ADVERTISEMENT

ಬೇಸಿಗೆಗೆ ಬಗೆಬಗೆ ಲಸ್ಸಿ...

ಎಸ್.ಸರಸ್ವತಿ ಎಸ್.ಭಟ್ಟ
Published 9 ಏಪ್ರಿಲ್ 2017, 19:30 IST
Last Updated 9 ಏಪ್ರಿಲ್ 2017, 19:30 IST
ಟೊಮೆಟೊ ಲಸ್ಸಿ
ಟೊಮೆಟೊ ಲಸ್ಸಿ   

ಚಾಕೊಲೆಟ್ ಲಸ್ಸಿ
ಬೇಕಾಗುವ ವಸ್ತುಗಳು:
ಒಂದು ಚಮಚ ಕೊಕೊ ಪುಡಿ, ಎರಡು ಟೇಬಲ್ ಚಮಚ ನೀರು, ಒಂದು ಕಪ್ ಮೊಸರು, ಮೂರು ಚಮಚ ಸಕ್ಕರೆ, ಸ್ವಲ್ಪ ಐಸ್ ತುಂಡುಗಳು.

ಮಾಡುವ ವಿಧಾನ: ಕೊಕೊ ಪುಡಿಗೆ ನೀರು ಹಾಕಿ ಬೆರೆಸಿ ಒಲೆಯ ಮೇಲಿಟ್ಟು ಕರಗಿಸಿ. ತಣ್ಣಗಾದ ಮೇಲೆ ಮೊಸರು, ಸಕ್ಕರೆ, ಕೊಕೊ ಮಿಶ್ರಣ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ. ನಂತರ ಗ್ಲಾಸಿಗೆ ಹಾಕಿ ಸಣ್ಣಗೆ ತುರಿದ ಡಾರ್ಕ್ ಚಾಕೊಲೆಟ್ ಮೇಲೆ ಹಾಕಿ ಕುಡಿಯಿರಿ. ಬೇಸಿಗೆಯ ಬೇಗೆ ಕಡಿಮೆ ಮಾಡುವ ಈ ಲಸ್ಸಿ ಎಲ್ಲರಿಗೂ ಇಷ್ಟವಾಗುತ್ತದೆ.

***

ADVERTISEMENT

ಜೀರಾ ಮಸಾಲ ಲಸ್ಸಿ

ಬೇಕಾಗುವ ವಸ್ತುಗಳು: ಒಂದು ಕಪ್ ಮೊಸರು, ಕಾಲು ಚಮಚ ಹುರಿದ ಜೀರಿಗೆ ಪುಡಿ, ನಾಲ್ಕು ಚಮಚ ಸಕ್ಕರೆ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು, ಕಾಲು ಕಪ್ ನೀರು.

ಮಾಡುವ ವಿಧಾನ: ಮೊಸರು, ಹುರಿದ ಜೀರಿಗೆ ಪುಡಿ, ಸಕ್ಕರೆ, ಕೊತ್ತಂಬರಿ ಸೊಪ್ಪು, ಉಪ್ಪು, ನೀರು ಸೇರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ನಂತರ ಗ್ಲಾಸಿಗೆ ಹಾಕಿ ಮೇಲೆ ಜೀರಿಗೆ ಪುಡಿ ಉದುರಿಸಿ, ಸವಿಯಿರಿ.

***

ಟೊಮೆಟೊ ಲಸ್ಸಿ

ಬೇಕಾಗುವ ವಸ್ತುಗಳು: ಒಂದು ಕಪ್ ಮೊಸರು, ಅರ್ಧ ಕಪ್ ಟೊಮೆಟೊ ರಸ, ಒಂದು ಚಮಚ ಹುರಿದ ಜೀರಿಗೆ ಪುಡಿ, ಚಿಟಕಿ ಉಪ್ಪು, ಕಾಲು ಕಪ್ ನೀರು.

ಮಾಡುವ ವಿಧಾನ: ಮೊಸರು, ಟೊಮೆಟೊ ರಸ, ಹುರಿದ ಜೀರಿಗೆ ಪುಡಿ, ಉಪ್ಪು, ನೀರು ಎಲ್ಲ ಸೇರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಸ್ವಲ್ಪ ಜೀರಿಗೆ ಪುಡಿ ಉದುರಿಸಿ, ಗ್ಲಾಸಿಗೆ ಹಾಕಿ ಸವಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.