ADVERTISEMENT

ಅಸಭ್ಯ ವರ್ತನೆಗೆ ಪೊಲೀಸ್‌ ಅತಿಥಿ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 19:30 IST
Last Updated 31 ಅಕ್ಟೋಬರ್ 2014, 19:30 IST

ಸಂಗೀತಗಾರ ಜಾನ್‌ ಕಾರ್ಟರ್‌ ಕ್ಯಾಷ್‌ ನ್ಯೂಫೌಂಡ್‌ಲ್ಯಾಂಡ್‌ನ ಡೀರ್‌ ಲೇಕ್‌ ವಿಮಾನ ನಿಲ್ದಾಣದಲ್ಲಿ ತಮ್ಮ ಚಡ್ಡಿ ಬಿಚ್ಚಿ ಪೊಲೀಸರ ಅತಿಥಿಯಾಗಿದ್ದಾರೆ.

ಜಾನಿ ಕ್ಯಾಷ್‌ ಹಾಗೂ ಜೂನ್ ಕಾರ್ಟರ್‌ ಕ್ಯಾಷ್‌ ಅವರ ಪುತ್ರ ಜಾನ್‌ ಕಾರ್ಟರ್‌ ಸೊಮವಾರ ಡೀರ್‌ಲೇಕ್‌ ವಿಮಾನ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ತಮ್ಮ ಚಡ್ಡಿ ಕಳಚಿದ್ದರು. ಇರಿಂದಾಗಿ ಪೊಲೀಸರು ಜಾನ್‌ ಕಾರ್ಟರ್‌ ಅವರನ್ನು ಬಂಧಿಸಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕೃತ ಮೂಲಗಳು ಸಿಬಿಸಿ ನ್ಯೂಸ್‌ಗೆ ತಿಳಿಸಿವೆ.

44 ವರ್ಷದ ಜಾನ್‌ ಹಂಟಿಂಗ್‌ ಪ್ರವಾಸ ಮುಗಿಸಿ Tennesseeಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಡೀರ್‌ಲೇಕ್‌ ರಾಯಲ್‌ ಕ್ಯಾನ್‌ಡಿಡ್‌ ಮವಂಟೇನ್‌ ಪೊಲೀಸರು ಜಾನ್‌ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಪಾನಮತ್ತನಾಗಿರುವ ಅಥವಾ ವೈದ್ಯಕೀಯ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಯೋರ್ವ ವಿಮಾನ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತು. ಹೋಗಿ ನೋಡಿದಾಗ, ಜಾನ್‌ ಆ ವ್ಯಕ್ತಿ ಎನ್ನುವುದು ಗೊತ್ತಾಯಿತು. ಪೊಲೀಸರು ಅವರನ್ನು ಬಂಧಿಸಿದರು. ಜಾನ್‌ ತಮ್ಮ ಬಟ್ಟೆ ಕಳಚಿದಾಗ ಅಲ್ಲಿಗೆ ಬಂದ ವಿಮಾನ ನಿಲ್ದಾಣದ ರಕ್ಷಣಾ ಸಿಬ್ಬಂದಿ ಪೊಲೀಸರು ಬರುವ ಮುನ್ನ ಮತ್ತೆ ಬಟ್ಟೆ ತೊಡುವಂತೆ ಮನವೊಲಿದ್ದರು ಎನ್ನಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.