ADVERTISEMENT

ಬಾಲಿವುಡ್‌ಗೊಬ್ಬರೇ ಬಿಗ್‌–ಬಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

‘ಚಲನಚಿತ್ರರಂಗದಲ್ಲಿ ನನ್ನ ತಂದೆ ಅಮಿತಾಭ್ ಬಚ್ಚನ್ ಸಾಧನೆ ಅಗಾಧ. ಅವರಿಗೆ ಯಾರನ್ನೂ ಹೋಲಿಸುವುದು ಸಾಧ್ಯವಿಲ್ಲ’ ಎಂದು ಹೇಳಿ, ಇತ್ತೀಚೆಗೆ ಅಭಿಷೇಕ್‌ ಬಚ್ಚನ್‌ ತಮ್ಮ ಪಿತೃಪ್ರೇಮ ಮೆರೆದಿದ್ದಾರೆ.

‘ಯಾವಾಗಲೂ ಚಿತ್ರರಂಗಕ್ಕೆ ಒಬ್ಬರೇ ಅಮಿತಾಭ್‌ ಬಚ್ಚನ್‌. ಅವರ ಮಟ್ಟವನ್ನು ಯಾರೂ ತಲುಪಲು ಸಾಧ್ಯವಿಲ್ಲ. ಆದ್ದರಿಂದಲೇ ಅವರನ್ನು ಬಿಗ್‌–ಬಿ ಎಂದು ಕರೆಯುತ್ತಾರೆ’ ಎಂದು ಅಭಿಷೇಕ್ ತಂದೆಯನ್ನು ಹಾಡಿ ಹೊಗಳಿದ್ದಾರೆ.

‘ಅವರು ನನ್ನ ತಂದೆ. ನಾನು ಜೂನಿಯರ್‌ ಬಚ್ಚನ್‌’ ಎಂದೂ ಅವರು ತಮಾಷೆಯಾಗಿ ಹೇಳಿದ್ದಾರೆ. ತಮ್ಮ ಮತ್ತು ತಂದೆಯ ನಡುವೆ ಯಾವುದೇ ಸ್ಪರ್ಧೆ ಇಲ್ಲ ಎಂದಿರುವ ಅವರು ‘ನಾನು ಯಾವುದೇ ಕೆಲಸ ಮಾಡುವ ಮೊದಲು ಅವರನ್ನು ಸಂಪರ್ಕಿಸಿ ಚರ್ಚಿಸುತ್ತೇನೆ. ಅವರ ಆಶೀರ್ವಾದ ಪಡೆದೇ ಮುಂದುವರಿಯುತ್ತೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.