ADVERTISEMENT

ಮತ್ತೆ ಮತ್ತೆ ‘ಎರಡನೇ ಸಲ’ ವಿವಾದ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 18:49 IST
Last Updated 10 ಮಾರ್ಚ್ 2017, 18:49 IST
ಮತ್ತೆ ಮತ್ತೆ ‘ಎರಡನೇ ಸಲ’ ವಿವಾದ
ಮತ್ತೆ ಮತ್ತೆ ‘ಎರಡನೇ ಸಲ’ ವಿವಾದ   

‘ಎರಡನೇ ಸಲ’ ಚಿತ್ರದ ಪ್ರಚಾರಕ್ಕೆ ನಿರ್ದೇಶಕ ಗುರುಪ್ರಸಾದ್ ಬರುತ್ತಿಲ್ಲ ಎಂದು ಆರೋಪಿಸಿ ರಾಜ್ಯದಾದ್ಯಂತ ಶುಕ್ರವಾರದಿಂದ ಚಿತ್ರದ ಪ್ರದರ್ಶನಗಳನ್ನು ಸ್ಥಗಿತಗೊಳಿಸುವುದಾಗಿ ನಿರ್ಮಾಪಕ ಯೋಗೀಶ್ ನಾರಾಯಣ್ ಹೇಳಿದ್ದರು. ಅದಾದ ನಂತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ದೇಶಕ, ನಿರ್ಮಾಪಕರನ್ನು ಕರೆದು ರಾಜಿಯೂ ಮಾಡಿಸಲಾಗಿತ್ತು. ಮತ್ತೆ ಚಿತ್ರ ಪ್ರದರ್ಶನ ಮುಂದುವರಿಸುವುದಾಗಿ ನಿರ್ಮಾಪಕರೂ ಹೇಳಿದ್ದರು.

ಆದರೆ ನಿರ್ದೇಶಕರು ಯಾವ ಕಾರಣಕ್ಕೆ ಪ್ರಚಾರಕ್ಕೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟವಾಗದಿದ್ದರೂ, ‘ನಲವತ್ತು ಲಕ್ಷ ರೂಪಾಯಿಗಳಲ್ಲಿ ಪ್ರಚಾರ ಮಾಡಬೇಕು ಎಂದಿದ್ದೆ. ಅದಾಗಲಿಲ್ಲ. ಬಿಡುಗಡೆ ಮಾಡಿದ ಸಂದರ್ಭವೂ ಸೂಕ್ತವಾಗಿಲ್ಲ. ಅದಕ್ಕೇ ಪ್ರಚಾರದಲ್ಲಿ ಭಾಗವಹಿಸಲಿಲ್ಲ. ಆದರೆ ಈಗ ಮತ್ತೆ ಪ್ರಚಾರದಲ್ಲಿ ಭಾಗಿಯಾಗುತ್ತೇನೆ’ ಎಂದು ಗುರುಪ್ರಸಾದ್ ಹೇಳಿದ್ದಾರೆ. ಅವರು ತಮ್ಮ ಅನಿಸಿಕೆಗಳನ್ನು ಫೇಸ್‌ಬುಕ್ ಲೈವ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಾತಿನ ಮಧ್ಯೆ, ‘ಧನಂಜಯ್ ನನಗೆ ಗುರುದ್ರೋಹ ಮಾಡಿದ್ದಾರೆ. ಆತನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೇ ನಾನು. ‘ಎರಡನೇ ಸಲ’ ಚಿತ್ರಕ್ಕೆ ಆತ ನಾಯಕ ಎಂಬ ಕಾರಣಕ್ಕೇ ಹಲವರು ಸಿನಿಮಾಕ್ಕೆ ಬರುತ್ತಿಲ್ಲ. ಆತ ತನ್ನ ಈವರೆಗಿನ ನಿರ್ಮಾಪಕರಿಗೆ ಬಂಡವಾಳವನ್ನು ವಾಪಸ್ ತಂದುಕೊಟ್ಟಿಲ್ಲ’ ಎಂದೂ ಆರೋಪಿಸಿದ್ದಾರೆ.

ADVERTISEMENT

</p><p>ಗುರುಪ್ರಸಾದ್ ಮಾತಿಗೆ ಫೇಸ್‌ಬುಕ್ ಲೈವ್ ಮೂಲಕವೇ ಖಾರವಾಗಿ ಪ್ರತಿಕ್ರಿಯಿಸಿರುವ ಧನಂಜಯ್, ‘ನನ್ನ ಪ್ರತಿಭೆ ಗುರ್ತಿಸಿ ಗುರುಪ್ರಸಾದ್ ನನಗೆ ಅವಕಾಶ ಕೊಟ್ಟಿದ್ದಾರಷ್ಟೇ. ನನಗೆ ಅವರು ನಟನೆ ಕಲಿಸಿದವರಲ್ಲ. ನಾನು ಅವರಿಗೆ ಯಾವಾಗಲೂ ಗುರು ದ್ರೋಹ ಮಾಡಿಲ್ಲ. ಅವರಿಗೆ ನೀಡಬೇಕಾದ ಗೌರವವನ್ನು ಕೊಡುತ್ತಲೇ ಬಂದಿದ್ದೇನೆ. ಚಿತ್ರದ ಪ್ರಚಾರಕ್ಕೆ ಹೋಗಬೇಡ ಎಂದು ಅವರು ಹೇಳಿದ್ದರು. ಆದರೆ ನಾನು ಪ್ರಚಾರದಲ್ಲಿ ಭಾಗಿಯಾದೆ. ಆದ್ದರಿಂದ ಅವರು ನನ್ನನ್ನು ಈ ವಿವಾದದಲ್ಲಿ ಎಳೆದು ತರುತ್ತಿದ್ದಾರೆ. ಇಲ್ಲಿಗೆ ನನ್ನ ಮತ್ತು ಗುರುಪ್ರಸಾದ್ ಸ್ನೇಹ ಕೊನೆಯಾಯ್ತು’ ಎಂದು ಪ್ರತಿಕ್ರಿಯಿಸಿದ್ದಾರೆ.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.