ADVERTISEMENT

‘ಸಾಹಿತ್ಯ ಸಂಜೆ’ಯಲ್ಲಿ ವೈ.ಸಿ.ಕಮಲಾ

​ಪ್ರಜಾವಾಣಿ ವಾರ್ತೆ
Published 24 ಜನವರಿ 2014, 19:30 IST
Last Updated 24 ಜನವರಿ 2014, 19:30 IST

ಸುಚಿತ್ರಾ ಸಿನಿಮಾ ಅಂಡ್‌ ಕಲ್ಚರಲ್‌ ಅಕಾಡೆಮಿಯ ಸಾಹಿತ್ಯ ಸಂಜೆ 25ನೇ ಸರಣಿಯಲ್ಲಿ ಈ ಶನಿವಾರ ನ್ಯಾಷನಲ್ ಕಾಲೇಜಿನ ಭೌತಶಾಸ್ತ್ರದ ಸಹ ಪ್ರಾಧ್ಯಾಪಕಿ ವೈ.ಸಿ. ಕಮಲಾ ಅವರಿಂದ ‘ನಮ್ಮ ನಡುವಿನ ವಿಜ್ಞಾನಿ ಡಾ. ಸಿ.ಎನ್.ಆರ್. ರಾವ್’ ಕುರಿತು ಉಪನ್ಯಾಸ.

ಕಾಲೇಜು ಶಿಕ್ಷಣ ನಿರ್ದೇಶನಾಲಯದಲ್ಲಿ ವಿಶೇಷ ಯೋಜನೆಗಳ ನೋಡಲ್ ಆಫೀಸರ್ ಆಗಿರುವ ಡಾ. ವೈ.ಸಿ. ಕಮಲಾ ೧೯೯೭ರಿಂದ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಸಹ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಹವ್ಯಾಸಿ ವಿಜ್ಞಾನ ಸಂವಹನಕಾರರೂ ಹೌದು.

ಭಾರತದಲ್ಲಿ ಆಧುನಿಕ ಭೌತಶಾಸ್ತ್ರದ ಬೆಳವಣಿಗೆಯ ಆರಂಭಿಕ ಹಂತ ೧೯೦೦-೧೯೩೦: ಒಂದು ವಿಶ್ಲೇಷಣೆ ಎಂಬ ಪ್ರೌಢಪ್ರಬಂಧವನ್ನು ಕನ್ನಡದಲ್ಲಿ ರಚಿಸಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಇವರ ಆಸಕ್ತಿಯ ಕ್ಷೇತ್ರಗಳು ಭೌತಶಾಸ್ತ್ರ, ಕನ್ನಡ ಸಾಹಿತ್ಯ ಮತ್ತು ವಿಜ್ಞಾನ ಸಂವಹನ. ಕಮಲಾರವರು ಹಲವಾರು ವರ್ಷಗಳ ಕಾಲ ನ್ಯಾಷನಲ್ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಬೆಂಗಳೂರು ವಿಜ್ಞಾನ ವೇದಿಕೆಯ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಜೊತೆಗೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಅನೇಕ ಕಾರ್ಯಕ್ರಮಗಳನ್ನು ಸಂಘಟನಾ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಸಂಘಟಿಸಿದ್ದಾರೆ. ಚಾರಣ ಇವರ ನೆಚ್ಚಿನ ಹವ್ಯಾಸಗಳಲ್ಲಿ ಒಂದು.

ಸ್ಥಳ: ಕಿ.ರಂ.ನುಡಿಮನೆ, ಸುಚಿತ್ರ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಟ್ರಸ್ಟ್, ನಂ. 36, ಬಿ.ವಿ. ಕಾರಂತರಸ್ತೆ, ಬನಶಂಕರಿ 2ನೇ ಹಂತ. 2671 1785 ಸಮಯ: ಸಂಜೆ 5.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.