ADVERTISEMENT

ಫೇಸ್‌ಬುಕ್‌ ತುಂಬ ಬುಕ್ಕಿನ ಮಾತು

ಪುಸ್ತಕಗಳಿಗೆ ಜೀವ ಬಂದ ಘಳಿಗೆ...!

ಮಂಜುಶ್ರೀ ಎಂ.ಕಡಕೋಳ
Published 25 ಏಪ್ರಿಲ್ 2018, 4:48 IST
Last Updated 25 ಏಪ್ರಿಲ್ 2018, 4:48 IST
ಫೇಸ್‌ಬುಕ್‌ ತುಂಬ ಬುಕ್ಕಿನ ಮಾತು
ಫೇಸ್‌ಬುಕ್‌ ತುಂಬ ಬುಕ್ಕಿನ ಮಾತು

‘ದೇಶ ಸುತ್ತು, ಕೋಶ ಓದು’ ಅನ್ನೋದು ಗಾದೆಮಾತು. ಫೇಸ್‌ಬುಕ್, ವಾಟ್ಸ್ಯಾಪ್, ಟ್ವಿಟರ್, ಇನ್‌ಸ್ಟಾಗ್ರಾಂ ಕಾಲದಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗಿದೆ ಎಂಬುದು ಬಹುತೇಕರ ದೂರು. ಆದರೆ, ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನಾಚರಣೆ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪುಸ್ತಕ ಪ್ರಿಯರು ಸದ್ದಿಲ್ಲದೇ ದೊಡ್ಡಮಟ್ಟದ ಅಭಿಯಾನವನ್ನೇ ನಡೆಸಿದರು.

#ವಿಶ್ವಪುಸ್ತಕದಿನ, #ಹ್ಯಾಪಿರೀಡಿಂಗ್ ಹ್ಯಾಷ್‌ಟ್ಯಾಗ್ ಬಳಸಿ ತಮ್ಮಿಷ್ಟದ ಪುಸ್ತಕ, ತಮ್ಮನೆಯ ಗ್ರಂಥಾಲಯ, ತಮ್ಮ ಸಂಗ್ರಹದ ಪುಸ್ತಕಗಳ ಚಿತ್ರಗಳನ್ನು ಹಾಕಿ ಸಂಭ್ರಮಿಸಿದರು. ಕೆಲವರು ತಾವು ಈಗ ಓದುತ್ತಿರುವ ಪುಸ್ತಕಗಳನ್ನು ಉಲ್ಲೇಖಿಸಿ ಪುಟ್ಟ ಟಿಪ್ಪಣಿಗಳನ್ನು ಹಂಚಿಕೊಂಡರು. ಇನ್ನು ಪುಸ್ತಕ ಪ್ರಕಾಶಕರು ತಮ್ಮ ಪ್ರಕಾಶನದಲ್ಲಿರುವ ಪುಸ್ತಕಗಳ ಪಟ್ಟಿ ಸಹಿತ ಪುಸ್ತಕಗಳ ರಾಶಿಗಳನ್ನೇ ಕವರ್ ಪೇಜ್‌ನಲ್ಲಿ ಹಾಕಿಕೊಂಡರು. ಲೇಖಕರು ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಚಿತ್ರಗಳನ್ನು ನೆನಪಿಸಿಕೊಂಡರು.

ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದ ‘ಒಂದು ಜರಾಜೀರ್ಣ ಪುಸ್ತಕ’ ಬರಹವಂತೂ ಮುದ್ರಿತ ಬರಹಗಳ ನಿರ್ಗಮನ, ತಂತ್ರಜ್ಞಾನ ಕೋಶಗಳ ಆಗಮನ ಕುರಿತು ಸಣ್ಣ ವಿವರಣೆಯನ್ನೇ ನೀಡುವಂತಿದೆ. ಸಾವಿರ ಪುಟಗಳ ‘ಕರ್ನಾಟಕ ವಿಷಯ ವಿಶ್ವಕೋಶ’ದ ಕುರಿತ ಹಳೆಯ ನೆನಪುಗಳನ್ನು ಜತನವಾಗಿ ಕಟ್ಟಿಕೊಟ್ಟಿದ್ದಾರೆ ಅವರು. ‘ನಿನ್ನೆ ಹುಟ್ಟಿದ ಶಬ್ದವೊಂದು ಇಂದು ಆನ್ ಲೈನ್ ನಿಘಂಟಿಗೆ ಸೇರಿಬಿಡುತ್ತದೆ. ವಿಕಿಪಿಡಿಯಾ ಬಂದಿದೆ. ಗೂಗಲ್ ಭೂಪಟ ಬಂದಿವೆ. ನಾವು ನಡೆಯುತ್ತಿರುವ ರಸ್ತೆಯಲ್ಲಿ ಯಾವ ದಿಕ್ಕಿನಲ್ಲಿ ಎಷ್ಟುದೂರ ನಮಗೆ ಬೇಕಾದ ಜಾಗವಿದೆ ಎಂದು ಮೊಬೈಲಿನಲ್ಲೇ ಹಾದಿತೋರುಗರು ಇದ್ದಾರೆ. ಈ ಸೌಲಭ್ಯದಲ್ಲಿರುವ ತೊಡಕೆಂದರೆ, ಎಲೆಕ್ಟ್ರಾನಿಕ್ ಸಲಕರಣೆಗಳ ಮೂಲಕವೇ ಈ ಕೋಶಗಳ ಪ್ರಯೋಜನ ಪಡೆಯಬೇಕಿರುವುದು. ಹೀಗಾಗಿ ಮುದ್ರಿತ ಕೋಶಗಳ ಯುಗವಿನ್ನೂ ಮುಗಿದಿಲ್ಲ’ ಎನ್ನುವ ರಹಮತ್ ಅವರ ಆಶಾಭಾವ ಪುಸ್ತಕಗಳಿಗಿನ್ನೂ ಜೀವವಿದೆ ಎಂಬುದನ್ನು ಸಾರುವಂತಿದೆ.

ADVERTISEMENT

ರಹಮತ್ ಅವರ ಬರಹಕ್ಕೆ ಪ್ರತಿಕ್ರಿಯಿಸಿರುವ ಲೇಖಕಿ ಎಲ್.ಸಿ.ಸುಮಿತ್ರಾ ‘ನನ್ನ ಹತ್ತಿರವೂ ಈ ಪುಸ್ತಕ ಇದೆ...ಜೀರ್ಣಾವಸ್ಥೆಯಲ್ಲಿ’ (ಕರ್ನಾಟಕ ಕನ್ನಡ ವಿಷಯ ವಿಶ್ವಕೋಶ) ಎಂದು ಪುಸ್ತಕ ಮುಖಪುಟವನ್ನು ಶೇರ್ ಮಾಡಿಕೊಂಡಿದ್ದಾರೆ. ಪುಸ್ತಕವೊಂದು ಲೇಖಕರ ಆತ್ಮಸಂಗಾತಿಯಾಗಿ ನೆಲೆ ಕಂಡುಕೊಳ್ಳುವ ಸುಖವನ್ನು ಇಬ್ಬರೂ ನೆನಪಿಸಿಕೊಂಡಿದ್ದಾರೆ.

‘ನನ್ನ ಮನೆಯಲ್ಲಿ ಅಡುಗೆ ಮನೆ ಮತ್ತು ಬಚ್ಚಲು ಮನೆ ಹೊರತು ಪಡಿಸಿ ಉಳಿದೆಲ್ಲ ಕಡೆ‌ ಪುಸ್ತಕ ಮತ್ತು ದಸ್ತಾವೇಜುಗಳನ್ನು ಪೇರಿಸಿಟ್ಟಿದ್ದೇನೆ. ಒಂದಷ್ಟುಅಟ್ಟದ ಮೇಲೆ ಕಟ್ಟಿಟ್ಟಿದ್ದೇನೆ. ಎಲ್ಲವನ್ನೂ ಓದಿ‌ ಮುಗಿಸುವಷ್ಟು ನನ್ನಲ್ಲಿ ಆಯುಷ್ಯ ಇಲ್ಲ‌. ಆದರೂ ಪುಸ್ತಕ ಖರೀದಿಯ ದೌರ್ಬಲ್ಯ ಮೀರಲು ಸಾಧ್ಯವಾಗಿಲ್ಲ. ಈ ಓದುವ ಹುಚ್ಚು, ಮಗಳಿಗೂ ಸಾಂಕ್ರಾಮಿಕವಾಗಿ ಹತ್ತಿರುವ ಕಾರಣ ಪುಸ್ತಕ ರದ್ದಿಯಾಗಲಾರದು ಎಂಬ ಭರವಸೆ. ಆದರೆ ಪುಸ್ತಕ ಜೋಡಿಸಿಡುವ ಕಲೆ‌ ಕರಗತವಾಗಿಲ್ಲ. ಹೀಗಾಗಿ ಒಮ್ಮೊಮ್ಮೆ ಪುಸ್ತಕ ಅರ್ಜೆಂಟಾಗಿ ಬೇಕಾದಾಗ ಹುಡುಕಲು ಹೋಗುವುದಿಲ್ಲ, ಹೊಸ ಪುಸ್ತಕ ಖರೀದಿ‌ಸುತ್ತೇನೆ’ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಬರೆದುಕೊಂಡಿದ್ದಾರೆ. ತಮ್ಮ ಮನೆಯಲ್ಲಿರುವ ಪುಸ್ತಕ ಸಂಗ್ರಹಗಳ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

ಕವಯತ್ರಿ ರುಕ್ಮಿಣಿ ತಲ್ವಾಡ್ ‘ಸದ್ಯದ ಓದು...’ ಶೀರ್ಷಿಕೆಯಡಿ ಹಿರಿಯ ಪತ್ರಕರ್ತೆ ಡಾ.ವಿಜಯಾ ಅವರ ‘ಕುದಿ ಎಸರು’ ಪುಸ್ತಕ ಓದುತ್ತಾ ತಮ್ಮ ಮನದಲ್ಲಾದ ತಳಮಳಗಳನ್ನು ಭಾವುಕವಾಗಿ ಟಿಪ್ಪಣಿ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ‘ನಿನ್ನೆ ವಿಶ್ವ ಪುಸ್ತಕದ ದಿನ. ಹಾಗಾಗಿ ಹಂಚಿಕೊಳ್ಳುತ್ತಿದ್ದೇನೆ. ಎಲ್ಲರೂ ಓದಲೇಬೇಕಾದ, ಅದರಲ್ಲೂ ಗಂಡಸರು ಮತ್ತು ಗಂಡು ಮನಸ್ಥಿತಿಯ ಹೆಂಗಸರು ಪ್ರಮುಖವಾಗಿ ಓದಬೇಕಾದ ಪುಸ್ತಕ. ಇದು ಓದುಗರನ್ನು ಸಂವೇದನೆಗೆ ನೂಕುವ ಪುಸ್ತಕ. ಓದು ತಿಳಿವಳಿಕೆಯನ್ನು ನೀಡುತ್ತದೆ ಅಷ್ಟೇ. ಆದರೆ ಸಂವೇದನೆ, ಅರಿವನ್ನು ಹುಟ್ಟಿಸುತ್ತದೆ. ಅರಿವು ಮನುಷ್ಯತ್ವದೆಡೆಗೆ ಕೊಂಡೊಯ್ಯುತ್ತದೆ’ ಎಂದು ಆಪ್ತವಾಗಿ ಬರೆದುಕೊಂಡಿದ್ದಾರೆ.

ವಿದ್ಯಾರ್ಥಿನಿ ರಾಜೇಶ್ವರಿ ಲಕ್ಕಣ್ಣನವರ್ ತಮ್ಮ ಪುಸ್ತಕ ಪ್ರೀತಿಯ ಕುರಿತು ಹೇಳಿಕೊಳ್ಳುತ್ತಾ ‘ನಿಮಗೆ ತುಂಬಾ ಇಷ್ಟವಾದ ಪುಸ್ತಕ’ ದ ಬಗ್ಗೆ ಹೇಳಿ ಎಂದು ಓದುಗರಿಗೆ ಕೊಟ್ಟ ಕರೆಗೆ ಪ್ರತಿಕ್ರಿಯಿಸಿರುವ ಸ್ನೇಹಿತರೊಬ್ಬರು, ಕುಮಾರ ವ್ಯಾಸ ಮಹಾಕವಿಯ ‘ಕರ್ಣಾಟ ಭಾರತ ಕಥಾಮಂಜರಿ’ ಪುಸ್ತಕ ಮುಖಪುಟವನ್ನು ಹಾಕಿದ್ದಾರೆ.

‘ಪುಸ್ತಕಗಳ ನಡುವೆಯೇ ಕುಳಿತು ಕೆಲಸ ಮಾಡುವ ನನಗೆ ಪುಸ್ತಕ ನೋಡಲಷ್ಟೇ ಸಮಯ ಸಿಗೋದು..ವಿಶ್ವ ಪುಸ್ತಕ ದಿನಾಚರಣೆಗೆ ನನ್ನದೂ ಒಂದು ಓದಿನ ನಾಟಕ..(‘ಆರನೇ ಹೆಂಡತಿಯ ಆತ್ಮಕಥೆ’ ಪುಸ್ತಕ ಓದಿ ಬಿಟ್ಟಿದ್ದೇನೆ) ಎಂದು ಸಾಮಾಜಿಕ ಕಾರ್ಯಕರ್ತೆ ಗುಲಾಬಿ ಬಿಳಿಮನೆ ಪುಸ್ತಕ ದಿನಕ್ಕೆ ತಮ್ಮ ಟಿಪ್ಪಣಿ ಸೇರಿಸಿದ್ದಾರೆ.

ಲೇಖಕ ರಾಜೇಂದ್ರ ಪ್ರಸಾದ್, ‘ವಿಶ್ವ ಪುಸ್ತಕ ದಿನ: ಒಂದು ಅಪರೂಪದ ಪುಸ್ತಕ’ ಶೀರ್ಷಿಕೆಯಡಿ ಕಲಾವಿದ ಎಲ್.ಎನ್. ತಲ್ಲೂರು ಅವರ ಕಲೆಯ ಕುರಿತು ಬಂದಿರುವ ಪುಸ್ತಕದ ಮುಖಪುಟ ಮತ್ತು ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ.

ಕವಯತ್ರಿ, ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ, ನಟ ಪ್ರಕಾಶ್ ರೈ ಮತ್ತು ತಾವು ಪುಸ್ತಕಗಳಿಗೆ ಹಸ್ತಾಕ್ಷರ ಹಾಕಿ ಉಡುಗೊರೆ ಕೊಡುವ ಸ್ಪರ್ಧೆಯ ಕುರಿತು ಹೇಳುತ್ತಲೇ ಆತ್ಮೀಯರಿಗೆ ಪುಸ್ತಕಗಳನ್ನೇ ಉಡುಗೊರೆಯಾಗಿ ಕೊಡಿ ಎಂದು ಪುಸ್ತಕದ ದಿನದ ಶುಭಾಶಯಗಳನ್ನು ಹೇಳಿದ್ದಾರೆ.

ಧಾರವಾಡದ ಶ್ರೀನಗರ ಕ್ರಾಸಿನ ‘ಶಬರಿ ದರ್ಶನಿ’ ಕೃಷ್ಣನಿಗೆ ನನ್ನ ಕವನ ಸಂಕಲನ ನೀಡುವ ಮೂಲಕ ಇಂದು ಪುಸ್ತಕ ದಿನಾಚರಣೆ ಆಚರಿಸಿ ಜನಸಾಮಾನ್ಯರೂ ಪುಸ್ತಕ ಓದುವಂತಾಗಲಿ ಅಂತ ಹಾರೈಸುವೆ. ನನ್ನ ಮೊದಲ ದುಡಿತದ ಸ್ಥಳ ಚಹದಂಗಡಿಯೇ ಆದ್ದರಿಂದ ನನ್ನ ಈ ಕೆಲಸ ಖುಷಿ ತಂದಿದೆ’ ಎಂದು ಲೇಖಕ ಕಡಮೆ ಪ್ರಕಾಶ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.