ADVERTISEMENT

ತಿಗಳ ಕ್ಷತ್ರಿಯರ ಆಹಾರೋತ್ಸವ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 19:30 IST
Last Updated 14 ಜುಲೈ 2017, 19:30 IST
ತಿಗಳ ಕ್ಷತ್ರಿಯರ ಆಹಾರೋತ್ಸವ
ತಿಗಳ ಕ್ಷತ್ರಿಯರ ಆಹಾರೋತ್ಸವ   

ವಿವಿಧ ಬಗೆಯ ಮಾಂಸಾಹಾರಿ ಖಾದ್ಯಗಳು, ಏಡಿಯಿಂದ ಮಾಡಿದ ತಿನಿಸುಗಳು, ರಾಗಿಮುದ್ದೆ ಬಸ್ಸಾರು... ಆಹಾ ಆಹಾರಪ್ರಿಯರಿಗೆ ಇನ್ನೇನು ಬೇಕು. ಈ ಎಲ್ಲಾ ತಿನಿಸುಗಳು ಒಂದೇ ಸೂರಿನಡಿ ಲಭ್ಯವಾದರೆ.

ವಿಶ್ವ ಕ್ಷತ್ರಿಯ ಮಹಾ ಸಂಸ್ಥಾನವು ಕ್ಷತ್ರಿಯರ ಆಹಾರ ಪದ್ಧತಿಯನ್ನು ಪರಿಚಯಿಸುವ ಸಲುವಾಗಿ ಭಾನುವಾರ (ಜುಲೈ 16) ರಾಜ್ಯ ಮಟ್ಟದ ಆಹಾರ ಮೇಳವನ್ನು ಆಯೋಜಿಸಿದೆ. ಮೇಳದಲ್ಲಿ ಏಡಿಯಿಂದ ತಯಾರಿಸಿದ 5 ಬಗೆಯ ಖಾದ್ಯಗಳು ಗಮನ ಸೆಳೆಯಲಿವೆ.

ಇದರೊಂದಿಗೆ ಸಿಗಡಿ, ನಾಟಿಕೋಳಿ, ಕೆರೆ ಮೀನು, ಮೇಕೆ ಮಾಂಸದ 25ಕ್ಕೂ ಹೆಚ್ಚಿನ ಬಗೆಯ ತಿನಿಸುಗಳನ್ನು ಸಿದ್ಧಪಡಿಸಲಾಗುತ್ತದೆ. ಜೊತೆಗೆ ಮುದ್ದೆ, ಬಸ್ಸಾರು, ಸೊಪ್ಪು ಸಾರು, ಮೊಳಕೆ ಕಾಳುಸಾರು, ಕಾಯಿ ಪಲ್ಯಗಳು ಸಸ್ಯಾಹಾರಿಗಳಿಗಾಗಿ ತಯಾರಾಗಲಿವೆ ಎಂದು ಸಂಸ್ಥಾನದ ಅಧ್ಯಕ್ಷ ಎಂ.ಡಿ.ಪ್ರಕಾಶ್‌ ಹೇಳಿದ್ದಾರೆ.

ADVERTISEMENT

ಮೇಳದ ಆಕರ್ಷಣೆ: ಏಡಿ ಹಾಗೂ ಮೀನು ಹಿಡಿಯುವ ಸ್ಪರ್ಧೆ, ಸೆಲ್ಫಿ ವಿಥ್ ಬಿಗ್ ಕ್ರ್ಯಾಬ್, ಗರಡಿಯ ಕಸರತ್ತಿನ ಪ್ರಾತ್ಯಕ್ಷಿಕೆ, ಕತ್ತಿ ಹಾಗೂ ದೊಣ್ಣೆವರಸೆಯ ಬಿರುಸು ನೋಟ, ತಿಗಳರ ಸಾಂಪ್ರದಾಯಿಕ ವಸ್ತುಗಳ ಪ್ರದರ್ಶನ, ತರಕಾರಿ ಸಂತೆ ಸೇರಿದಂತೆ ಆಯುಧಗಳ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಎಂ.ವೀರಪ್ಪ ಮೊಯ್ಲಿ ಸಂಸ್ಥಾನದ ಲಾಂಛನ ಬಿಡುಗಡೆ ಮಾಡಲಿದ್ದಾರೆ. ಶಾಸಕ ಎಸ್.ಟಿ. ಸೋಮಶೇಖರ್, ಎಚ್. ವಿಶ್ವನಾಥ್, ಎಸ್. ಮುನಿರಾಜು, ಎಸ್.ಎ. ರಾಮದಾಸ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸ್ಥಳ: ನೀಲಕಂಠ ಕನ್ವೆನ್ಷನ್ ಸೆಂಟರ್, ಮಾದಾವರ, ತುಮಕೂರು ರಸ್ತೆ. ಬೆಳಿಗ್ಗೆ 11ರಿಂದ ಸಂಜೆ 4.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.