ADVERTISEMENT

ದೇಶ, ವಿದೇಶದ ಖಾದ್ಯ ವೈವಿಧ್ಯ

ನಳಪಾಕ

ವಿದ್ಯಾಶ್ರೀ ಎಸ್.
Published 16 ಸೆಪ್ಟೆಂಬರ್ 2016, 19:30 IST
Last Updated 16 ಸೆಪ್ಟೆಂಬರ್ 2016, 19:30 IST
ದೇಶ, ವಿದೇಶದ ಖಾದ್ಯ ವೈವಿಧ್ಯ
ದೇಶ, ವಿದೇಶದ ಖಾದ್ಯ ವೈವಿಧ್ಯ   

ಬಾಣಸಿಗ ಸೋಂಬಿರ್‌ ಚೌಧರಿ ಯುರೋಪಿಯನ್‌ ಅಡುಗೆ ತಯಾರಿಸುವುದರಲ್ಲಿ ಪಳಗಿದವರು. ಓಪನ್‌ ಬಾಕ್ಸ್‌ ರೆಸ್ಟೋರೆಂಟ್‌ನಲ್ಲಿ ಬಾಣಸಿಗರಾಗಿರುವ ಇವರಿಗೆ ಈ ಕ್ಷೇತ್ರದಲ್ಲಿ ಎಂಟು ವರ್ಷಗಳ ಅನುಭವವಿದೆ.

ಇವರ ತಿನಿಸುಗಳಲ್ಲಿ ದೇಶ ವಿದೇಶದ ಸಮ್ಮಿಳಿತವನ್ನು ಕಾಣಬಹುದು. ಬಾಣಸಿಗನಾಗಲು ಅಮ್ಮನೇ ಪ್ರೇರಣೆ ಎನ್ನುತ್ತಾರೆ ಇವರು. ವೈವಿಧ್ಯಮಯ ತಿನಿಸು ತಯಾರಿಸುವುದರಲ್ಲಿ ಪಳಗಿರುವ ಇವರು, ಕಡಿಮೆ ಅವಧಿಯಲ್ಲಿ ಮಾಡಬಹುದಾದ ತಿನಿಸುಗಳ ಕುರಿತು ಇಲ್ಲಿ ವಿವರಿಸಿದ್ದಾರೆ.

*
ಗುಲಾಬ್‌ ನಟ್‌

ಬೇಕಾಗುವ ಸಾಮಗ್ರಿ
ಸಕ್ಕರೆ 100 ಗ್ರಾಂ, ಏಲಕ್ಕಿ 5 ಗ್ರಾಂ, ಕೋವಾ 500 ಗ್ರಾಂ, ಮೈದಾ 100 ಗ್ರಾಂ, ಬೇಕಿಂಗ್‌ ಪೌಡರ್‌ 1 ಗ್ರಾಂ, ಹಾಲು 20 ಗ್ರಾಂ, ತುಪ್ಪ 5 ಗ್ರಾಂ, ತುಪ್ಪ ಅಥವಾ ಎಣ್ಣೆ ಫ್ರೈ ಮಾಡಲು. ನೀರು.

ಮಾಡುವ ವಿಧಾನ
ನೀರನ್ನು ಬಿಸಿ ಮಾಡಿ ಅದಕ್ಕೆ ಏಲಕ್ಕಿ ಪುಡಿ ಹಾಕಬೇಕು. ನಂತರ ಸಕ್ಕರೆ ಹಾಕಿ ಪಾಕ ಬರುವವರೆಗೂ ಕುದಿಸಬೇಕು. ಇನ್ನೊಂದು ಬೌಲ್‌ನಲ್ಲಿ ಕೋವಾ, ಮೈದಾ ಮತ್ತು ಬೇಕಿಂಗ್‌ ಪೌಡರನ್ನು  ಹಾಕಿ ಚೆನ್ನಾಗಿ ಕಲಸಬೇಕು.

ಈ ಮಿಶ್ರಣಕ್ಕೆ  ಹಾಲು ಮತ್ತು ತುಪ್ಪವನ್ನು ಸೇರಿಸಿ ಪುನಃ ಕಲಸಬೇಕು.  ‘ಡಫ್‌ನಟ್‌ ಕಟರ್‌’ನಲ್ಲಿ ಈ ಮಿಶ್ರಣವನ್ನು ಹಾಕಿ ಬೇಕಾದ ಆಕಾರಕ್ಕೆ  ಕತ್ತರಿಸಬೇಕು. ಇದನ್ನು ಎಣ್ಣೆ ಅಥವಾ ತುಪ್ಪದಲ್ಲಿ ಫ್ರೈ ಮಾಡಬೇಕು. ನಂತರ ಸಕ್ಕರೆ ಪಾಕಕ್ಕೆ ಹಾಕಿದರೆ ಗುಲಾಬ್‌ ನಟ್‌ ತಯಾರಾಗುತ್ತದೆ.

*
ಚಿಲ್ಲಿ ಚೀಸ್‌ ಸ್ಯಾಂಡ್‌ವಿಚ್
ಬೇಕಾಗುವ ಸಾಮಗ್ರಿ

ಬ್ರೇಡ್‌ ಎರಡು ಪೀಸ್‌, ಬೆಣ್ಣೆ 25 ಗ್ರಾಂ, ಖಾರದ ಪುಡಿ ಒಂದು ಗ್ರಾಂ, ಚೀಸ್‌ 40 ಗ್ರಾಂ,  ಹಸಿ ಮೆಣಸಿನಕಾಯಿ 3 ಗ್ರಾಂ.

ಮಾಡುವ ವಿಧಾನ
ಬೌಲ್‌ನಲ್ಲಿ ಬೆಣ್ಣೆಯನ್ನು ಹಾಕಬೇಕು. ಅದಕ್ಕೆ ಹಸಿರು ಮತ್ತು ಖಾರದ ಪುಡಿಯನ್ನು ಹಾಕಿ ಕಲಸಬೇಕು. ಈ ಮಿಶ್ರಣವನ್ನು ಬ್ರೇಡ್‌ ಮೇಲೆ ಹಾಕಿ ರೋಸ್ಟ್ ಮಾಡಬೇಕು.

ನಂತರ ಅದರ ಮೇಲೆ ಚೀಸ್ ಇಡಬೇಕು. ನಂತರ ಸ್ಯಾಂಡ್‌ವಿಚ್‌  ಟೋಸ್ಟರ್‌ನಲ್ಲಿ ಹತ್ತು ನಿಮಿಷ ಕಾಯಿಸಬೇಕು. ಈಗ ಬಿಸಿಬಿಸಿಯಾದ ಚಿಲ್ಲಿ ಚೀಸ್‌ ಸ್ಯಾಂಡ್‌ವಿಚ್‌ ತಯಾರಾಗುತ್ತದೆ.

*
ಮ್ಯಾಕ್‌ ಆ್ಯಂಡ್‌ ಚೀಸ್‌ ಸಿಗರ್‌ ರೋಲ್ಸ್
ಬೇಕಾಗುವ ಸಾಮಗ್ರಿ
ನಾಸ್‌ ವೊಂಟಾನ್‌ ಶೀಟ್ಸ್‌ ನಾಲ್ಕು, ಮಾರ್ಕೊನಿ ಪಾಸ್ತಾ 80 ಗ್ರಾಂ, ಫಿಲಾಡೆನ್ಫಿಯಾ ಚೀಸ್‌ 30 ಗ್ರಾಂ, ಚೆಡ್ಡರ್‌ 10 ಗ್ರಾಂ, ಥೈಮ್‌ ಎರಡು ಗ್ರಾಂ, ಕಾಳುಮೆಣಸಿನ ಪುಡಿ 3 ಗ್ರಾಂ.

ಮಾಡುವ ವಿಧಾನ
ಪಾಸ್ತಾನವನ್ನು ಬೇಯಿಸಿ, ಕತ್ತರಿಸಿಟ್ಟುಕೊಳ್ಳಬೇಕು. ಇದಕ್ಕೆ ಥೈಮ್‌ ಮತ್ತು ಕಾಳುಮೆಣಸನ್ನು ಸೇರಿಸಬೇಕು. ಚೀಸ್‌ ಮತ್ತು ಚೆಡ್ಡರ್‌ ಮಿಶ್ರಣ ಮಾಡಿ ಅದನ್ನು ಪಾಸ್ತಾಕ್ಕೆ ಸೇರಿಸಬೇಕು. ಈ ಮಿಶ್ರಣವನ್ನು ವೊಂಟಾನ್‌ ಶೀಟ್‌ನಲ್ಲಿ ಹಾಕಿ ರೋಲ್‌ ಮಾಡಬೇಕು. ನಂತರ ಅದನ್ನುಡೀಪ್‌ ಫ್ರೈ ಮಾಡಬೇಕು. ಇದನ್ನು ಬಿಸಿಯಾಗಿ ತಿನ್ನಲು ರುಚಿಯಾಗಿರುತ್ತದೆ.

ಮೇಲೆ ಹೇಳಿದ ಎಲ್ಲಾ ಮಿಶ್ರಣವನ್ನು  ಗ್ಲಾಸ್‌ನಲ್ಲಿ ಹಾಕಿ ಮುಚ್ಚಬೇಕು. ಎರಡು ನಿಮಿಷದ ನಂತರ ಸೂಪ್‌ ಸವಿಯಲು ಸಿದ್ಧವಾಗುತ್ತದೆ.

*
ಮಾ ಕೀ ಸುಷಿ
ಬೇಕಾಗುವ ಸಾಮಗ್ರಿ

ಬುಲೆಟ್‌ ರೈಸ್‌ 100 ಗ್ರಾಂ, ತೊಗರಿ ಬೇಳೆ 800 ಗ್ರಾಂ, ಜೀರಿಗೆ ಪುಡಿ 300 ಗ್ರಾಂ, ಪುದೀನಾ ಒಂದು ಕಟ್ಟು, ಈರುಳ್ಳಿ ಒಂದು, ಟೊಮೆಟೊ ಒಂದು, ಆಲಿವ್‌ ಎಣ್ಣೆ 3 ಚಮಚ, ಮಿಶ್ರ ಉಪ್ಪಿನಕಾಯಿ ಒಂದು ಚಮಚ, ಕೊತ್ತಂಬರಿ ಸೊಪ್ಪು ಒಂದು ಕಟ್ಟು, ತರಕಾರಿಯ ಉಪ್ಪಿನಕಾಯಿ 50 ಗ್ರಾಂ, 30 ಗ್ರಾಂ, ಮಸಾಲ ಹಪ್ಪಳ.

ಮಾಡುವ ವಿಧಾನ
ಅಕ್ಕಿ ಮತ್ತು ತೊಗರಿಬೇಳೆಯನ್ನು ಬೇಯಿಸಿಕೊಳ್ಳಬೇಕು. ನಂತರ ಇದನ್ನುಒಂದು ಬೌಲ್‌ನಲ್ಲಿ ಹಾಕಿಕೊಳ್ಳಬೇಕು. ಇದಕ್ಕೆ ಜೀರಿಗೆ, ಟೊಮೆಟೊ, ಈರುಳ್ಳಿ, ಕೊತ್ತಂಬರಿ ಸೊಪ್ಪನ್ನು ಸೇರಿಸಬೇಕು.

ಈ ಮಿಶ್ರಣಕ್ಕೆ ಉಪ್ಪಿನಕಾಯಿ ಸೇರಿಸಿ ಕಲಸಬೇಕು. ಈ ಮಿಶ್ರಣವನ್ನು ಸುಶಿ ಮ್ಯಾಟ್‌ ಮೇಲೆ ಹರಡಬೇಕು. ತರಕಾರಿಯ ಉಪ್ಪಿನಕಾಯಿಯನ್ನು ತುಂಬಿ ಇದನ್ನು ರೋಲ್‌ ಮಾಡಬೇಕು. ಕರಿದ ಹಪ್ಪಳದ ಜೊತೆಗೆ ಈ ರೋಲ್‌ಅನ್ನು ಕತ್ತರಿಸಬೇಕು. ಇದು ತಣ್ಣಗಾದ ನಂತರ ತಿನ್ನಲು ರುಚಿಯಾಗಿರುತ್ತದೆ.

*
ಮ್ಯಾಗಿ ಸೂಪ್

ಬೇಕಾಗುವ ಸಾಮಗ್ರಿ
ನ್ಯೂಡಲ್ಸ್‌ 100 ಗ್ರಾಂ, ಕ್ಯಾರೆಟ್‌ 100 ಗ್ರಾಂ, ಬ್ರೊಕೋಲಿ 100 ಗ್ರಾಂ, ಹಸಿ ಬಟಾಣಿ 100 ಗ್ರಾಂ, ವೆಜ್‌ ಸ್ಟಾಕ್‌ ವಾಟರ್‌, ಕೊತ್ತಂಬರಿ ಸೊಪ್ಪು 5 ಗ್ರಾಂ.

ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲಾ ಮಿಶ್ರಣವನ್ನು  ಗ್ಲಾಸ್‌ನಲ್ಲಿ ಹಾಕಿ ಮುಚ್ಚಬೇಕು. ಎರಡು ನಿಮಿಷದ ನಂತರ ಸೂಪ್‌ ಸವಿಯಲು ಸಿದ್ಧವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.