ADVERTISEMENT

ಹಾಲಿವುಡ್‌ ಚಿತ್ರರಂಗದಲ್ಲಿ ಆಸಕ್ತಿ ಇಲ್ಲ: ಆಮೀರ್‌ ಖಾನ್‌

ಪಿಟಿಐ
Published 18 ಜನವರಿ 2017, 10:25 IST
Last Updated 18 ಜನವರಿ 2017, 10:25 IST
ಹಾಲಿವುಡ್‌ ಚಿತ್ರರಂಗದಲ್ಲಿ ಆಸಕ್ತಿ ಇಲ್ಲ: ಆಮೀರ್‌ ಖಾನ್‌
ಹಾಲಿವುಡ್‌ ಚಿತ್ರರಂಗದಲ್ಲಿ ಆಸಕ್ತಿ ಇಲ್ಲ: ಆಮೀರ್‌ ಖಾನ್‌   

ಮುಂಬೈ: ಬಾಲಿವುಡ್‌ ಮಿಸ್ಟರ್‌ ಪರ್‌‍ಫೆಕ್ಟ್‌ ಆಮೀರ್‌ ಖಾನ್‌ ಹಾಲಿವುಡ್‌ (ಇಂಗ್ಲಿಷ್‌) ಚಿತ್ರಗಳಲ್ಲಿ ನಟಿಸುವ ಆಸಕ್ತಿ ಇಲ್ಲ ಎಂದಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕಳೆದ 26 ವರ್ಷದಿಂದ ಬಾಲಿವುಡ್‌ ಚಿತ್ರರಸಿಕರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇನೆ. ಭಾರತೀಯ ಚಿತ್ರರಂಗದಲ್ಲೇ ಮುಂದುವರೆಯುವ ಆಸೆ ನನ್ನದು’ ಎಂದಿದ್ದಾರೆ.

ಅಂತರರಾಷ್ಟ್ರೀಯ ಚಿತ್ರರಂಗದಿಂದ ವಿಶ್ವಮಟ್ಟದ ಪ್ರೇಕ್ಷಕರನ್ನು ರಂಜಿಸುವ ಅವಕಾಶಕ್ಕೆ ಎದುರು ನೋಡುತ್ತಿಲ್ಲ. ಸದಭಿರುಚಿಯ ಪಾತ್ರಕ್ಕೆ ಅವಕಾಶ ದೊರೆತರೆ ನಟನೆ ಮಾಡುವುದಾಗಿ ಅವರು ತಿಳಿಸಿದ್ದಾರೆ.

51ರ ಹರೆಯದ ಆಮೀರ್‌, ಜಪಾನಿ ಚಿತ್ರಗಳಲ್ಲಿ ಅವಕಾಶ ದೊರೆತರೆ ನಟಿಸುವುದಾಗಿ ಹೇಳಿದ್ದಾರೆ. ‘ಜುರಾಸಿಕ್‌ ಪಾರ್ಕ್‌’, ’ಸ್ಪೈಡರ್‌ ಮ್ಯಾನ್‌’, ‘ದಿ ಜಂಗಲ್‌ ಬುಕ್’ ರೀತಿಯ ಸಿನಿಮಾಗಳು ಭಾರತದಲ್ಲಿ ಉತ್ತಮ ಹಣ ಗಳಿಕೆ ಮಾಡಿವೆ. ಉತ್ತಮ ಚಿತ್ರಗಳಿಗೆ ಪ್ರೇಕ್ಷಕ ಮನಸೋಲುವುದು ಸಹಜ. ಆದರೆ ಆ ಚಿತ್ರಗಳು ಹಿಂದಿ ಚಿತ್ರೋದ್ಯಮಕ್ಕೆ ಪೈಪೋಟಿ ನೀಡಲು ನಿರ್ಮಾಣವಾಗಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಒಳ್ಳೆಯ ಚಿತ್ರಗಳು ಬಾಲಿವುಡ್‌ನಲ್ಲಿ ನಿರ್ಮಾಣವಾದರೆ ಅದರಿಂದ ಚಿತ್ರೋದ್ಯಮ ಬೆಳೆಯುತ್ತದೆ. ಭಾಷೆ ಯಾವುದೇ ಆಗಿರಲಿ ಉತ್ತಮ ಕಥೆಯಿಂದ ಚಿತ್ರ ಗೆಲ್ಲಬಹುದು’ ಎಂದರು.

ಇರ್ಫಾನ್‌ ಖಾನ್‌, ಐಶ್ವರ್ಯ ರೈ ಬಚ್ಚನ್‌, ಅನಿಲ್‌ ಕಪೂರ್‌, ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆಯವರು ಈಗಾಗಲೇ ಹಾಲಿವುಡ್‌ ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.