ADVERTISEMENT

ಪ್ರಜಾವಾಣಿ ವಾರದ ಕ್ವಿಜ್

​ಪ್ರಜಾವಾಣಿ ವಾರ್ತೆ
Published 29 ಜನವರಿ 2017, 19:30 IST
Last Updated 29 ಜನವರಿ 2017, 19:30 IST

1) ಇರಾವತಿ ನದಿಯ ಉಪನದಿಯಾಗಿರುವ ರಂಗೂನ್ ನದಿಯ ದಡದಲ್ಲಿ ಯಾವ ಮಹಾನಗರವಿದೆ?
a) ರಂಗೂನ್ 
b) ಸಿಂಗಪುರ
c) ಶಾಂಘೈ  
d) ಬ್ಯಾಂಕಾಕ್

2)  1993ರಲ್ಲಿ ಗುಜರಾತ್ ರಾಜ್ಯದಲ್ಲಿ ಸ್ಥಾಪನೆ ಮಾಡಿದ ಅಣುವಿದ್ಯುಚ್ಛಕ್ತಿ ಕೇಂದ್ರ ಯಾವುದು?
a) ಕಾಕ್ರಪಾರಾ 
b) ನರೋರಾ
c) ರಾಣಾಪ್ರತಾಪಸಾಗರ
d)  ಕಲ್ಪಕಂ

3) ಕರ್ನಾಟಕದ ಭೂಸ್ವರೂಪ, ಸಸ್ಯವರ್ಗ, ಮಳೆಯ ಪ್ರಮಾಣವನ್ನು ಆಧಾರಿಸಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಕೆಳಗಿನವುಗಳಲ್ಲಿ ಯಾವುದು ಸೇರಿಲ್ಲ?
a) ಮರುಭೂಮಿ 
b) ಮಲೆನಾಡು
c) ಕರಾವಳಿ
d) ಮೈದಾನ

ADVERTISEMENT

4) ಭಾರತದ ಇತಿಹಾಸದಲ್ಲಿ ಭಕ್ತಿ ಚಳವಳಿ ಒಂದು ಪ್ರಮುಖ ಘಟ್ಟ. ಈ ಕಾಲ ಘಟ್ಟದಲ್ಲಿದ್ದ ಮಹಾರಾಷ್ಟ್ರದ ಸಂತರನ್ನು ಗುರುತಿಸಿ?
a) ಜ್ಞಾನೇಶ್ವರ 
b) ತುಕರಾಮ
c) ರಾಮದಾಸರು
d) ಮೇಲಿನ ಎಲ್ಲರು

5) ಧ್ಯಾನ್ ಚೆಂದ್ ಟ್ರೋಫಿ ಹಾಕಿ ಕ್ರೀಡೆಗೆ ಸಂಬಂಧಿಸಿದ್ದರೆ, ಇರಾನಿ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ?
a) ಟೆನಿಸ್ 
b) ಬ್ಯಾಡ್ಮಿಂಟನ್
c) ಕಬಡ್ಡಿ
d) ಕ್ರಿಕೆಟ್

6) ಹಿಮಾಲಯದ ನದಿಗಳು ಸದಾ ಹರಿಯಲು ಈ ಕೆಳಗಿನ ಯಾವ ಅಂಶ ಕಾರಣವಾಗಿದೆ?
a) ಹಿಮಾಲಯದಲ್ಲಿ ಸದಾ ನೀರು ಇರುವುದು  
b) ಬೇಸಿಗೆಯಲ್ಲಿ ಹಿಮ ಕರಗುವುದು
c) ಯಾವಾಗಲೂ ಮಳೆ ಸುರಿಯುವುದು  
d)  ಹೆಚ್ಚು ನದಿಗಳು ಇರುವುದು

7) ಮನುಷ್ಯನ ದೇಹದಲ್ಲಿ ಉದ್ದವಾದ, ಭಾರವಾದ, ಗಟ್ಟಿಯಾಗಿರುವ ಮೂಳೆಯನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ?
a) ಬೆನ್ನು ಮೂಳೆ
b) ಎದೆಯ ಮೂಳೆ
c)  ಕೈ ಮೂಳೆ
d) ತೊಡೆಯ ಮೂಳೆ

8)  ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಅಧ್ಯಾತ್ಮದ ನೆಲೆಯಲ್ಲಿ ಕಂಡು ಒಂದೇ ಮತ, ಒಂದೇ ಜಾತಿ, ಒಂದೇ ದೇವರು ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದವರು ಯಾರು?
 a) ಚಾಣಕ್ಯ 
b) ನಾರಾಯಣ ಗುರು
c) ಅತ್ತಿಮಬ್ಬೆ
d) ಅರಿಸ್ಟಾಟಲ್‌

9) ಈ ಕೆಳಕಂಡ ಪದಗಳಲ್ಲಿ  ಯಾವ ಪದ ಕ್ರಿಕೆಟ್ ಆಟಕ್ಕೆ ಸಂಬಂಧಿಸಿಲ್ಲ?
a) ವೈಡ್  b) ನೊ ಬಾಲ್
c) ಹಿಟ್ ವಿಕೆಟ್  d) ಕಾರ್ನರ್ ಕಿಕ್

10) ‘ಜೈಂಟ್ ಆಲಿವ್ ರಿಡ್ಲೆ’ ಜಾತಿಯ ಆಮೆಗಳು ಈ ಕೆಳಕಂಡ ಯಾವ ರಾಜ್ಯದ ಸಮುದ್ರ ತೀರದಲ್ಲಿ ಹೆಚ್ಚಾಗಿ ಗೂಡು ಕಟ್ಟುತ್ತವೆ?
a) ಕೇರಳ  b) ಕರ್ನಾಟಕ
c) ಒಡಿಶಾ  d) ಗುಜರಾತ್

ಉತ್ತರಗಳು: 1-a, 2-a, 3-a, 4-d, 5-d, 6-b, 7- d, 8-b, 9-d, 10-c.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.