ಮುಂಬೈ:ಬಾಲಿವುಡ್ ಸೂಪರ್ಸ್ಟಾರ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಅವರಿಗೆ ಗೆಳೆಯ ನೂಪುರ್ ಶಿಖರೆ ಉಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿದ್ದಾರೆ.
ಸೈಕ್ಲಿಂಗ್ ಈವೆಂಟ್ ವೇಳೆ ಈ ಪ್ರಸಂಗ ನಡೆದಿದೆ. ಸ್ಟಾಂಡ್ ಬಳಿ ನಿಂತಿದ್ದ ಇರಾ ಬಳಿಗೆ ಬಂದ ನೂಪುರ್, ಮಂಡಿಯೂರಿ ಉಂಗುರ ತೊಡಿಸಿದ್ದಾರೆ. 'ನನ್ನನ್ನು ಮದುವೆಯಾಗುವೆಯಾ?' ಎಂದು ಕೇಳಿದ್ದಾರೆ. ಅದಕ್ಕೆ ಇರಾ, ಹೌದೆಂದು ಸಮ್ಮತಿಸಿದ್ದಾರೆ.
ಬಳಿಕ ಇಬ್ಬರೂ ಅದರ ಚುಂಬನ ಮಾಡಿ ಸಂಭ್ರಮಿಸಿದ್ದಾರೆ. ನೆರೆದಿದ್ದ ಸ್ನೇಹಿತರು ಹಾಗೂ ಇತರರು ಈ ಜೋಡಿಗೆ ಶುಭ ಹಾರೈಸಿದ್ದಾರೆ.
ಈ ಸಂದರ್ಭದ ವಿಡಿಯೊವನ್ನು ಇರಾ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ.
ಇರಾ ಹಾಗೂಫಿಟ್ನೆಸ್ ಎಕ್ಸ್ಪರ್ಟ್ ನೂಪುರ್ ಕಳೆದರೆಡು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು.
ಇರಾ, ರೀನಾ ದತ್ತ ಹಾಗೂ ಅಮಿರ್ ಖಾನ್ ದಂಪತಿಯ ಮಗಳು. ಈ ದಂಪತಿ2002ರಲ್ಲಿ ಬೇರೆಯಾಗಿದ್ದರು.
ಇವನ್ನೂ ಓದಿ
*ಹಾಟ್ ಫೋಟೊಗಳಲ್ಲಿ ಮಿಂಚಿದ ಅಮೀರ್ ಪುತ್ರಿ:ಗೆಳೆಯನ ಜತೆ ಜನ್ಮದಿನ ಆಚರಿಸಿಕೊಂಡ ಇರಾ...
*ಟ್ರೋಲ್ಗಳಿಗೆ ಹೆದರುವುದಿಲ್ಲ ಎಂದು ಮತ್ತಷ್ಟು ಫೋಟೊ ಪೋಸ್ಟ್ ಮಾಡಿದ ಇರಾ ಖಾನ್
*ಪ್ರೀತಿಗೆ ಎರಡು ವರ್ಷದ ಸಂಭ್ರಮ: ಪ್ರಿಯಕರನ ಜತೆಗಿನ ಫೋಟೊ ಪೋಸ್ಟ್ ಮಾಡಿದ ಇರಾ ಖಾನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.