ADVERTISEMENT

ಪ್ರಧಾನಿ ಕೇವಲ ಓದುಗರಾಗಬಾರದು: ಜೇಟ್ಲಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2014, 13:08 IST
Last Updated 19 ಏಪ್ರಿಲ್ 2014, 13:08 IST
ಪ್ರಧಾನಿ ಕೇವಲ ಓದುಗರಾಗಬಾರದು: ಜೇಟ್ಲಿ
ಪ್ರಧಾನಿ ಕೇವಲ ಓದುಗರಾಗಬಾರದು: ಜೇಟ್ಲಿ   

ಅಮೃತಸರ (ಪಿಟಿಐ): ಪ್ರಧಾನಿ  ಮನಮೋಹನ್‌ ಸಿಂಗ್‌ ವಿರುದ್ಧ ಹರಿಹಾಯ್ದರಿರುವ ಬಿಜೆಪಿ ಮುಖಂಡ ಅರುಣ್‌ ಜೇಟ್ಲಿ, ‘ಹಿಮದ ಮೇಲೆ ನಡೆದರೂ ಹೆಜ್ಜೆಗುರುತು ಮೂಡಿಸಲಿಲ್ಲ’ ಎಂದು ಶನಿವಾರ ಟೀಕಿಸಿದ್ದಾರೆ.

ಮನಮೋಹನ್‌ ಸಿಂಗ್‌ ಅವರು ‘ದುರ್ಬಲ’ರಲ್ಲ ಎಂದು ಪ್ರಧಾನಿ ಸಚಿವಾಲಯ ಸಮರ್ಥಿಸಿಕೊಂಡ ಒಂದು ದಿನದ ಬೆನ್ನಲ್ಲೇ ಈ ಟೀಕೆ ವ್ಯಕ್ತವಾಗಿದೆ.

‘ಭಾರತದಲ್ಲಿ ಪ್ರಧಾನಿ ಅವರು ಓದಿದ ಭಾಷಣಗಳು ಜನರಿಗೆ ಕೇಳಿಸುತ್ತಿರಲಿಲ್ಲ. ಅವುಗಳನ್ನು ಜನರು ದೀರ್ಘಕಾಲ ನೆನಪಿಸಿಕೊಳ್ಳುವುದು ಅಥವಾ  ಅದರ ಬಗ್ಗೆ ಮಾತನಾಡುವುದು ಮಾಡಿಲ್ಲ. ಪ್ರಧಾನಿ ಮಾತನಾಡುತ್ತಿದ್ದರು ಎಂಬುದು ಅಂಕಿ–ಸಂಖ್ಯೆಗಳ ಪ್ರಕಾರ ಪ್ರಧಾನಿ ಸಚಿವಾಲಯ ಹೇಳಿಕೆ ಸತ್ಯವಾದರೂ ವಾಸ್ತವಿಕವಾಗಿ ಅವರ ಹೇಳಿದ್ದು ಕೇಳಿಸುತ್ತಿರಲಿಲ್ಲ’ ಎಂದುಜೇಟ್ ಜೇಟ್ಲಿ ಅವರು ತಮ್ಮ ಬ್ಲಾಗ್‌ನಲ್ಲಿ ವ್ಯಂಗ್ಯವಾಡಿದ್ದಾರೆ.

ADVERTISEMENT

‘ಪ್ರಧಾನಿ ಅವರು ಹಿಮದ ಮೇಲೆ ಸಾಗಿದರೂ ಯಾವುದೇ ಹೆಜ್ಜೆಗುರುತುಗಳನ್ನು ಮೂಡಿಸಲಿಲ್ಲ’ ಎಂದೂ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆ ಅಖಾಡಕ್ಕಿಳಿರುವ ಜೇಟ್ಲಿ ಜರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.