಿಕ್ಲಾಸು

5) ಸೌರವ್ಯೂಹದಲ್ಲಿ ಭೂಮಿಗೆ ಸಮೀಪದಲ್ಲಿರುವ ಹಾಗೂ ಅತಿ ಹೆಚ್ಚು ಪ್ರಜ್ವಲಿಸುವ ಗ್ರಹ ಯಾವುದು?
a) ಬುಧ  
b) ಚಂದ್ರ
c) ಮಂಗಳ    
d) ಶುಕ್ರ  

6) ಭೂಕಂಪದ ತೀವ್ರತೆಯನ್ನು ಅಳೆಯಲು ಯಾವ ಮಾಪನವನ್ನು ಉಪಯೋಗಿಸುತ್ತಾರೆ?
a) ಸ್ಪಕ್ಟ್ರೊ ಗ್ರಾಫ್ 
b) ಎಲೆಕ್ಟ್ರೋಗ್ರಾಫ್
c) ಸಿಸ್ಮೊ ಗ್ರಾಫ್ 
d) ಅಸಿಲೋಸ್ಕೊಪ್

7) ವಿಶ್ವದ ಯಾವ ದೇಶದಲ್ಲಿ ‘ಮಾವೋರಿ’ ಬುಡಕಟ್ಟು ಜನಾಂಗವಿದೆ?
a) ಭೂತಾನ್  
b) ನ್ಯೂಜಿಲೆಂಡ್
c)  ಮಾರಿಷಸ್
d) ಮಾಲ್ಡಿವ್ಸ್

8) ಈ ಕೆಳಕಂಡ ಯಾವ ದೇಶದಲ್ಲಿ ‘ಕ್ರೋನ’ ಎಂಬ ನಾಣ್ಯ ಚಲಾವಣೆಯಲ್ಲಿದೆ?
a) ಸ್ವೀಡನ್ 
b) ಗ್ರೀಸ್
c) ಜೆಕ್ ಗಣರಾಜ್ಯ
d) ಪೆರು

9) ಸಂಜ್ಞಾನಾತ್ಮಕ ಸಿದ್ಧಾಂತ ಸೇರಿದಂತೆ ಹಲವು ಸಿದ್ಧಾಂತಗಳನ್ನು ಮಂಡಿಸಿರುವ ಜೆ.ಬಿ. ವ್ಯಾಟ್‌ಸನ್‌ ಒಬ್ಬ  ಪ್ರಸಿದ್ಧ……………?
a) ರಾಜಕೀಯ ವಿಶ್ಲೇಷಕ 
b) ಮನೋವಿಜ್ಞಾನಿ
c) ವಿಜ್ಞಾನಿ
d) ಕಾದಂಬರಿಕಾರ

10) ಭಾರತದಲ್ಲಿ ರೈಲು ಮತ್ತು ತಂತಿ ಸೇವೆಯ ಸೌಲಭ್ಯವನ್ನು ಕಲ್ಪಿಸಿದ ಬ್ರಿಟಿಷ್ ಅಧಿಕಾರಿ ಯಾರು?
a) ಲಾರ್ಡ್ ಕಾರ್ನ್‌ವಾಲೀಸ್‌ 
b) ಲಾರ್ಡ್ ರಿಪ್ಪನ್  
c) ಲಾರ್ಡ್ ಡಾಲ್‌ಹೌಸಿ   
d) ಲಾರ್ಡ್ ಮೆಕಾಲೆ

ಉತ್ತರಗಳು: 1-a, 2-b, 3-c, 4-d, 5-d, 6-c, 7- b, 8-a, 9-b, 10-c.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.