ADVERTISEMENT

ಆಸ್ಪತ್ರೆಯಿಂದ ಹೇಮಾಮಾಲಿನಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 6:45 IST
Last Updated 4 ಜುಲೈ 2015, 6:45 IST

ಜೈಪುರ (ಪಿಟಿಐ): ಇಲ್ಲಿಂದ 60 ಕಿ.ಮೀ. ದೂರದ ದೌಸಾ ಬಳಿಯ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಬಾಲಿವುಡ್‌ ನಟಿ,  ಬಿಜೆಪಿ ಸಂಸದೆ ಹೇಮಾಮಾಲಿನಿ (66) ಅವರು ಶನಿವಾರ ಬಿಡುಗಡೆಯಾಗಿದ್ದಾರೆ.

‘ಕುಟುಂಬ ಸದಸ್ಯರ ಮನವಿ ಮೇರೆಗೆ ಬೆಳಿಗ್ಗೆ ಸುಮಾರು 9.30ರ ವೇಳೆಗೆ ಹೇಮಾ ಮಾಲಿನಿ ಅವರನ್ನು ಬಿಡುಗಡೆಗೊಳಿಸಲಾಗಿದೆ’ ಎಂದು ಇಲ್ಲಿನ ಫೋರ್ಟೀಸ್ ಆಸ್ಪತ್ರೆಯ ವಕ್ತಾರರರೊಬ್ಬರು ತಿಳಿಸಿದ್ದಾರೆ.

ಅಪಘಾತದಲ್ಲಿ ಹೇಮಾ ಅವರ ಮೂಗಿನ ಮೂಳೆಗೆ ಚಿಕ್ಕ ಪ್ರಮಾಣದಲ್ಲಿ ಹಾನಿಯಾಗಿತ್ತು.ಆದ್ದರಿಂದ ಗುರುವಾರವಷ್ಟೇ ಹುಬ್ಬಿನ ಮೇಲಿನ ಹಣೆಯ ಭಾಗ ಮತ್ತು ಮೂಗಿನ ಭಾಗಕ್ಕೆ ಸುರೂಪ ಚಿಕಿತ್ಸೆ (ಪ್ಲಾಸ್ಟಿಕ್‌ ಸರ್ಜರಿ) ಮಾಡಲಾಗಿತ್ತು.

ADVERTISEMENT

ಹೇಮಾ ಅವರನ್ನು ಬಾಡಿಗೆ ವಿಮಾನದಲ್ಲಿ ಮುಂಬೈಗೆ ಕರೆದೊಯ್ಯಲಾಗಿದೆ.
ಹೇಮಾ ಅವರೊಂದಿಗೆ ಪುತ್ರಿ ಇಶಾ ಡಿಯೋಲ್ ಹಾಗೂ ಇಶಾ ಅವರ ಪತಿ ಭರತ್ ತಖ್ತಾನಿ ಅವರಿದ್ದರು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.