ADVERTISEMENT

ಒಂದು ನಿಮಿಷದಲ್ಲಿ ಬರಿಗೈಯಿಂದ 124 ತೆಂಗಿನಕಾಯಿಗಳನ್ನು ಒಡೆದು ವಿಶ್ವದಾಖಲೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2017, 12:58 IST
Last Updated 24 ಫೆಬ್ರುವರಿ 2017, 12:58 IST
ಒಂದು ನಿಮಿಷದಲ್ಲಿ ಬರಿಗೈಯಿಂದ 124 ತೆಂಗಿನಕಾಯಿಗಳನ್ನು ಒಡೆದು ವಿಶ್ವದಾಖಲೆ
ಒಂದು ನಿಮಿಷದಲ್ಲಿ ಬರಿಗೈಯಿಂದ 124 ತೆಂಗಿನಕಾಯಿಗಳನ್ನು ಒಡೆದು ವಿಶ್ವದಾಖಲೆ   

ತಿರುವನಂತಪುರಂ: ಕೇರಳದ ತ್ರಿಶ್ಶೂರ್‍ ಜಿಲ್ಲೆಯಲ್ಲಿರುವ ಶೋಭಾ ಮಾಲ್‍ನಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಯುವಕನೊಬ್ಬ ಒಂದು ನಿಮಿಷದಲ್ಲಿ ಬರಿಗೈಯಿಂದ 124 ತೆಂಗಿನಕಾಯಿಗಳನ್ನು ಒಡೆದು ವಿಶ್ವದಾಖಲೆ ಮಾಡಿದ್ದಾನೆ.

ಕೇರಳ ರಸ್ತೆ ಸಾರಿಗೆ ಸಂಸ್ಥೆಯ ನೌಕರನಾಗಿರುವ ಪೂಂಜಾರ್ ನಿವಾಸಿ ಪಿ. ಡೊಮಿನಿಕ್ ಈ ಸಾಧನೆ ಮಾಡಿದ ಯುವಕ

ಈ ಹಿಂದೆ ಜರ್ಮನಿಯ ಮುಹಮ್ಮದ್ ಕಹರಿಮನೋವಿಕ್ ಎಂಬವರು ಒಂದು ನಿಮಿಷದಲ್ಲಿ 118 ತೆಂಗಿನಕಾಯಿಗಳನ್ನು ಒಡೆದು ದಾಖಲೆ ಸೃಷ್ಟಿಸಿದ್ದರು.

ADVERTISEMENT

ಇದೀಗ ಡೊಮಿನಿಕ್ ಆ ದಾಖಲೆಯನ್ನು ಮುರಿಯುವ ಮೂಲಕ ಗಿನ್ನಿಸ್  ದಾಖಲೆಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.