ADVERTISEMENT

ಕೀಟ್ಲೆ ಕೃಷ್ಣ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST

ಕೀಟ್ಲೆ ಕೃಷ್ಣ
ಈಗಿನ ಕಾಲದ ಮಕ್ಕಳ ಮನಸ್ಥಿತಿಯ ಅಪಾಯವನ್ನು ನಿರ್ದೇಶಕ ನಾಗರಾಜ್ ಅರೆಹೊಳೆ ಅವರು ‘ಕೀಟ್ಲೆ ಕೃಷ್ಣ’ ಚಿತ್ರದ ಮೂಲಕ ಹೇಳಿದ್ದಾರೆ. ರಾಜೀವ್ ಕೊಠಾರಿ ಇದರ ನಿರ್ಮಾಪಕರು. ರಾಮ್ ರೆಡ್ಡಿ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಮಾಸ್ಟರ್ ಹೇಮಂತ್, ಮಾಸ್ಟರ್‌ ಮಧುಸೂದನ್, ಸ್ಪಂದನಾ ಮತ್ತು ಇತರರು ತಾರಾಗಣದಲ್ಲಿದ್ದಾರೆ.

ಪಟಾಕಿ
ಗಣೇಶ್ ಅವರು ನಾಯಕನಾಗಿ ನಟಿಸಿರುವ, ಮಂಜುಸ್ವರಾಜ್ ನಿರ್ದೇಶನದ ಚಿತ್ರ ‘ಪಟಾಕಿ’. ಎಸ್.ವಿ. ಬಾಬು ಇದರ ನಿರ್ಮಾಪಕರು. ನಾಯಕಿಯಾಗಿ ರನ್ಯಾ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ, ವೆಂಕಟೇಶ್ ಅಂಗುರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿವಿದೆ. ಸಾಯಿಕುಮಾರ್, ಪ್ರಿಯಾಂಕ, ಆಶೀಶ್ ವಿದ್ಯಾರ್ಥಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಬಿ ಬಿ 5
ಬಿ.ಜೆ. ಸೌಮ್ಯ ನಿರ್ಮಾಣದ ‘ಬಿ ಬಿ 5’ ಚಿತ್ರದ ನಿರ್ದೇಶಕರು ಎನ್. ಜನಾರ್ಧನ್. ಛಾಯಾಗ್ರಹಣ ವಿಕ್ರಮ್-ಚೇತನ್ ರಾಯ್, ಸಂಗೀತ ಚೇತನ್ ಕುಮಾರ್ ಶಾಸ್ತ್ರಿ ಅವರದ್ದು. ಪೂರ್ಣಚಂದ್ರ ಮೈಸೂರು, ರಾಧಿಕಾ ಚೇತನ್ ಮತ್ತು ಇತರರು ತಾರಾಗಣದಲ್ಲಿದ್ದಾರೆ.

ADVERTISEMENT

ಟ್ಯಾಬ್
ಆಧುನಿಕ ತಂತ್ರಜ್ಞಾನದ ಆವಿಷ್ಕಾರವಾಗಿರುವ ‘ಟ್ಯಾಬ್‌’ನಿಂದಾಗಿ ಇಂದಿನ ಪೀಳಿಗೆ ಮೇಲೆ ಆಗುತ್ತಿರುವ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳನ್ನು ಕಥಾವಸ್ತುವಾಗಿಸಿಕೊಂಡಿರುವ ಮಕ್ಕಳ ಚಿತ್ರ ಇದು.  ನಿರ್ದೇಶನ ಮಲ್ಲಿಕಾರ್ಜುನ ಹೊಯ್ಸಳ ಅವರದ್ದು. ನಿರ್ಮಾಪಕರು ಶ್ರೀನಿವಾಸಮೂರ್ತಿ. ಮಾಸ್ಟರ್ ಜಯಂತ್, ಬೇಬಿ ಸಾತ್ವಿಕ್ ಮತ್ತಿತರರು ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.