ADVERTISEMENT

ಐವರು ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 7:07 IST
Last Updated 17 ಫೆಬ್ರುವರಿ 2017, 7:07 IST
ಐವರು ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ
ಐವರು ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ   

ನವದೆಹಲಿ (ಪಿಟಿಐ): ಐವರು  ನ್ಯಾಯಮೂರ್ತಿಗಳು ಶುಕ್ರವಾರ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಸುಪ್ರೀಂಕೋರ್ಟಿನ ಲ್ಲಿರುವ ನ್ಯಾಯಮೂರ್ತಿಗಳ ಸಂಖ್ಯೆ 28ಕ್ಕೆ ಏರಿತು.

ನ್ಯಾಯಮೂರ್ತಿಗಳಾದ ಸುಸಂಜಯ್‌ ಕಿಷನ್‌ ಕೌಲ್‌, ನವೀನ್‌ ಸಿನ್ಹಾ, ಮೋಹನ್‌ ಎಂ ಶಾಂತನಗೌಡರ್‌, ದೀಪಕ್‌ ಗುಪ್ತಾ ಮತ್ತು ಎಸ್‌ ಅಬ್ದುಲ್‌ ನಝೀರ್‌  ಅವರಿಗೆ ಮುಖ್ಯ ನ್ಯಾಯಮೂರ್ತಿ ಜೆ ಎಸ್‌ ಖೇಹರ್‌  ಪ್ರಮಾಣ ವಚನ ಬೋಧಿಸಿದರು.

ಸುಪ್ರೀಂ ಕೋರ್ಟ್‌ನಲ್ಲಿ  ಪ್ರಸ್ತುತ ಗರಿಷ್ಠ ನ್ಯಾಯಮೂರ್ತಿಗಳ ಸಂಖ್ಯೆ 31 ಇದೆ. ಇನ್ನು ಮೂರು ನ್ಯಾಯಮೂರ್ತಿ ಸ್ಥಾನಗಳು ಖಾಲಿ ಉಳಿದಿವೆ.

ADVERTISEMENT

ಸುಪ್ರೀಂ ಕೋರ್ಟ್‌ನಲ್ಲಿನ ನ್ಯಾಯಮೂರ್ತಿಗಳ ಭರ್ತಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೆಲ ದಿನಗಳ ಹಿಂದಷ್ಟೆ ಅಂಕಿತ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.