ADVERTISEMENT

ಅಮಾನತ್ತಿಗೊಳಗಾದ ಐಎಎಸ್ ಅಧಿಕಾರಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 14:36 IST
Last Updated 30 ಸೆಪ್ಟೆಂಬರ್ 2014, 14:36 IST

ಅಹಮದಾಬಾದ್ (ಪಿಟಿಐ): ಯುವತಿ ಮೇಲಿನ ಕಣ್ಗಾವಲು ಪ್ರಕರಣದಲ್ಲಿ ನರೇಂದ್ರ ಮೋದಿ ಅವರನ್ನು ಎದುರು ಹಾಕಿಕೊಂಡಿದ್ದ ಅಮಾನತುಗೊಂಡಿರುವ ಐಎಎಸ್‌ ಅಧಿಕಾರಿ ಪ್ರದೀಪ್‌ ಶರ್ಮಾ ಅವರನ್ನು  ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತಿನ ಭ್ರಷ್ಟಾಚಾರ ನಿಗ್ರಹ ದಳದ  (ಎಸಿಬಿ) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ಹಣ ಲೇವಾದೇವಿ ಆರೋಪಗಳ ಸಂಬಂಧ ಶರ್ಮಾ ಅವರ ಆಸ್ತಿಯನ್ನು ಜಾರಿ ನಿರ್ದೇಶನಾಯ ಜಪ್ತಿ ಮಾಡಿದ ಒಂದು ದಿನದ ಬಳಿಕ ಅವರನ್ನು ಬಂಧಿಸಲಾಗಿದೆ.

‘ಸೋಮವಾರ ನಾವು ದಾಖಲಿಸಿದ ದೂರಿನನ್ವಯ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಶರ್ಮಾ ಅವರನ್ನು ಮಂಗಳವಾರ ಬಂಧಿಸಲಾಗಿದೆ. ವೆಲ್ಸ್‌ಪನ್‌ ಎಂಬ ಖಾಸಗಿ ಸಂಸ್ಥೆಯಿಂದ 29 ಲಕ್ಷ ರೂಪಾಯಿ ಲಂಚ ಪಡೆದ ಆರೋಪ ಅವರ ಮೇಲಿದೆ. ಹಣವನ್ನು ಮೊದಲು ಅವರ ಪತ್ನಿಯ ಖಾತೆಗೆ ಜಮೆ ಮಾಡಿ ಬಳಿಕ ಅದನ್ನು ಶರ್ಮಾ ಖಾತೆಗೆ ವರ್ಗಾಯಿಸಲಾಗಿತ್ತು’ ಎಂದು ಎಸಿಬಿ ಜಂಟಿ ನಿರ್ದೇಶಕ ಆಶೀಶ್‌ ಭಾಟಿಯಾ ತಿಳಿಸಿದ್ದಾರೆ.

ADVERTISEMENT

‘ಕಚ್‌ ಜಿಲ್ಲಾಧಿಕಾರಿಯಾಗಿದ್ದ ವೇಳೆ ಒಂದು ಕಂಪೆನಿಗೆ ಸವಲತ್ತುಗಳನ್ನು ಒದಗಿಸಲು ಲಂಚ ಪಡೆದ ಆರೋಪದ ಪ್ರಕರಣ ಇದಾಗಿದೆ’ ಎಂದೂ ಭಾಟಿಯಾ ತಿಳಿಸಿದ್ದಾರೆ.

ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 11, 13(1) (ಡಿ) ಹಾಗೂ 13 (2)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಸೋಮವಾರ ದಾಖಲಾದ ದೂರಿನ ಅನ್ವಯ ಮಂಗಳವಾರ ಬೆಳಿಗ್ಗೆ ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.