ADVERTISEMENT

ಕಲ್ಲಿದ್ದಲು ಹಗರಣ: ‘ಸಿಂಗ್‌ ತನಿಖೆಗೆ ಅನುಮತಿ ಇರಲಿಲ್ಲ’

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2014, 19:30 IST
Last Updated 25 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ಕಲ್ಲಿದ್ದಲು ಹಗ­ರ­ಣಕ್ಕೆ ಸಂಬಂಧಿಸಿದಂತೆ ಕಲ್ಲಿದ್ದಲು ಖಾತೆ­ಯನ್ನು ನಿರ್ವಹಿಸುತ್ತಿದ್ದ ಆಗಿನ ಪ್ರಧಾನಿ ಮನ­ಮೋಹನ್‌ ಸಿಂಗ್‌ ಅವರನ್ನು ತನಿ­ಖೆಗೆ ಒಳಪಡಿಸಲು ಅನುಮತಿ ಸಿಕ್ಕಿರಲಿಲ್ಲ ಎಂದು ಸಿಬಿಐ ಮಂಗಳವಾರ ವಿಶೇಷ ನ್ಯಾಯಾಲಯದಲ್ಲಿ ಹೇಳಿದೆ.

ಆಗ ಕಲ್ಲಿದ್ದಲು ಸಚಿವರಾಗಿದ್ದವರನ್ನು ತನಿ­­ಖೆಗೆ ಒಳಪಡಿಸುವ ಅಗತ್ಯವಿದೆ ಎಂದು ನಿಮಗೆ ಅನ್ನಿಸಲಿಲ್ಲವೇ? ಹಗರಣ ಸಂಬಂಧ ಸ್ಪಷ್ಟಚಿತ್ರಣ ಪಡೆಯಲು ಅವರ ಹೇಳಿಕೆ ಅಗತ್ಯ ಎಂದು ನಿಮಗೆ ಅನ್ನಿ­­ಸು­ವುದಿಲ್ಲವೇ?– ಎಂದು ಸಿಬಿಐ ನ್ಯಾಯಾ­ಧೀಶ ಭರತ್‌ ಪರಾಶರ್‌ ಅವರು ತನಿಖಾ ಸಂಸ್ಥೆಯ ಅಧಿಕಾರಿ­ಯನ್ನು ಕೇಳಿದರು.

ಹೆಸರಾಂತ ಉದ್ಯಮಿ ಕೆ.ಎಂ.ಬಿರ್ಲಾ, ಪ್ರಧಾನಿ ಕಚೇರಿಯ ಅಧಿಕಾರಿಗಳು, ಕಲ್ಲಿ­ದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಪಿ.ಸಿ.ಪಾರಖ್‌ ಅವರನ್ನು ತನಿಖೆಗೆ ಒಳಪಡಿಸಲಾಗಿತ್ತು. ಆದರೆ ಕಲ್ಲಿದ್ದಲು ಸಚಿವರ ಹೇಳಿಕೆ ಅಗತ್ಯವಿದೆ ಎಂದು ಅನ್ನಿಸಲಿರಲಿಲ್ಲ ಎಂದು ತನಿಖಾಧಿಕಾರಿ ಮಂಗಳವಾರ ವಿಚಾರಣೆ ವೇಳೆ ಸಮರ್ಥಿಸಿಕೊಂಡರು. ಇದೇ ವೇಳೆ, ಆಗ ಕಲ್ಲಿದ್ದಲು ಸಚಿವರಾಗಿದ್ದವರನ್ನು (ಮನಮೋಹನ್‌ ಸಿಂಗ್‌) ತನಿಖೆಗೆ ಒಳಪಡಿಸಲು ಅನು­ಮತಿ ಸಿಕ್ಕಿರಲಿಲ್ಲ ಎಂಬುದನ್ನೂ ಅವರು ನ್ಯಾಯಾ­ಲಯದ ಗಮನಕ್ಕೆ ತಂದರು.

ನ್ಯಾಯಾಲಯವು ಪ್ರಕರಣದ ತನಿಖಾ ದಿನಚರಿಯನ್ನು ತನ್ನ ಮುಂದೆ ಸಲ್ಲಿ­ಸುವಂತೆ ನಿರ್ದೇಶನ ನೀಡಿತು. ಆಗ ಹಿರಿಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿ.ಕೆ.­ಶರ್ಮ ಅವರು ಈ ಸಂಬಂಧದ ದಾಖಲೆ­ಗ­­ಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿ­ಸಲು ಅನುಮತಿ ಕೋರಿದರು. ನ್ಯಾಯಾ­ಲಯ ಈ ಮನವಿಗೆ ಒಪ್ಪಿಗೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT