ADVERTISEMENT

ಐಎನ್‌ಎಕ್ಸ್‌ ಮೀಡಿಯಾ ಹಗರಣ: ಸಿಬಿಐನಿಂದ ಕಾರ್ತಿ ಚಿದಂಬರಂ ಬಂಧನ

ಏಜೆನ್ಸೀಸ್
Published 28 ಫೆಬ್ರುವರಿ 2018, 11:03 IST
Last Updated 28 ಫೆಬ್ರುವರಿ 2018, 11:03 IST
ಕಾರ್ತಿ ಚಿದಂಬರಂ
ಕಾರ್ತಿ ಚಿದಂಬರಂ   

ಚೆನ್ನೈ: ಐಎನ್‌ಎಕ್ಸ್‌ ಮೀಡಿಯಾ ಸಂಸ್ಥೆಯಲ್ಲಿ ನಡೆದ ಅಕ್ರಮ ಹಣಕಾಸು ಚಟುವಟಿಕೆ ಆರೋಪದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.

ಲಂಡನ್‌ನಿಂದ ಬುಧವಾರ ಬೆಳಿಗ್ಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಾರ್ತಿ ಅವರನ್ನು ಬಂಧಿಸಲಾಗಿದೆ.

ಪಿ. ಚಿದಂಬರಂ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ, ಪೀಟರ್‌ ಮುಖರ್ಜಿ ಹಾಗೂ ಅವರ ಪತ್ನಿ ಇಂದ್ರಾಣಿ ಒಡೆತನದ ಐಎನ್‌ಎಕ್ಸ್‌ ಮಾಧ್ಯಮ ಸಮೂಹಕ್ಕೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯಿಂದ (ಎಫ್‌ಐಪಿಬಿ) ನಿರಾಕ್ಷೇಪಣಾ ಪತ್ರ ಕೊಡಿಸಿದ ಆರೋಪ ಕಾರ್ತಿ ಅವರ ಮೇಲಿದೆ.

ADVERTISEMENT

ಕಾರ್ತಿ ಅವರು ಐಎನ್‌ಎಕ್ಸ್‌ ಮಾಧ್ಯಮದ ಮೇಲೆ ‘ಪರೋಕ್ಷವಾಗಿ ನಿಯಂತ್ರಣ’ ಹೊಂದಿದ್ದರು. ಕಾರ್ತಿ ಜತೆಗೆ ಪಾಲುದಾರರಾಗಿರುವ ಭಾಸ್ಕರ್ ರಾಮನ್, ರವಿ ವಿಶ್ವನಾಥನ್ ಹಾಗೂ ಮೋಹನನ್ ರಾಕೇಶ್‌ ಅವರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿತ್ತು.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.