ADVERTISEMENT

‘ಹಾಫ್‌ಮೆಂಟಲ್’ ಮೊದಲ ಪ್ರತಿ ಸಿದ್ಧ

ಸಿನಿ ಹನಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2015, 19:30 IST
Last Updated 1 ಅಕ್ಟೋಬರ್ 2015, 19:30 IST

ಜಿ.ಶಿವಕುಮಾರ್ ನಿರ್ಮಾಣದ ‘ಹಾಫ್ ಮೆಂಟಲ್’ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ–ಇಷ್ಟೆಲ್ಲ ಜವಾಬ್ದಾರಿ ನಿರ್ವಹಿಸಿದ್ದಾರೆ ಲಕ್ಷ್ಮೀ ದಿನೇಶ್. ಪಿ.ಎಲ್. ರವಿ ಛಾಯಾಗ್ರಹಣ, ಬಿ.ಜೆ. ಭರತ್ ಸಂಗೀತ, ಸಚಿನ್ ಸಂಕಲನ, ಮಾಸ್ ಮಾದ ಸಾಹಸ, ಹೈಟ್ ಮಂಜ ನೃತ್ಯ, ಮುರುಳಿ, ಪ್ರಭು ಕಲಾ ನಿರ್ದೇಶನವಿದೆ. ತಾರಾಗಣದಲ್ಲಿ ಸಂದೀಪ್, ಸೋನು, ಮೈಕೋ ನಾಗರಾಜ್, ಲಕ್ಷ್ಮೀದೇವಮ್ಮ, ತಬಲಾ ನಾಣಿ, ಶ್ರೀನಿವಾಸ್ ಗೌಡ, ಮೋಹನ್ ಜುನೇಜಾ, ಉಂಡಾಡಿ ಗುಂಡ ಹರಿ ಮುಂತಾದವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.