ADVERTISEMENT

ಚಿರಂಜೀವಿ ಹುಟ್ಟುಹಬ್ಬಕ್ಕೆ ‘ಪೋಸ್ಟರ್‌ ಬಿಡುಗಡೆ’ಯ ಕೊಡುಗೆ!

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2016, 19:30 IST
Last Updated 23 ಆಗಸ್ಟ್ 2016, 19:30 IST
ಚಿರಂಜೀವಿ ಹುಟ್ಟುಹಬ್ಬಕ್ಕೆ  ‘ಪೋಸ್ಟರ್‌ ಬಿಡುಗಡೆ’ಯ ಕೊಡುಗೆ!
ಚಿರಂಜೀವಿ ಹುಟ್ಟುಹಬ್ಬಕ್ಕೆ ‘ಪೋಸ್ಟರ್‌ ಬಿಡುಗಡೆ’ಯ ಕೊಡುಗೆ!   

ಮೆಗಾಸ್ಟಾರ್‌ ಚಿರಂಜೀವಿ ಅವರ 150ನೇ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತೆಲುಗು ನಟ ರಾಮ್‌ ಚರಣ್‌ ತೇಜ ತಮ್ಮ ತಂದೆಯ ಹುಟ್ಟುಹಬ್ಬಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ.

ಚಿರಂಜೀವಿ ಅಭಿನಯದ 150ನೇ ಚಿತ್ರವಾದ ‘ಕೈದಿ ನಂ.150’ ಚಿತ್ರದ ಮೋಷನ್‌ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ರಾಮ್‌ಚರಣ್ ತಮ್ಮ ತಂದೆಯ 61ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

ಇಲ್ಲಿಯವರೆಗೆ ನಟನೆಗಷ್ಟೇ ತಮ್ಮನ್ನು ಸೀಮಿತವಾಗಿರಿಸಿಕೊಂಡಿದ್ದ ರಾಮ್‌ಚರಣ್‌ ತಂದೆಯ 150ನೇ ಚಿತ್ರಕ್ಕಾಗಿ ನಿರ್ಮಾಣದ ಹಾದಿ ಹಿಡಿದಿದ್ದಾರೆ. ಅಲ್ಲದೇ ಈ ಚಿತ್ರವೂ ದೀರ್ಘಕಾಲದವರೆಗೆ ಪ್ರೇಕ್ಷಕರ ಮನದಲ್ಲಿ ಹಸಿರಾಗಿ ಉಳಿಯಬೇಕು ಎಂಬ ಬಯಕೆಯನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ.

‘ನನ್ನ ತಂದೆಯ 150ನೇ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲು ತುಂಬಾ ಸಂತಸವಾಗುತ್ತಿದೆ. ಇದು ಮೆಗಾಸ್ಟಾರ್‌ಗೆ ನಾವು ಸಲ್ಲಿಸುವ ಗೌರವ ಹಾಗೂ ಚಿರಂಜೀವಿ ಅವರ 150ನೇ ಚಿತ್ರಕ್ಕಾಗಿ ಪ್ರಪಂಚದಾದ್ಯಂತ ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ವಿಶೇಷ ಉಡುಗೊರೆ’ ಎಂಬ ಮಾತನ್ನು ಕೂಡ 31 ವರ್ಷದ ನಟ ರಾಮ್‌ಚರಣ್‌  ತೇಜ ತಿಳಿಸಿದ್ದಾರೆ.

ಒಂಬತ್ತು ವರ್ಷಗಳ ಬಳಿಕ ಪೂರ್ಣ ಪ್ರಮಾಣದ ನಟನಾಗಿ ‘ಕೈದಿ ನಂ.1’ ಚಿತ್ರದಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ.  ಚಿತ್ರ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ. ಮೆಗಾಸ್ಟಾರ್‌ಗೆ ನಾಯಕಿಯಾಗಿ ಕಾಜಲ್‌ ಅಗರ್‌ವಾಲ್ ನಟಿಸಿದ್ದಾರೆ.

ಚಿತ್ರದ ಮೋಷನ್ ಪೋಸ್ಟರ್‌ ಬಿಡುಗಡೆ  ಮೆಗಾಸ್ಟಾರ್‌ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.