ADVERTISEMENT

ಓಯ್! ಹಾಯ್, ಹಾಯ್‌...

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 19:30 IST
Last Updated 12 ಜನವರಿ 2017, 19:30 IST
ದೇವು ಎಸ್. ರಾಜ್
ದೇವು ಎಸ್. ರಾಜ್   

ಮೂರು ವರ್ಷಗಳ ಹಿಂದೆ ಸೆಟ್ಟೇರಿದ್ದ ‘ಹಾಯ್’ ಸಿನಿಮಾ ಈಗ ಹಾಡುಗಳ ಬಿಡುಗಡೆ ಸಂಭ್ರಮದಲ್ಲಿದೆ. ಹಾಡುಗಳ ಬಿಡುಗಡೆಯ ನೆಪದಲ್ಲಿ ಮೊದಲ ಬಾರಿ ಮಾಧ್ಯಮದ ಮುಂದೆ ಹಾಜರಾಗಿತ್ತು ಚಿತ್ರತಂಡ. ಚಿತ್ರದಲ್ಲಿನ ಐದು ಹಾಡುಗಳು ಮತ್ತು ಎರಡು ಟ್ರೈಲರ್ ಪ್ರದರ್ಶನ ಕಾರ್ಯಕ್ರಮದಲ್ಲಿತ್ತು.

ಮಾತು ಆರಂಭಿಸಿದ ನಿರ್ಮಾಪಕ ರಾಘವೇಂದ್ರ ಕಠಾರೆ – ತಮ್ಮ ಊರಿನಿಂದ ಬಂದವರಿಗೆ, ತಮಗೆ ಸಹಾಯ ಮಾಡಿದ ಸಂಘಟನೆಗಳಿಗೆ ಧನ್ಯವಾದ ಹೇಳುತ್ತಿದ್ದರೆ, ಅದೊಂದು ರಾಜಕೀಯ ಭಾಷಣದಂತೆ ಭಾಸವಾಗುತ್ತಿತ್ತು.

ನೈಜ ಘಟನೆಯನ್ನು ಇಟ್ಟುಕೊಂಡು ನಿರ್ದೇಶಕ ಜಿ.ಎನ್. ರುದ್ರೇಶ್ ಚಿತ್ರಕಥೆ ರಚಿಸಿದ್ದಾರೆ. ವಿದೇಶದಲ್ಲಿ ಕಾಲೇಜು ಶಿಕ್ಷಣ ಓದಿ ಮತ್ತೆ ಹಳ್ಳಿಗೆ ಬಂದ ಹುಡುಗನೊಬ್ಬನಲ್ಲಿ ಹುಟ್ಟುವ ಪ್ರೀತಿಯೇ ಚಿತ್ರದ ಕಥಾವಸ್ತು. ದೇವು ಎಸ್. ರಾಜ್ ಚಿತ್ರದ ನಾಯಕ. ಮೊದಲ ಬಾರಿ ನಟನೆಯ ಪ್ರಯತ್ನ ಮಾಡಿರುವ ಅವರು, ‘ನಟನೆ ಏನೆಂದು ಗೊತ್ತಿರಲಿಲ್ಲ.

ನನ್ನ ತಪ್ಪುಗಳನ್ನು ಗುರ್ತಿಸಿಕೊಂಡದ್ದೇನೆ. ಮುಂದಿನ ಸಿನಿಮಾದಲ್ಲಿ ಅದನ್ನು ತಿದ್ದಿಕೊಳ್ಳುತ್ತೇನೆ’ ಎಂದರು. ನಾಯಕಿ ಸಾನಿಯಾ ಸುದ್ದಿಗೋಷ್ಠಿಯಲ್ಲಿ ಹಾಜರಿರಲಿಲ್ಲ.‘ಹಾಯ್’ ಚಿತ್ರಕ್ಕೆ ಜೆಸ್ಸಿಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ಸಂತೋಷ್ ವೆಂಕಿ, ಶಶಾಂಕ್, ಸುಪ್ರಿಯಾ, ಜೆಸ್ಸಿಗಿಫ್ಟ್ ಇತರರು ಹಾಡಿದ್ದಾರೆ.

ಹಾಡುಗಳ ಸಾಹಿತ್ಯ ವಿ. ನಾಗೇಂದ್ರ ಪ್ರಸಾದ್ ಅವರದು. ಅವರು ‘ಒನ್ ಮ್ಯೂಸಿಕ್’ ಎಂಬ ಆಡಿಯೊ ಸಂಸ್ಥೆ ಆರಂಭಿಸಿ ಹಾಡುಗಳನ್ನು ಮಾರುಕಟ್ಟೆಗೆ ತಂದಿದ್ದಾರೆ.ಚಿಕ್ಕಮಗಳೂರು, ಬೆಂಗಳೂರು ಹಾಗೂ ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರ ಫೆಬ್ರುವರಿ 3ರಂದು ತೆರೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.