ADVERTISEMENT

‘ಮೋಜೊ’ ಜಾದೂ

​ಪ್ರಜಾವಾಣಿ ವಾರ್ತೆ
Published 18 ಮೇ 2017, 19:30 IST
Last Updated 18 ಮೇ 2017, 19:30 IST
‘ಮೋಜೊ’ ಜಾದೂ
‘ಮೋಜೊ’ ಜಾದೂ   
ನಿರ್ದೇಶಕ ಶ್ರೀಶ ಬೆಳಕವಾಡಿ ತಮ್ಮ ವೃತ್ತಿಜೀವನದಲ್ಲಿ ಜಾದೂ ನಿರೀಕ್ಷೆಯಲ್ಲಿದ್ದಾರೆ. ಅದು ಗೆಲುವಿನ ಹಂಬಲದ ಜಾದು. 
 
‘ಮೋಜೊ’ ಶ್ರೀಶ ನಿರ್ದೇಶಿಸುತ್ತಿರುವ ಸಿನಿಮಾದ ಹೆಸರು. ‘ಮೋಜೊ’ ಅಂದರೆ ಆಫ್ರಿಕನ್ ಭಾಷೆಯಲ್ಲಿ ಜಾದೂ ಎಂದರ್ಥ. ಹೆಸರಿನಲ್ಲಿನ ಈ ಜಾದೂವನ್ನು ಫಲಿತಾಂಶದಲ್ಲೂ ಕಾಣುವ ಹಂಬಲ ಚಿತ್ರತಂಡದ್ದು. ಸಿನಿಮಾದ ಟ್ರೇಲರ್‌ ಬಿಡುಗಡೆ ಸಂದರ್ಭದಲ್ಲಿ ಶ್ರೀಶ ಬಳಗದ ಎಲ್ಲರಲ್ಲೂ ಸೂಚ್ಯವಾಗಿ ಕಾಣಿಸಿದ್ದು ಇದೇ ಹಂಬಲ. 

ಪ್ರಸ್ತುತ ‘ಮೋಜೊ’ ಸಿನಿಮಾವು ನಿರ್ಮಾಣದ ಕೊನೆಯ ಹಂತದಲ್ಲಿದೆ. ಅಂದಹಾಗೆ, ಶ್ರೀಶ ಅವರ ಮೊದಲನೆಯ ನಿರ್ದೇಶನದ ಚಿತ್ರ ಇದು. ಹಾರರ್‌ ಕಥೆಯನ್ನು ಜನರಿಗೆ ಇಷ್ಟವಾಗುವಂತೆ ಅವರು ರೂಪಿಸುತ್ತಿದ್ದಾರಂತೆ. ಇನ್ನೆರಡು ಚಿತ್ರಗಳಲ್ಲಿ ಸಿನಿಮಾವನ್ನು ತೆರೆಕಾಣಿಸುವ ಉಮೇದು ಅವರದು. 
 
 ಮನು ಮತ್ತು ಅನೂಷಾ ಈ ಚಿತ್ರದಲ್ಲಿ ನಾಯಕ–ನಾಯಕಿ. ಇಬ್ಬರೂ ರಂಗಭೂಮಿ ಹಿನ್ನೆಲೆಯವರು. ಮನು ಅವರದು ಚಿತ್ರದಲ್ಲಿ ಪತ್ರಕರ್ತನ ಪಾತ್ರ. ಗಜಾನನ ಭಟ್ ಚಿತ್ರದ ನಿರ್ಮಾಪಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.