ಡಾಂಬರು ರಸ್ತೆಯ ಕ್ಯಾನ್ವಾಸೂ ರಂಗೋಲಿಗೆ ಚೆಂದ. ಬೆರಳುಗಳ ಸಂದಿಯಿಂದ ಹದವಾಗಿ ಹರಿಬಿಟ್ಟ ರಂಗೋಲಿ ಮೂಡಿಸಿದ್ದು ಏನೆಲ್ಲಾ... ಒಬ್ಬ ಹುಡುಗಿ ಪ್ರಕೃತಿಪ್ರೇಮಿ; ಎಲೆಗಳು, ಹೂಗಳೆಂದರೆ ಅವಳಿಗೆ ಇಷ್ಟ. ಇನ್ನೊಬ್ಬಳು ಬರೀ ಪ್ರೇಮಿ; ರಂಗೋಲಿಯಲ್ಲೂ ಹೃದಯಗಳ ಮೂಡಿಸುವುದು ಅವಳ ವೈಖರಿ.
ಅಂಚಿನಲ್ಲಿ ಕಮಲಗಳನ್ನು ಅರಳಿಸುವಾಗ ಅವಳ ಕಣ್ಣುಗಳಲ್ಲಿ ಸಾರ್ಥಕ್ಯ. ಹದವಾಗಿ ರಂಗೋಲಿ ಹಾಕಿದ್ದೇನೋ ಆಯಿತು; ಅದಕ್ಕೊಂದು ಚೌಕಟ್ಟು ಬೇಡವೇ? ವಾಹನ ಚಕ್ರಗಳ ಉರುಳಿಗೆ ಕನಗುವ ಡಾಂಬರು ರಸ್ತೆಗೆ ತಾತ್ಕಾಲಿಕವಾಗಿ ಕಲಾ ಕ್ಯಾನ್ವಾಸ್ ಆಗುವ ಭಾಗ್ಯ. ಹಬ್ಬಗಳ ಮೆರವಣಿಗೆಯ ಋತುಚಕ್ರ ನಗರದ ಆಧುನಿಕತೆಯಲ್ಲೂ ಹೇಗೆ ತಿರುಗುತ್ತಿದೆ, ನೋಡಿ.
ಚಿತ್ರ: ಐಜಾಜ್ ರಾಹಿ (ಪಿಟಿಐ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.