ADVERTISEMENT

ಪರಿಣೀತಿಗೆ ಸಂಗೀತ ಗುರು ಅಕ್ಕ ಪಿಗ್ಗಿ!

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 19:30 IST
Last Updated 19 ಏಪ್ರಿಲ್ 2017, 19:30 IST
ಪರಿಣೀತಿ ಛೋಪ್ರಾ
ಪರಿಣೀತಿ ಛೋಪ್ರಾ   

ತಮ್ಮದೇ ಚಿತ್ರ ‘ಮೇರಿ ಪ್ಯಾರಿ ಬಿಂದು’ವಿನಲ್ಲಿ ಹಾಡಿರುವ ನಟಿ ಪರಿಣೀತಿ ಛೋಪ್ರಾ ಬಾಲ್ಯದಲ್ಲಿ ತನಗೆ ಹಾಡು ಹೇಳಿಕೊಡುತ್ತಿದ್ದ ಅಕ್ಕ ಪ್ರಿಯಾಂಕಾ ಛೋಪ್ರಾ ಅವರನ್ನು ನೆನೆಪಿಸಿಕೊಂಡಿದ್ದಾರೆ.

‘ಅಮೆರಿಕದಿಂದ ವಾಪಸಾದ ಮೇಲೆ ಪ್ರಿಯಾಂಕಾ ಛೋಪ್ರಾ ನನಗೆ ಇಂಗ್ಲೀಷ್‌ ಹಾಡು ಹೇಳಿಕೊಡುತ್ತಿದ್ದಳು. ಆಕೆ ನಿರರ್ಗಳವಾಗಿ ಇಂಗ್ಲಿಷ್‌ ಹಾಡುಗಳನ್ನು ಹೇಳುವುದನ್ನು ಕೇಳಿ ನಾವು ಆಶ್ಚರ್ಯ ಪಡುತ್ತಿದ್ದೆವು’ ಎಂದು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ. ‘ನಾನು ಸಿನಿಮಾಕ್ಕಾಗಿ ಹಾಡುವ ನಿರ್ಣಯ ಮಾಡಿದಾಗ ಆಕೆಯೇ ಮೊದಲು ನನ್ನನ್ನು ಅಭಿನಂದಿಸಿದ್ದು’ ಎಂದು ಅವರು ಹೇಳಿದ್ದಾರೆ.

ಮೊದಲ ಬಾರಿಗೆ ಚಿತ್ರಕ್ಕೆ ಹಾಡಿರುವ ಪರಿಣೀತಿಗೆ ಅವರ ತಂದೆ ಸ್ಫೂರ್ತಿಯಂತೆ. ಈಗಲೂ ಅವರ ತಂದೆ ಹಾರ್ಮೋನಿಯಂನೊಂದಿಗೆ ಕೂತು ಸಂಗೀತ ಅಭ್ಯಾಸ ಮಾಡಿಸುತ್ತಾರಂತೆ. ‘ನನಗೆ ಅಭಿನಯದಷ್ಟೆ ಹಾಡುವುದೂ ಇಷ್ಟ. ಹಾಡುವುದನ್ನು ಹೀಗೆಯೇ ಮುಂದುವರೆಸಲಿದ್ದೇನೆ’ ಎನ್ನುತ್ತಾರೆ ಪರಿಣಿತಿ. ‘ಮೇರಿ ಪ್ಯಾರಿ ಬಿಂದು’ ಚಿತ್ರ ಮೇ 12ಕ್ಕೆ ಬಿಡುಗಡೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT