ADVERTISEMENT

ಸಿನಿಹನಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2015, 19:30 IST
Last Updated 26 ಜೂನ್ 2015, 19:30 IST

‘ಬಿಲ್ಲಾ’ಕ್ಕೆ ಯು/ಎ
ರಾಂ ನಾರಾಯಣ್ ನಿರ್ಮಾಣ ಮತ್ತು ನಿರ್ದೇಶನವಿರುವ ‘ಬಿಲ್ಲಾ’ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಒಂದೇ ದಿನದಲ್ಲಿ ನಡೆಯುವ ಕಥೆಯುಳ್ಳ ಈ ಚಿತ್ರದ ಚಿತ್ರೀಕರಣ ಶೇ 50ರಷ್ಟು ಭಾಗ ಕಾಡು ಹಾಗೂ 50ರಷ್ಟು ಭಾಗ ರಸ್ತೆಯಲ್ಲಿ ನಡೆದಿದೆ. ಗ್ರಾಫಿಕ್‌ಗೆ ಹೆಚ್ಚು ಮಹತ್ವವಿರುವ ಚಿತ್ರದಲ್ಲಿ ಚಿರತೆಯೂ ಮುಖ್ಯ ಪಾತ್ರಧಾರಿ.

ತಾರಾಗಣದಲ್ಲಿ ಕೃಷ್ಣದೇವ್, ಅಂಜನ, ಶ್ರವಂತ್, ಅಮೀರ್, ಜೈಜಗದೀಶ್, ಸುಧಾರಾಣಿ, ಅಶೋಕ್, ಭವ್ಯಾ, ರಮೇಶ್ ಭಟ್, ರವೀಂದ್ರನಾಥ್, ನಕುಲ್, ಪದ್ಮಜಾರಾವ್ ಇದ್ದಾರೆ. ಶ್ಯಾಂ ಛಾಯಾಗ್ರಹಣ, ಶ್ರೀರಾಮ್ ಸಂಗೀತ, ಮಹಾವಿಷ್ಣು ಸಂಕಲನ, ದ್ವಾರಕಿರಾಘವ್ ಸಂಭಾಷಣೆ ಮತ್ತು ಗೀತರಚನೆ, ಪವರ್ ಫಾಸ್ಟ್ ಸಾಹಸ ಇರುವ ಈ ‘ಬಿಲ್ಲಾ’ ಮುಂದಿನ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.

‘ಭಲೇ ಜೋಡಿ’ ಡಬ್ಬಿಂಗ್ ಪೂರ್ಣ

ಶೈಲೇಂದ್ರಬಾಬು ನಿರ್ಮಾಣದ, ಸಾಧುಕೋಕಿಲ ನಿರ್ದೇಶನದ ‘ಭಲೇ ಜೋಡಿ‘ ಚಿತ್ರದ ಮಾತಿನ ಜೋಡಣೆ ಕಾರ್ಯ ಪೂರ್ಣಗೊಂಡಿದೆ. ಸುಮಂತ್ ಶೈಲೇಂದ್ರ ಚಿತ್ರದ ನಾಯಕ. ಶಾನ್ವಿ ಶ್ರೀವಾಸ್ತವ್, ಹರಿಪ್ರಿಯಾ, ಹರ್ಷಿಕಾ ಪೂಣಚ್ಚ, ಸುಮಲತಾ, ಸಾಧುಕೋಕಿಲ, ರವಿಶಂಕರ್ ಇತರರು ತಾರಾಬಳಗದಲ್ಲಿದ್ದಾರೆ.

ಜೈಆನಂದ್ ಛಾಯಾಗ್ರಹಣ, ಜೋ.ನಿ. ಹರ್ಷ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ಇಸ್ಮಾಯಿಲ್ ಕಲಾ ನಿರ್ದೇಶನ ‘ಭಲೇಜೋಡಿ’ಗಿದೆ.

‘ರಾಕ್ಷಸಿ’ ಚಿತ್ರೀಕರಣ ಜೋರು

ಕೆಲ ಪ್ರಮುಖ ದೃಶ್ಯಗಳನ್ನು ನಗರದ ಖಾಸಗಿ ಬಂಗಲೆಯಲ್ಲಿ ಚಿತ್ರೀಕರಣ ಮಾಡುವ ಮೂಲಕ ‘ರಾಕ್ಷಸಿ’ ಚಿತ್ರದ ಶೇ 60ರಷ್ಟು ಚಿತ್ರೀಕರಣ ಪೂರ್ಣಗೊಂಡಂತಾಗಿದೆ.

ತಂದೆ ಮತ್ತು ಮಗಳ ಬಾಂಧವ್ಯದ ಕಥಾವಸ್ತು ಹೊಂದಿರುವ ಇದು, ತಮಿಳಿನ ‘ಪಿಸಾಸು’ ಚಿತ್ರದ ರಿಮೇಕ್. ‘ರಾಕ್ಷಸಿ’ಗೆ ಅಶ್ರಫ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಮೋಹನ್ ಛಾಯಾಗ್ರಹಣ, ವಿಶಾಲ್ ಸಂಕಲನ-, -ಸೋಮಶೇಖರ್ ಕಲಾ ನಿರ್ದೇಶನ, ಶಿವು ಸಾಹಸ ನಿರ್ದೇಶನ ಇರುವ ಚಿತ್ರದ ಕಲಾಬಳಗದಲ್ಲಿ ನವರಸನ್, ಸಿಂಧು ಲೋಕನಾಥ್, ಕುರಿ ಪ್ರತಾಪ್, ಸುಜಿತ್, ಕೃಷ್ಣಮೂರ್ತಿ ಕೌತಾರ್ ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.