ADVERTISEMENT

‘ಎನ್‌ಡಿಟಿವಿ ಇಂಡಿಯಾ’ಗೆ ನಿರ್ಬಂಧ: ‘ದೇಶದಲ್ಲಿ ತುರ್ತು ಪರಿಸ್ಥಿತಿ ಸನ್ನಿವೇಶ’

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2016, 10:53 IST
Last Updated 4 ನವೆಂಬರ್ 2016, 10:53 IST
‘ಎನ್‌ಡಿಟಿವಿ ಇಂಡಿಯಾ’ಗೆ ನಿರ್ಬಂಧ: ‘ದೇಶದಲ್ಲಿ ತುರ್ತು ಪರಿಸ್ಥಿತಿ ಸನ್ನಿವೇಶ’
‘ಎನ್‌ಡಿಟಿವಿ ಇಂಡಿಯಾ’ಗೆ ನಿರ್ಬಂಧ: ‘ದೇಶದಲ್ಲಿ ತುರ್ತು ಪರಿಸ್ಥಿತಿ ಸನ್ನಿವೇಶ’   

ನವದೆಹಲಿ: ಕೇಂದ್ರ ಸರ್ಕಾರ ಹಿಂದಿಯ ಎನ್‌ಡಿಟಿವಿ ಇಂಡಿಯಾ  ಸುದ್ದಿ ವಾಹಿನಿ ಮೇಲೆ ನಿಷೇಧ  ಹೇರಿರುವುದು ದೇಶದಲ್ಲಿ ತುರ್ತು ಪರಿಸ್ಥಿತಿ ಸನ್ನಿವೇಶ ಮರುಕಳಿಸಿದಂತಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ತಿಳಿಸಿದ್ದಾರೆ.

ಪಠಾಣ್‌ ಕೋಟ್‌ ದಾಳಿಗೆ ಸಂಬಂಧಿಸಿದಂತೆ ಎನ್‌ಡಿಟಿವಿ ಇಂಡಿಯಾ  ಸುದ್ದಿ  ಪ್ರಸಾರ ಮಾಡಿದ್ದಕ್ಕೆ  ಆ ವಾಹಿನಿಯ ಮೇಲೆ ನಿಷೇಧ ಹೇರುವುದು ಸರಿಯಾದ ಕ್ರಮವಲ್ಲ ಎಂದು ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದ ಈ ನಡೆ ಪತ್ರಿಕಾ ಸ್ವಾತಂತ್ರ್ಯವನ್ನು ಹರಣ ಮಾಡಿದಂತಾಗಿದೆ ಎಂದು ಮಮತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.