ADVERTISEMENT

ಹೆಸರಲ್ಲೂ ಅಪ್ಪ, ಅಜ್ಜ!

​ಪ್ರಜಾವಾಣಿ ವಾರ್ತೆ
Published 23 ಜುಲೈ 2014, 19:30 IST
Last Updated 23 ಜುಲೈ 2014, 19:30 IST

‘ನನ್ನ ಅಜ್ಜನ ಸಾಂಗತ್ಯ ನನಗೆ ಸಿಗಲೇ ಇಲ್ಲ. ಜೀವಮಾನದಲ್ಲಿ ಅವರನ್ನು ಭೇಟಿ ಆಗುವುದು ಸಾಧ್ಯವಿಲ್ಲ’ ಎಂಬ ಮಾತುಗಳನ್ನಾಡಿದ್ದಾರೆ ಮುಕೇಶ್ ಮೊಮ್ಮಗ ನೀಲ್ ನಿತಿನ್ ಮುಕೇಶ್.

‘ಗಾಯಕ ಮುಕೇಶ್ ಮೊಮ್ಮಗ ನಾನು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ’ ಎಂದು ಮುಕೇಶ್ ಅವರ 91ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನೀಲ್ ಹೇಳಿದ್ದಾರೆ.

‘‘ಅಜ್ಜನ ಕುರಿತು ಅಜ್ಜಿ ಸಾಕಷ್ಟು ವಿಷಯಗಳನ್ನು ನನಗೆ ತಿಳಿಸಿದ್ದರು. ಆ ನೆನಪುಗಳಿಂದ ನಾನು ಅಜ್ಜನ ಅಭಿಮಾನಿಯಾದೆ. ಅವರು ಹಾಡಿದ ‘ಜೀನಾ ಯಹಾ ಮರ್ನಾ ಯಹಾ’ ಹಾಡು ಸದಾ ಕಾಡುತ್ತದೆ’’ ಎಂದು ಅಜ್ಜನ ಕುರಿತ ಪ್ರೀತಿ ಬಿಚ್ಚಿಟ್ಟಿದ್ದಾರೆ. ಅಜ್ಜನೆಡೆಗಿನ ಪ್ರೀತಿಯ ಜತೆಗೆ ತನ್ನ ನಾಮಧೇಯದ ಹಿನ್ನೆಲೆಯ ಕುರಿತು ನೀಲ್ ಮಾತನಾಡಿದ್ದಾರೆ.

‘ನನ್ನ ಹೆಸರು ನೀಲ್. ಅಪ್ಪನ ಹೆಸರನ್ನು ಸ್ಮರಿಸಿಕೊಳ್ಳುವುದಕ್ಕಾಗಿ ನಾನು ನೀಲ್ ನಿತಿನ್ ಮುಕೇಶ್ ಎಂದು ಸೇರಿಸಿಕೊಂಡಿದ್ದೇನೆ. ನನ್ನ ಅಪ್ಪ ಅವರ ತಂದೆಯ ಹೆಸರನ್ನು ತಮ್ಮ ಹೆಸರಿನೊಂದಿಗೆ ಇಟ್ಟುಕೊಂಡಿದ್ದಾರೆ. ನಾನು ಅಪ್ಪ, ಅಜ್ಜನ ಹೆಸರುಗಳನ್ನು ಸೇರಿಸಿ ನೀಲ್ ನಿತಿನ್ ಮುಕೇಶ್ ಎಂದು ಹೆಸರು ಇಟ್ಟುಕೊಂಡಿದ್ದೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.