ADVERTISEMENT

‘ನನಗೆ ಬಾಲಿವುಡ್ಡೇ ಎಲ್ಲಾ’

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2017, 19:30 IST
Last Updated 18 ಆಗಸ್ಟ್ 2017, 19:30 IST
‘ನನಗೆ ಬಾಲಿವುಡ್ಡೇ ಎಲ್ಲಾ’
‘ನನಗೆ ಬಾಲಿವುಡ್ಡೇ ಎಲ್ಲಾ’   

‘ಹಾಲಿವುಡ್‌ ಮತ್ತು ಬಾಲಿವುಡ್‌ ನಡುವೆ ಬಾಲಿವುಡ್‌ ಅನ್ನೇ ಆಯ್ಕೆ ಮಾಡಿಕೊಂಡಿದ್ದು ನನ್ನ ಅತ್ಯುತ್ತಮ ನಿರ್ಧಾರಗಳಲ್ಲೊಂದು’ ಎಂದಿದ್ದಾರೆ ಐಶ್ವರ್ಯಾ ರೈ.

ದಶಕದ ಹಿಂದೆ ಕೆಲವು ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿದ್ದ ಐಶ್ವರ್ಯಾ ನಂತರ ಬಾಲಿವುಡ್‌ಗೆ ಮರಳಿದ್ದರು. ‘ನನಗೆ ಹಿಂದಿ ಸಿನಿಮಾಗಳಲ್ಲಿ ನಟಿಸುವುದು ಖುಷಿ ಎನಿಸುತ್ತಿತ್ತು. ಹಾಗಾಗಿ ನಾನಗೆ ಇಂಗ್ಲಿಷ್‌ ಸಿನಿಮಾಗಳಿಗಾಗಿ ನನ್ನ ಸಂತೋಷವನ್ನು ಕಳೆದುಕೊಳ್ಳಲು ಇಷ್ಟವಾಗಲಿಲ್ಲ’ ಎನ್ನುವ ಮೂಲಕ ಮೂಲಕ ತಮ್ಮ ಬಾಲಿವುಡ್ ಪ್ರೀತಿಯನ್ನು ಹೊರಹಾಕಿದ್ದಾರೆ.

ಐಶ್ವರ್ಯಾ ಅವರು ‘ಪ್ರೈಡ್ ಅಂಡ್ ಪ್ರಿಜುಡೀಸ್’, ‘ಪಿಂಕ್ ಪ್ಯಾಂಥರ್2’, ‘ದಿ ಮಿಸ್ಟ್ರೆಸ್ ಆಫ್ ಸ್ಪೈಸಸ್’, ‘ದಿ ಲಾಸ್ಟ್‌ ಲೀಗನ್’ ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿದ್ದರು. ಆ ನಂತರವೂ ಹಾಲಿವುಡ್‌ನಿಂದ ಅವಕಾಶಗಳು ಬಂದರೂ ಸಹ ಐಶ್ವರ್ಯಾ ಬಾಲಿವುಡ್ ಸಿನಿಮಾಗಳಿಗಾಗಿ ಅವುಗಳನ್ನು ನಿರಾಕರಿಸಿದ್ದರು.

ADVERTISEMENT

ಎರಡು ದಶಕದಿಂದಲೂ ಸಿನಿಮಾರಂಗದಲ್ಲಿರುವ ಐಶ್ವರ್ಯಾ ಈಗಲೂ ಬೇಡಿಕೆಯ ನಟಿಯಾಗಿಯೇ ಇದ್ದಾರೆ. 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಐಶ್ವರ್ಯಾ ನಟನೆಯನ್ನು ಎಂದಿಗೂ ಬಿಡುವುದಿಲ್ಲ ಎಂದಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.